Advertisement

ಶಕಲಕ ಬೂಮ್ ಬೂಮ್ ತುಳು ಚಿತ್ರದ ಟ್ರೈಲರ್ ಗೆ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರತಿಕ್ರಿಯೆ

05:00 PM Jan 12, 2023 | Team Udayavani |

ಮಂಗಳೂರು: ಯುಎನ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ “ಶಕಲಕ ಬೂಮ್ ಬೂಮ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರತಂಡ ಮೂರು ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿರುವ ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡತೊಡಗಿದೆ.

Advertisement

ಇದನ್ನೂ ಓದಿ:ಕೋಲ್ಕತ್ತಾದಲ್ಲಿ ಕುಲದೀಪ್-ಸಿರಾಜ್ ಬಿಗುದಾಳಿ: 215ಕ್ಕೆ ಗಂಟುಮೂಟೆ ಕಟ್ಟಿದ ಲಂಕಾ

ಜನವರಿ 20ರಂದು ಚಿತ್ರ ಬಿಡುಗಡೆಯಾಗಲಿದ್ದು, ಇದೀಗ ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರದ ಟ್ರೈಲರ್ ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದೂ, ಯೂಟ್ಯೂಬ್ ನಲ್ಲೂ ಭರ್ಜರಿ ಗಮನ ಸೆಳೆದಿದೆ.

ಶಕಲಕ ಬೂಮ್ ಬೂಮ್ ಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶಿಸಿದ್ದಾರೆ. ಡಾಲ್ವಿನ್ ಕೊಳಲಗಿರಿ ಸಂಗೀತ ಚಿತ್ರಕ್ಕಿದೆ. ತುಳುನಾಡಿನ ಖ್ಯಾತ ಛಾಯಾಗ್ರಾಹಕರಾದ ಪ್ರಜ್ಞಲ್ ಸುವರ್ಣ ಮತ್ತು ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದೆ.

ಸಿನಿಮಾದ ಮುಖ್ಯಭೂಮಿಕೆಯಲ್ಲಿ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ, ನಾಯಕ ನಟನಾಗಿ ಗಾಡ್ವಿನ್ ಸ್ಪಾರ್ಕಲ್, ಹೀರೋಯಿನ್ ಆಗಿ ಲಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ, ಮನೋಹರ್ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಕಿಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಜ್, ಶಿವಾನಂದ, ಯಜ್ಞೇಶ್ ಶೆಟ್ಟಿ ಅಭಿನಯಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next