Advertisement

ಸಂಚಾರಿ ನಿಯಮ ಪಾಲನೆ ಕಡ್ಡಾಯ

08:36 AM May 27, 2019 | Team Udayavani |

ನರೇಗಲ್ಲ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸಂಚಾರಿ ಸುರಕ್ಷಾ ಸಪ್ತಾಹ ಅಡಿಯಲ್ಲಿ ರವಿವಾರ ವಿಶೇಷ ಕಾರ್ಯಾಚರಣೆ ನಡೆಸಿ ಆಟೋಗಳ ದಾಖಲೆಗಳನ್ನು ನರಗುಂದ ಡಿವೈಎಸ್‌ಪಿ ಎಸ್‌.ಎ. ಪಾಟೀಲ ಪರಿಶೀಲಿಸಿದರು.

Advertisement

ನಂತರ ಮಾಡಿನಾಡಿದ ಅವರು, ಪಟ್ಟಣ ಸೇರಿದಂತೆ ಅಬ್ಬಿಗೇರಿ, ಜಕ್ಕಲಿ, ಮಾರನಬಸರಿ, ಬೂದಿಹಾಳ, ಹೊಸಳ್ಳಿ, ನಿಡಗುಂದಿ, ಹಾಲಕೆರೆ, ಗುಜಮಾಗಡಿ, ಯರೇಬೇಲೇರಿ, ಕುರಡಗಿ, ನಾಗರಾಳ, ಡ.ಸ. ಹಡಗಲಿ, ಕಳಕಾಪೂರ ಗ್ರಾಮಗಳಲ್ಲಿ 400ಕ್ಕೂ ಹೆಚ್ಚು ಆಟೋಗಳು ಹಾಗೂ ಚಾಲಕರು ಇದ್ದಾರೆ. ಚಾಲಕರು ತಮ್ಮ ಆಟೋಗಳಲ್ಲಿಯೇ ದಾಖಲಾತಿಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಇದರಿಂದ ತಪಾಸಣೆ ವೇಳೆ ಅನುಕೂಲವಾಗುತ್ತದೆ. ಆಟೋ ಚಾಲಕರು ರಸ್ತೆ ಸುರಕ್ಷತೆ ನಿಯಮ ಪಾಲನೆ ಕಡ್ಡಾಯವಾಗಿ ಮಾಡಬೇಕು. ವಾಹನ ಚಾಲಕರು ತಮ್ಮ ಪರವಾನಗಿ, ಇನ್ಸುರೆನ್ಸ್‌, ಮಾಲೀಕತ್ವ ಪತ್ರ, ಆರ್‌ಸಿ ಬುಕ್‌, ಮಾಲಿನ್ಯ ನಿಯಂತ್ರಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು. ಇದು ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಅಲ್ಲದೇ ವಾಹನ ಚಾಲಕರು ಖಾಕಿ ಬಟ್ಟೆ ಧರಿಸದೇ ಬೇಜವಾಬ್ದಾರಿ ತೋರುತ್ತಿದ್ದಾರೆ. ಇದು ಸರಿಯಲ್ಲ. ಪಟ್ಟಣದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಆಟೋಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಅವುಗಳನ್ನು ನೋಂದಣಿ ಮಾಡಿ. ಯೂನಿಕ್‌ ನಂಬರ್‌ ನೀಡಲಾಗುವುದು. ಇದರಿಂದ ರಸ್ತೆ ಸುರಕ್ಷತೆಗೆ ಅನುಕೂಲವಾಗಲಿದೆ ಎಂದರು. ರೋಣ ಸಿಪಿಐ ಮಂಜುನಾಥ ನಡುವಿನಮನಿ ಮಾತನಾಡಿ, ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಆಟೋಗಳಲ್ಲಿ ಅಕ್ರಮ ಮದ್ಯವನ್ನಿಟ್ಟು ಹಳ್ಳಿಗಳಿಗೆ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಗಂಭೀರವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಈ ರೀತಿ ಮಾಡಿದ್ದೇ ಆದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಆಟೋ ಸೀಜ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಿಎಸ್‌ಐ ರಾಜೇಶ ಬಟಕುರ್ಕಿ, ಎಎಸ್‌ಐ ಆರ್‌.ಎನ್‌. ರುದ್ರಪ್ಪನವರ, ಪೆದೆಗಳಾದ ಬಸವರಾಜ ಮುಳಗುಂದ, ಮಂಜುನಾಥ ಮುಳಗುಂದ, ಮಂಜುನಾಥ ಬಂಡಿವಡ್ಡರ, ಎಸ್‌.ಬಿ. ಗೂಳಪ್ಪನವರ, ಹನಮಂತ ಡಂಬಳ, ವಿ.ಡಿ. ಪಾಟೀಲ, ಪಿ.ಎ. ಇಂಗಳೆ, ಬಿ.ಎ. ಸವದತ್ತಿ, ಆನಂದ ಮಾದರ ಸೇರಿದಂತೆ ಆಟೋ ಚಾಲಕರು ಹಾಗೂ ಮಾಲೀಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next