Advertisement

ನ.26ಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾ.ಹೆ ಸಂಚಾರ ಬಂದ್‌

11:08 AM Nov 13, 2021 | Team Udayavani |

ದೇವನಹಳ್ಳಿ: “ಒಂದು ವರ್ಷದಿಂದ ದೆಹಲಿ ಹೊರಗೆ ಹೋರಾಟ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ರೈತರ ಹೋರಾಟಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದಲ್ಲಿನ ರೈತರ ಉಳಿವಿಗಿಂತ ಕಾರ್ಪೋ ರೇಟ್‌ ಕಂಪನಿಗಳನ್ನು ಉದ್ಧಾರ ಮಾಡಿ, ಕೈಗಾರಿಕೆ ಗಳಿಗೆ ಹೆಚ್ಚು ಶಕ್ತಿ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ದೂರಿದರು.

Advertisement

ಇದನ್ನೂ ಓದಿ:- ‘ಫಸ್ಟ್ ನೈಟ್’ ಹೇಳಿಕೆ: ರಚಿತಾ ರಾಮ್ ಮೇಲೆ ನಿಷೇಧ ಹೇರಲು ಕ್ರಾಂತಿ ದಳ ಕೋರಿಕೆ

ಪಟ್ಟಣದ ಗುರುಭವನದಲ್ಲಿ ನ.26ರ ವರ್ಷಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರೈತ ವಿರೋಧಿ ಕೃಷಿ ಕಾಯಿದೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ, ಸತತವಾಗಿ ಒಂದು ವರ್ಷದಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ಕಿಂಚಿತ್ತೂ ಗಮನ ನೀಡಿಲ್ಲ. ಹೀಗಾಗಿ ನ.26 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಲಾಗುತ್ತದೆ ಎಂದು ಹೇಳಿದರು.

ಹಿಟ್ಲರ್‌ ಸಂಸ್ಕೃತಿ: ದಲಿತ ಮುಖಂಡ ಕಾರಹಳ್ಳಿ ಶ್ರೀನಿ ವಾಸ್‌ ಮಾತನಾಡಿ, ರೈತರಿಗೆ ಪರಿಹಾರವಾಗಿ ವಾರ್ಷಿಕ 6 ಸಾವಿರ ಖಾತೆಗಳಿಗೆ ಜಮೆ ಮಾಡಿ, ರಸ ಗೊಬ್ಬರಗಳ ದರ ಏರಿಕೆ ಮಾಡಿ, ಅದನ್ನು ಚಕ್ರಬಡ್ಡಿ ಸಮೇತ ವಸೂಲಿ ಮಾಡಲಾಗಿದೆ. ಸರ್ಕಾರದ ಈ ಧೋರಣೆ ವಿರುದ್ಧ ನಾವು ಧ್ವನಿಯೆತ್ತಲೇ ಬೇಕಾಗಿದೆ. ಅಧಿಕಾರ ಚಲಾಯಿಸುತ್ತಿರುವ ಕೇಂದ್ರ ಸರ್ಕಾರ, ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ವಿಫ‌ಲವಾಗಿದೆ.

ಅಲ್ಲದೇ, ರೈತರು ಸಂಕಷ್ಟದಲ್ಲಿರುವಾಗ ಕನಿಷ್ಠ ಅವರ ಕಷ್ಟ-ಸುಖ ಅರಿಯದೇ ದೇಶದಲ್ಲಿ ಹಿಟ್ಲರ್‌ ಸಂಸ್ಕೃತಿ ಸ್ಥಾಪನೆ ಮಾಡುತ್ತಿದೆ ಎಂದು ದೂರಿದರು. ಚುನಾವಣೆಗಳು ಬಂದಾಗ ಮಾತ್ರ, ರೈತರು ದೇಶದ ಬೆನ್ನೆಲುಬಾಗುತ್ತಾರೆ. ಚುನಾವಣೆಗಳು ಮುಗಿಯುತ್ತಿದ್ದಂತೆ ಸರ್ಕಾರಗಳು ರೈತರನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆ ಎಂದರು.

Advertisement

ಅರ್ಥ ಮಾಡಿಸಬೇಕು:ರೈತ ಮುಖಂಡ ಲಕ್ಷ್ಮೀ ನಾರಾಯಣ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ತನಕ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಪ್ರತಿಭಟನೆ ಸಮಯದಲ್ಲಿ 750 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಆದರೂ, ಮೃತಪಟ್ಟ ರೈತರಿಗೆ ಕೇಂದ್ರ ಸರ್ಕಾರ ಕನಿಷ್ಠ ಸಂತಾಪ ಹೇಳಿಲ್ಲ.

ನಾವು ಸರ್ಕಾರದ ರೈತ ವಿರೋಧಿ ನೀತಿಗೆ ತಕ್ಕ ಪಾಠ ಕಲಿಸಬೇಕು, ರೈತರು ತಿರುಗಿಬಿದ್ದರೆ ಪರಿಣಾಮ ಹೇಗಿರಲಿದೆ ಎನ್ನುವುದನ್ನು ಅವರಿಗೆ ಅರ್ಥ ಮಾಡಿಸಬೇಕು ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿÇÉಾ ಅಧ್ಯಕ್ಷ ವೀರಣ್ಣ ಮಾತನಾಡಿ, ಕೃಷಿಗೆ ಪೂರಕ ಕಾಯಿದೆ ಒಪ್ಪಿಕೊಳ್ಳಬೇಕಾಗಿರುವುದು ರೈತರು, ಭೂಮಿಯಲ್ಲಿ ಕಷ್ಟಪಟ್ಟು ಬೆಳೆಯುವ ರೈತರ ಶ್ರಮವನ್ನು ಸರ್ಕಾ ರಗಳು ಗೌರವಿಸುತ್ತಿಲ್ಲ, ರೈತರ ಬೆವರಿನ ಹನಿಗಳಿಗೆ ಬೆಲೆ ಸಿಗುತ್ತಿಲ್ಲ, ರೈತರ ಬೆವರಿನ ಹನಿಗಳಲ್ಲಿ ಕೇಂದ್ರ ಸರ್ಕಾರದ ನಾಯಕರು ಹೋಳಿ ಆಡುತ್ತಾರೆ.

ರೈತರು ಇಂದು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರೂ ಪ್ರಧಾನಿ ನರೇಂದ್ರಮೋದಿ ಅವರಿಗೆ ರೈತರೊಂದಿಗೆ ಮಾತನಾಡಲಿಕ್ಕೂ ಬಿಡುವಿಲ್ಲ. ಇಂತಹ ರೈತ ವಿರೋಧಿ ಪ್ರಧಾನಿ ವಿರುದ್ಧ ಎಲ್ಲರೂ ಧ್ವನಿಯೆತ್ತಬೇಕು ಎಂದರು. ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಪ್ರಗತಿ ಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಬಿ.ಕೆ.ಶಿವಪ್ಪ, ಜಿಲ್ಲೆಯ ವಿವಿಧ ರೈತಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next