Advertisement

ಅಂತೂ ಬದುಕುಳಿಯಿತು ವಿಶ್ವದ ಅತಿ ಕಡಿಮೆ ತೂಕದ ಶಿಶು!

08:53 PM Aug 09, 2021 | Team Udayavani |

ಸಿಂಗಾಪುರ: 13 ತಿಂಗಳ ಹಿಂದೆ ಜನಿಸಿದ್ದ ವಿಶ್ವದ ಅತಿ ಕಡಿಮೆ ತೂಕದ ಶಿಶು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಕ್ವೆಕ್‌ ಯು ಕ್ಸುಯಾನ್‌ ಹೆಸರಿನ ಮಗು ಸಿಂಗಾಪುರದ ನ್ಯಾಷನಲ್‌ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಜೂನ್‌ 9ರಂದು ಜನಿಸಿತ್ತು. ಆ ವೇಳೆ ಮಗು ಕೇವಲ 212 ಗ್ರಾಂ ಅಂದರೆ ಒಂದು ಆ್ಯಪಲ್‌ ನಷ್ಟು ತೂಕವಿದ್ದು, ಇಡೀ ವಿಶ್ವದಲ್ಲೆ ದಾಖಲೆ ಬರೆದಿತ್ತು.

Advertisement

ಕ್ವೆಕ್‌ ತಾಯಿ 7 ತಿಂಗಳ ಗರ್ಭಿಣಿ (25 ವಾರಗಳು) ಆಗಿದ್ದಾಗಲೇ ಮಗು ಜನಿಸಿತ್ತು. ಹೆರಿಗೆಯಾದ ತಕ್ಷಣವೇ ಮಗುವನ್ನು ಐಸಿಯುಗೆ ದಾಖಲಿ ಸಲಾಗಿದ್ದು, ಅಲ್ಲಿಂದ ಬರೋಬ್ಬರಿ 13 ತಿಂಗಳುಗಳ ಕಾಲ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿದೆ.

ಕೇವಲ 24 ಸೆಂ.ಮೀ ಉದ್ದವಿದ್ದ ಮಗುವಿನ ಚರ್ಮಕ್ಕೆ ಬ್ಯಾಂಡೆಡ್‌ ಹಾಕುವುದರಿಂದ ಹಿಡಿದು, ಡೈಪರ್‌ ಹಾಕುವವರೆಗೆ ಎಲ್ಲವೂ ಒಂದು ಸಾಹಸವಾಗಿತ್ತು ಎನ್ನುತ್ತಾರೆ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿ. ಇದೀಗ ಮಗು 6.3 ಕೆಜಿ ತೂಕವಾಗಿದೆ.

ಇದನ್ನೂ ಓದಿ:ಖಾದ್ಯ ತೈಲ ಕ್ಷೇತ್ರದಲ್ಲೂ ದೇಶ ಸ್ವಾವಲಂಬಿಯಾಗಬೇಕು : ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ

ಆಕೆಯ ಪೋಷಕರಿಗೆ ಕೆಲ ವೈದ್ಯಕೀಯ ಸಲಕರಣೆಗಳ ಬಳಕೆಯ ಬಗ್ಗೆ ತರಬೇತಿ ನೀಡಲಾಗಿದ್ದು, ಮನೆಯಲ್ಲಿ ಚಿಕಿತ್ಸೆ ಮುಂದುವರಿಸುವುದಾಗಿ ತಿಳಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next