Advertisement

ಅಳ್ವೆಗದ್ದೆ ಸೀವಾಕ್‌ ಯೋಜನೆ ಸಾಕಾರಕ್ಕೆ ಕೂಡಿ ಬಂದಿದೆ ಸಕಾಲ

03:42 PM Jun 02, 2023 | Team Udayavani |

ಬೈಂದೂರು: ಕಳೆದ ಹಲವು ದಿನಗಳ ನಿರೀಕ್ಷೆಯ ರಾಜಕೀಯ ಚಟುವಟಿಕೆ ಬಹುತೇಕ ಅಂತಿಮಗೊಂಡು ಹೊಸ ಸರಕಾರ ಅಧಿಕಾರಕ್ಕೆ ಬಂದಿದೆ. ಚುನಾವಣೆಯ ತರಾತುರಿಯಲ್ಲಿ ನನೆಗುದಿಗೆ ಬಿದ್ದಿರುವ ನೂರಾರು ಯೋಜನೆಗಳ ಜತೆಗೆ ಅಭಿವೃದ್ದಿ ಕಾರ್ಯಕ್ಕೆ ಆರಂಭ ನೀಡಲು ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕಾಗಿದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿಭಾಗವಾದ ಶಿರೂರು ಅಳ್ವೆಗದ್ದೆಯಲ್ಲಿ ಬಹುನಿರೀಕ್ಷಿತ ಸೀವಾಕ್‌ ಯೋಜನೆ ಆರಂಭಿಸಲು ಇದು ಸಕಾಲವಾಗಿದೆ.

Advertisement

ಏನಿದು ಸೀವಾಕ್‌ ಯೋಜನೆ
ಉಡುಪಿ ಜಿಲ್ಲೆಯ ಕೋಡಿ,ಮಲ್ಪೆ ಮುಂತಾದ ಕಡೆ ಸೀವಾಕ್‌ ಯೋಜನೆ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಬೈಂದೂರು ಕ್ಷೇತ್ರದ ಅಳ್ವೆಗದ್ದೆ ಕೂಡ ಸೀವಾಕ್‌ ಯೋಜನೆಗೆ ಉತ್ತಮ ನೈಸರ್ಗಿಕ ಸೌಂದರ್ಯದ ಸ್ಥಳವಾಗಿದ್ದು ಇದರಿಂದ ಮೀನುಗಾರಿಕೆಗೆ ಅನುಕೂಲವಾಗುವ ಜತೆಗೆ ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾಗಿರುತ್ತದೆ. ಕಳಿಹಿತ್ಲು ಮತ್ತು ಅಳ್ವೆಗದ್ದೆ ಭಾಗ ಜಿಲ್ಲೆಯ ಅತ್ಯುತ್ತಮ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ನದಿ, ಸಾಗರ,ಸಂಗಮ ಸ್ಥಳವಾದ ಕಾರಣ ಈಗಾಗಲೇ 160 ಮೀಟರ್‌ವರೆಗೆ ಕಲ್ಲುಗಳನ್ನು ಹಾಕಲಾಗಿದೆ. ಪ್ರಸ್ತುತ ಇದೆ ಯೋಜನೆಯಲ್ಲಿ ಸೀವಾಕ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ ಇನ್ನಷ್ಟು ಬೆಳವಣಿಗೆಗೆ ಕಾರಣವಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಸೀವಾಕ್‌ ಯೋಜನೆ ಸಾಕಾರಕ್ಕೆ ಸಾಧ್ಯತೆಗಳೇನು?
ಅಳ್ವೆಗದ್ದೆ ಬಂದರು ಅಭಿವೃದ್ದಿಗೆ 80 ಕೋಟಿ ಯೋಜನೆ ಕೂಡ ಸಿದ್ದಗೊಂಡಿದೆ.ಈಗಿರುವ ಎರಡು ಕಡೆ ಕಲ್ಲುಗಳನ್ನು ಹಾಕಿದಲ್ಲಿ ದೊಡ್ಡ ಮಟ್ಟದ ಬೋಟ್‌ ಬರಲು ಸಾಧ್ಯ.ಡ್ರಜ್ಜಿಂಗ್‌ ಸೇರಿದಂತೆ ಅಗತ್ಯ ಅನುಕೂಲಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಮಾದರಿ ಬಂದರು ನಿರ್ಮಾಣ ಸಾಧ್ಯ.ಈಗಾಗಲೇ ಅಳ್ವೆಕೋಡಿಯಲ್ಲಿ ಇರುವ ಸೀವಾಕ್‌ ಮಾದರಿ ಅಳ್ವೆಗದ್ದೆಯಲ್ಲಿ ನಿರ್ಮಾಣ ಮಾಡುವ ಬೇಡಿಕೆಯಿದೆ.ಈ ಬಾರಿ ಕರ್ನಾಟಕದ ನೂತನ ಮೀನುಗಾರಿಕೆ ಮತ್ತು ಬಂದರು ಸಚಿವರು ಶಿರೂರು ಅಳ್ವೆಗದ್ದೆಯಲ್ಲಿ ಮೀನುಗಾರರ ಸಂಪರ್ಕ ಹೊಂದಿದವರಾಗಿದ್ದಾರೆ. ಮತ್ತು ಇಲ್ಲಿಗೆ ಸಮೀಪದವರಾಗಿದ್ದಾರೆ.ಹೀಗಾಗಿ ಸೀವಾಕ್‌ ಯೋಜನೆ ಮಂಜೂರಾತಿ ಅಷ್ಟೊಂದು ದುಸ್ಸರವಲ್ಲ.ಆದುದರಿಂದ ಸಚಿವರ ಗಮನಕ್ಕೆ ತರುವ ಮೂಲಕ ಅಳ್ವೆಗದ್ದೆ ಸೀವಾಕ್‌ ಯೋಜನೆ ಅನುಷ್ಟಾನಗೊಳ್ಳಬೇಕಿದೆ.

80 ಕೋ.ರೂ. ಯೋಜನೆ ಸಿದ್ಧ
ಅಳ್ವೆಗದ್ದೆ ಮೀನುಗಾರಿಕಾ ಬಂದರು ಅಭಿವೃದ್ಧಿಗೆ 80 ಕೋ.ರೂ. ಯೋಜನೆ ಕೂಡ ಸಿದ್ದಪಡಿಸಲಾಗಿದೆ. ಎರಡು ಕಡೆ ಕಲ್ಲುಗಳನ್ನು ಅಳವಡಿಸುವ ಮೂಲಕ ಬಂದರು ಅಭಿವೃದ್ಧಿ ಪಡಿಸಬೇಕಿದೆ.

ಜತೆಗೆ ಸಚಿವರು ಅಳ್ವೆಗದ್ದೆ ಬಗ್ಗೆ ಅತ್ಯಂತ ಒಲವು, ಸಂಬಂಧ ಇರುವ ಕಾರಣ ವೈಯಕ್ತಿಕ ಆಸಕ್ತಿ ಮೂಲಕ ಸೀವಾಕ್‌ ಯೋಜನೆ ಮಂಜೂರು ಮಾಡಿದಲ್ಲಿ ಮೀನುಗಾರಿಕೆ ಅಭಿವೃದ್ಧಿ ಜತೆಗೆ ಪ್ರವಾಸೋದ್ಯಮ ಬೆಳವಣಿಗೆ ಸಾಧ್ಯ.-ನಾರಾಯಣ ಮೊಗವೀರ ಅಳ್ವೆಗದ್ದೆ ಸ್ಥಳೀಯ ಮುಖಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next