ಕೊರಟಗೆರೆ: ಸರಕಾರಿ ಸ್ವಾಮ್ಯದ ವ್ಯವಸಾಯ ಸೇವಾ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ತರಲಾಗಿದ್ದ ಒಂದು ಟನ್ ಕಬ್ಬಿಣ ರಾಡ್ ಗಳು ಕಳವು ಮಾಡಿರುವ ಪ್ರಕರಣ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೊಮ್ಮಲ ದೇವಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ಬ್ಯಾಂಕಿನ ಹೊಸ ಕಟ್ಟಡದ ಬಳಿ ಕಳ್ಳತನ ಪ್ರಕರಣ ಜರಗಿದ್ದು, ರಾತ್ರಿ ವೇಳೆ ಯಾವುದೋ ವಾಹನ ತಂದು ಕಳ್ಳರು ತುಂಬಿಕೊಂಡು ಪರಾರಿಯಾಗಿರಬಹುದು ಎನ್ನಲಾಗಿದೆ.
ಸರ್ಕಾರಿ ಸ್ವಾಮ್ಯದ ಡಿಸಿಸಿ ಬ್ಯಾಂಕ್ ನ ಅಡಿಯಲ್ಲಿ ಬರುವ ವ್ಯವಸಾಯ ಸೇವಾ ಸಹಕಾರ ಸಂಘ 30 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಕಟ್ಟಡದ ಮೇಲ್ಚಾವಣಿಗೆಂದು ತಂದಿದ್ದ ಕಬ್ಬಿಣ ಇದಾಗಿತ್ತು.
ವ್ಯವಸಾಯ ಸೇವಾ ಸಹಕಾರ ಸಂಘ ಕಟ್ಟಡ ಗ್ರಾಮದ ಹೂರಭಾಗದ ಗೌರಿಬಿದನೂರು – ಮಧುಗಿರಿ ರಸ್ತೆಯ ಹೊಂದಿಕೊಂಡಂತೆ ಹೊಸ ಕಟ್ಟಡ ಕಾರ್ಯ ನಡೆಯುತ್ತಿದ್ದು, ಕಟ್ಟಡದ ಪಕ್ಕದಲ್ಲಿ ಕೂಲಿ ಕಾರ್ಮಿಕರಿಗೆ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ಸಂಬಂಧಿಸಿದ ವಸ್ತುಗಳನ್ನು ಶೇಖರಿಸಲು ನಿರ್ಮಿಸಲಾಗಿದ್ದು ನೂರಾರು ಮೂಟೆ ಸಿಮೆಂಟ್ ಕೊಠಡಿಯಲ್ಲಿದ್ದು ಸಿಮೆಂಟ್ ಬಿಟ್ಟು ಕಬ್ಬಿಣವನ್ನು ಮಾತ್ರ ಕಳವು ಮಾಡಲಾಗಿದ್ದು, ಇಲ್ಲಿ ಯಾವೊಬ್ಬ ಕಾವಲುದಾರನೂ ಇಲ್ಲದ ಕಾರಣ ಯಾರೋ ಸ್ಥಳೀಯರು ಹೊಂಚು ಹಾಕಿ ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎನ್ನಲಾಗಿದ್ದು, ಪೊಲೀಸರ ತನಿಖೆಯ ನಂತರವಷ್ಟೇ ಪ್ರಕರಣದ ಸತ್ಯಾ ಸತ್ಯತೆಗಳು ಹೊರ ಬೀಳಲಿದೆ.
Related Articles
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ ಸುರೇಶ್ ಹಾಗೂ ಪಿಎಸ್ಐ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.