Advertisement
ಉತ್ಸವಗಳೆಂದರೆ ಶ್ರೀ ದೇವರು ಸಂತೋಷದಿಂದಿರುವ ಸಂದರ್ಭ ಎಂದರ್ಥ. ದೇಗುಲಗಳು ವೈದ್ಯಾಲಯಗಳಾಗುವಂತೆ ಭಗವದ್ಭಕ್ತರ ಪಾಲಿಗೆ ನ್ಯಾಯಾಲಯವೂ ಆಗಬೇಕು. ಸಣ್ಣಪುಟ್ಟ ಕೌಟುಂಬಿಕ ಸಮಸ್ಯೆಗಳಿಗೆ ಪೊಲೀಸ್ ಠಾಣೆಗೆ ಹೋಗುವ ಬದಲು, ಪರಿಹಾರಗಳಿಗೆ ದೇಗುಲಗಳು ನ್ಯಾಯಾಲಯಗಳಾಗಿ ಪರಿವರ್ತಿಸಿ ಕೊಳ್ಳಬೇಕು. ಭಕ್ತರಿಗೆ ಸಹಬಾಳ್ವೆಯ ಸಂದೇಶ ನೀಡಲು ಸತ್ಸಂಗಗಳನ್ನು ಏರ್ಪಡಿಸಬೇಕು. ನಮ್ಮೆಲ್ಲರ ಜೀವನವು ಶಿವಮಯವಾಗಲಿ ಎಂದು ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಕೋ-ಆರ್ಡಿನೇಟರ್ ಡಾ| ಎಂ. ನಾರಾಯಣನ್ ಭಟ್ಟತ್ತಿರಿಪ್ಪಾಡ್ ಹೇಳಿದರು.
ಕಾಸರಗೋಡಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದಕ್ಕೆ ಕಾವಿಮಯ ಅಲಂಕಾರವೇ ಸಾಕ್ಷಿ. ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ದೇಗುಲ ಜೀರ್ಣೋದ್ಧಾರದಿಂದ ಪ್ರೇರಣೆ ಲಭಿಸಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ್ಯ ಅಧ್ಯಕ್ಷ ಎಂ.ಬಿ. ಪುರಾಣಿಕ್ ಹೇಳಿದರು.
Related Articles
Advertisement
ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ನಾರಾಯಣ ಕೆ. ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಜಯರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ವರಪ್ರಸಾದ್ ಕೋಟೆಕಣಿ ವಂದಿಸಿದರು.
ಜ್ಞಾನ ಕೊಟ್ಟ ಗುರು ಗ್ರಾಮದ ದೇವಸ್ಥಾನ ಹೆತ್ತ ತಾಯಿ. ಜ್ಞಾನಕೊಟ್ಟ ಗುರು. ಇವರ ಋಣವನ್ನು ತೀರಿಸಲು ಸಾಧ್ಯವುಂಟೇ? ತಲೆಮಾರಿಗೆ ಅಪೂರ್ವವಾಗಿ ಲಭಿಸುವ ಸೌಭಾಗ್ಯವಿದು. ನಾವೆಲ್ಲ ನಿಮಿತ್ತ ಮಾತ್ರ. ಒಂದು ಕ್ಷೇತ್ರ ಜೀರ್ಣೋದ್ಧಾರವಾಯಿತೆಂದರೆ ಭಗವದ್ಭಕ್ತರಿಗೆ ಅನುಗ್ರಹ ಪ್ರಾಪ್ತಿಯಾಗಿದೆ ಎಂದರ್ಥ. ಇಲ್ಲಿ ನಾನು ಎಂಬುದು ಶೂನ್ಯ. ವಿನಾಯಾಸ ಜೀವನ, ಅನಾಯಾಸ ಮರಣ ಪ್ರಾಪ್ತಿಗಾಗಿ ನಾವು ಪ್ರಾರ್ಥಿಸಬೇಕು. ನಾವು ಮಾಡುವ ಕ್ರಿಯೆ ಮುಖ್ಯವಲ್ಲ. ಬದಲು ಭಾವನೆ ಮುಖ್ಯ. ಸದ್ಭಾವನೆಯಿಂದಗೈದ ಕರ್ಮಗಳೆಲ್ಲವೂ ಭಗವದರ್ಪಿತ .
-ವಸಂತ ಪೈ ಬದಿಯಡ್ಕ ಉದ್ಯಮಿ