Advertisement

ಮುಂಗಾರು ಹಂಗಾಮಿನಲ್ಲಿ 53,961 ಹೆಕ್ಟೇರ್‌ ಬಿತ್ತನೆ ಗುರಿ

05:23 PM Jun 06, 2018 | Team Udayavani |

ಹೂವಿನಹಡಗಲಿ: ತಾಲೂಕಿನಲ್ಲಿ ಪ್ರಸ್ತುತ ಮುಂಗಾರು ಚುರುಕಾಗಿದ್ದು, ರೈತರ ಮೊಗದಲ್ಲಿ ಹರ್ಷ ತಂದಿದೆ.  ರೈತರು
ಭೂಮಿ ಹದ ಮಾಡಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿ ಬಾರಿ ತಾಲೂಕಿನಲ್ಲಿ ವಾಡಿಕೆಯಂತೆ ಮೇ ತಿಂಗಳಲ್ಲಿ
90 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ 143 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ತುಸು ಅಂದರೆ ಶೇ.59ರಷ್ಟು ಹೆಚ್ಚಾಗಿದೆ. ಹೀಗಾಗಿ ರೈತರ ಕೃಷಿ ಚಟುವಟಿಕೆಗಳು ಜೋರಾಗಿವೆ.

Advertisement

ತಾಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನ ಬಿತ್ತನೆ ಗುರಿ 53,961 ಹೊಂದಿದ್ದು, ಅದರಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಿದ್ದು, ಪ್ರಮಾಣದಲ್ಲಿ ಅಂದರೆ ಸುಮಾರು 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ, 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯುವ ಗುರಿ ಹೊಂದಿದ್ದು, ಉಳಿದಂತೆ ಜೋಳ 8 ಸಾವಿರ ಹೆಕ್ಟೇರ್‌ ಪ್ರದೇಶ, ತೃಣಧಾನ್ಯಗಳಾದ ಹೆಸರು 251 ಹೆಕ್ಟೇರ್‌ ಪ್ರದೇಶ, ಶೇಂಗಾ 2500 ಹೆಕ್ಟೇರ್‌, ಸೂರ್ಯಕಾಂತಿ 4000 ಹೆಕ್ಟೇರ್‌ ಪ್ರದೇಶ, ಹತ್ತಿ 3000 ಹೆಕ್ಟೇರ್‌ ಪ್ರದೇಶ, ಕಬ್ಬು 2500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ.

ಬೀಜ ದಾಸ್ತಾನು: ಇಷ್ಟೊಂದು ಪ್ರಮಾಣದಲ್ಲಿ ಬೆಳೆ ಬೆಳೆಯುವಗುರಿ ಹೊಂದಿದ್ದು ಇದಕ್ಕೆ ಪೂರಕವಾಗಿ ಬೇಕಾದ
ಬೀಜ ಹಾಗೂ ಗೊಬ್ಬರ ದಾಸ್ತಾನು ಸಮರ್ಪಕವಾಗಿ ಕೈಗೊಳ್ಳಲಾಗಿದೆ. ಮೆಕ್ಕೆಜೋಳ 850 ಕ್ವಿಂಟಲ್‌ ಬೀಜ
ಹೊಂದಿದ್ದು ಉಳಿದಂತೆ ರೈತರಿಗೆ ಆಗತ್ಯ ಕಂಡು ಬಂದರೆ ತಕ್ಷಣದಲ್ಲಿ ಬೀಜ ಪೂರೈಕೆಯ ವ್ಯವಸ್ಥೆ ಮಾಡಲಾಗುವುದು
ಎಂದು ಕೃಷಿ ಇಲಾಖೆ ಸಹಾಯಕ ನಿರ್ದೆಶಕರು ತಿಳಿಸಿದ್ದಾರೆ.

ಜೋಳ 110 ಕ್ವಿಂಟಲ್‌ ಬೀಜ ಸಂಗ್ರಹ ಹೊಂದಿದ್ದು, ತೊಗರಿ 150 ಕ್ವಿಂಟಲ್‌, ಜೋಳ 110 ಕ್ವಿಂಟಲ್‌, ಸಜ್ಜಿ 30 ಕ್ವಿಂಟಲ್‌, ಎಸ್‌ಎಫ್‌ 50 ಕ್ವಿಂಟಲ್‌ ಬೀಜ ದಾಸ್ತಾನು ಮಾಡಿದ್ದು, ಪಟ್ಟಣ ಒಳಗೊಂಡಂತೆ ಹಿರೇಹಡಗಲಿ, ಹೊಳಲು, ಇಟಗಿ, ಹೊಳಗುಂದಿ, ಹಿರೇಮಲ್ಲನಕೇರಿ ಹೀಗೆ ಒಟ್ಟು 6 ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಲಾಗುತ್ತಿದೆ. ರೈತರು ಬೀಜಕ್ಕಾಗಿ ಪರದಾಡದೆ ಅವರಿಗೆ ಎಲ್ಲಿ ಸಮೀಪವಾಗುತ್ತದೆಯೋ  ಅಲ್ಲಿ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ರಿಯಾಯಿತಿ
ದರದಲ್ಲಿ ಹಾಗೂ ಎಸ್‌ಸಿ-ಎಸ್‌ಟಿ ರೈತರಿಗೆ ಶೇ.75ರಷ್ಟು ರಿಯಾಯತಿ ದರದಲ್ಲಿ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಕ‌ಳಪೆ ಬೀಜ ವಿತರಿಸಿದರೆ ಕ್ರಮ

Advertisement

ಕಡಿಮೆ ರಿಯಾಯಿತಿ ದರದಲ್ಲಿ ಯಾರಾದರೂ ರೈತರಿಗೆ ಕಳಪೆ ಗುಣಮಟ್ಟದ ಬೀಜಗಳನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.ಗೊಬ್ಬರ ವಿತರಿಸುವ ಖಾಸಗಿ ಮಾರಾಟಗಾರರಿಗೆ ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.
 ಎಚ್‌.ಬಿ.ಪಡಸಾಲಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.

Next