Advertisement

ಮಧ್ಯಪ್ರದೇಶದಲ್ಲಿ ತಾಜ್‌ಮಹಲ್‌ ಮಾದರಿ ಮನೆ

01:23 AM Nov 23, 2021 | Team Udayavani |

ಭೋಪಾಲ: ಪ್ರೇಮಸೌಧ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿರುವುದು ಆಗ್ರಾದಲ್ಲಿರುವ ತಾಜ್‌ಮಹಲ್‌. ಮೊಘಲ್‌ ದೊರೆ ಶಾಜಹಾನ್‌ ತನ್ನ ಪತ್ನಿ ಮುಮ್ತಾಜ್‌ ಮಹಲ್‌ ಸ್ಮರಣಾರ್ಥ ಅದನ್ನು ನಿರ್ಮಿಸಿದ್ದ. ಇದೀಗ, ಮಧ್ಯಪ್ರದೇಶದ ಬುರ್ಹಾನ್‌ಪುರ ಎಂಬಲ್ಲಿನ ನಿವಾಸಿ ಆನಂದ್‌ ಪ್ರಕಾಶ್‌ ಚೌಸ್ಕೇ ಎಂಬುವರು ತಮ್ಮ ಪತ್ನಿಗೆ ತಾಜ್‌ಮಹಲ್‌ ಮಾದರಿಯ ಮನೆ ನಿರ್ಮಿಸಿ ಉಡುಗೊರೆ ನೀಡಿದ್ದಾರೆ. ಆ ಮನೆ, 29 ಅಡಿ ಎತ್ತರದ ಡೂಮ್‌ ಅನ್ನು ಹೊಂದಿದೆ ಎನ್ನುವುದು ವಿಶೇಷ.

Advertisement

ಹಿಂದೊಮ್ಮೆ ತಾಜ್‌ಮಹಲ್‌ ವೀಕ್ಷಿಸಲು ಆಗ್ರಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಆನಂದ್‌ ಅವರಿಗೆ ಪ್ರೇಮ ಸೌಧ ಮಾದರಿಯ ಮನೆ ನಿರ್ಮಿಸುವ ಯೋಚನೆ ಹೊಳೆದಿತ್ತು. ಆರಂಭದಲ್ಲಿ ಚೌಸ್ಕೇ ಅವರು ಎಂಜಿನಿಯರ್‌ಗಳ ಬಳಿ 80 ಅಡಿ ಎತ್ತರದ ಡೂಮ್‌ ನಿರ್ಮಾಣ ಮಾಡುವಂತೆ ಒತ್ತಾಯ ಮಾಡಿದ್ದರು. ಆದರೆ ಅವರ ಬೇಡಿಕೆಗೆ ಸಂಬಂಧಿತ ಇಲಾಖೆಗಳಿಂದ ಅನುಮೋದನೆ ಸಿಕ್ಕಿರಲಿಲ್ಲ. ಒಟ್ಟು ಮೂರು ವರ್ಷಗಳ ಅವಧಿಯಲ್ಲಿ ತಾಜ್‌ಮಹಲ್‌ ಮಾದರಿ ಮನೆ ನಿರ್ಮಿಸಲಾಗಿದೆ.

ಇದನ್ನೂ ಓದಿ:ಶ್ರೀರಂಗಪಟ್ಟಣ : ಜನರನ್ನು ಭಯಭೀತರನ್ನಾಗಿಸಿದ್ದ ಬೃಹದಾಕಾರದ ಮೊಸಳೆ ಬಲೆಗೆ

ಬರ್ಹಾನ್‌ಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಅದನ್ನು ತಪ್ಪದೇ ನೋಡ ಬೇಕು ಎಂದು ಆಶಯ ಹೊಂದಿದ್ದಾರೆ. ಮನೆ ಮಿನಾರ್‌ಗಳ ಸಹಿತ 90 ಚದರ ಅಡಿ, ಮೂಲತಳಹದಿ 60 ಚದರ ಅಡಿ ಇದೆ. ಎರಡು ಮಹಡಿಗಳನ್ನು ಹೊಂದಿದ್ದು, ಅಡುಗೆ ಕೋಣೆ, ಧ್ಯಾನ ಮಂದಿರವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next