Advertisement
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಮುಖಮಂತ್ರಿಯಾಗಿ, ರಾಜ್ಯದ ಹಿರಿಯ ರಾಜಕೀಯ ನಾಯಕರಾದ ಸಿದ್ಧರಾಮಯ್ಯ ಅವರಿಂದ ಇಂಥ ಹೇಳಿಕೆ ಬಂದಿವುದು ಸರಿಯಲ್ಲ ಎಂದರು.
Related Articles
Advertisement
ಸಿದ್ದರಾಮಯ್ಯ ಅನಗತ್ಯವಾಗಿ ಮಠಾಧೀಶರನ್ನು ಬೀದಿಗೆ ಎಳೆಯುವ ಕೆಲಸ ಮಾಡಿದ್ದಾರೆ. ಇವರ ವರ್ತನೆ ಹೀಗೇ ಮುಂದುವರೆದರೆ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಕನ್ನೂರು ಮಠದ ಸೋಮನಾಥ ಶ್ರೀಗಳು ಆಕ್ರೋಶ ಹೊರ ಹಾಕಿದ್ದಾರೆ.
ಈ ಹಿಂದೆ ವೀರಶೈವ ಲಿಂಗಾಯತ ಧರ್ಮ ಒಡೆಯುವ ಹುನ್ನಾರ ನಡೆಸಿದ್ದ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ವಯಕ್ತಿಕವಾಗಿ ಅವರೇ ಹಿನ್ನಡೆ ಅನುಭವಿಸಿರುವ ಕಹಿ ಅನುಭವ ಇದೆ. ಹೀಗಿದ್ದರೂ ಮಠಾಧೀಶರಿಗೆ ನೋವುಂಟು ಮಾಡುವಂತೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಜಾತಿ-ಮತ ಎಣಿಸದೇ ವೀರಶೈವ-ಲಿಂಗಾಯತ ಮಠಗಳು ಅಕ್ಷರ-ಅನ್ನ ದಾಸೋಹ ಮಾಡಿದ್ದರಿಂದ ಇಂದು ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದೆ. ವೀರಶೈವ ಮಠಗಳು ಇರಿದ್ದರೆ ರಾಜ್ಯದ ಜನರು ಶೇ.90 ರಷ್ಟು ಇನ್ನೂ ಅನಕ್ಷರಸ್ತರಾಗಿ ಇರುತ್ತಿದ್ದರು. ಇದನ್ನು ಅವರ ಜೊತೆಗಾರರೇ ಆಗಿದ್ದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರೇ ಹೇಳಿದ್ದಾರೆ ಎಂದು ನೆನಪಿಸಿದರು.
ಸಮಾಜಮುಖಿ ಕೆಲಸ ಮಾಡುವ ಮಠಾಧೀಶರು, ಮಠಗಳ ಬಗ್ಗೆ ಸಿದ್ಧರಾಮಯ್ಯ ಅವರು ಅನಗತ್ಯವಾಗಿ ಹಗುರ ಮಾತುಗಳನ್ನಾಡುವುದನ್ನು ಇನ್ನಾದರೂ ಬಿಡಬೇಕು. ಇಲ್ಲವಾದಲ್ಲಿ ಭಕ್ತರ ನೇತೃತ್ವದಲ್ಲೇ ಸಿದ್ಧರಾಮಯ್ಯ ವಿರುದ್ಧ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು.