Advertisement

“ಸಾಹಿತ್ಯ ಚಟುವಟಿಕೆಗಳಿಂದ ಕನ್ನಡದ ಉಳಿವು’

09:02 PM Apr 29, 2019 | Sriram |

ಕಿನ್ನಿಗೋಳಿ: ಪಂಪ,ರನ್ನ,ಜನ್ನರಂತಹ ಕವಿಗಳು, ಪುರಂದರ, ಕನಕ, ತ್ಯಾಗರಾಜ ಹೀಗೆ ದಾಸ ಪರಂಪರೆ, ಕುವೆಂಪು, ಮಾಸ್ತಿ ಅಡಿಗ, ಕಾರಂತರಂತಹ ಶ್ರೇಷ್ಠರು ಕಟ್ಟಿದ ಕನ್ನಡ ಸಾಹಿತ್ಯ ಪ್ರಪಂಚ ನಮ್ಮ ಹೆಮ್ಮೆ ಎಂದು ಖ್ಯಾತ ಸಾಹಿತಿ ಡಾ|ಕವಿತಾಕೃಷ್ಣ ಹೇಳಿದರು.

Advertisement

ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ಕಿನ್ನಿಗೋಳಿ ಅನಂತ ಪ್ರಕಾಶದ ಸಹಸಂಸ್ಥೆ ಗಾಯತ್ರಿ ಪ್ರಕಾಶದ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ನಂತ ಪ್ರಕಾಶ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಡಾ| ಕವಿತಾಕೃಷ್ಣರಿಗೆ 10 ಸಾವಿರ ರೂ. ನಗದು, ಅಭಿನಂದನ ಕೃತಿ, ಸಮ್ಮಾನ ಪತ್ರ ಸಹಿತ ಅನಂತಪ್ರಕಾಶ ಪುರಸ್ಕಾರ ನೀಡಿ ಗೌರವಿಸಲಾಯಿತು.

ಡಾ| ವಿಶ್ವನಾಥ ಕಾರ್ನಾಡರ ಕಥಾ ಸಂಪುಟ ಮೌನ ಸೆಳೆತಗಳು, ಕವನ ಸಂಕಲನ ನಿರಂತರ, ಲೇಖನಗಳ ಸಂಗ್ರಹ ಸಮಚಿಂತನ ಕೃತಿಗಳನ್ನು ಖ್ಯಾತ ಸಾಹಿತಿ ಬಿ| ಜನಾರ್ದನ ಭಟ್‌ ಬಿಡುಗಡೆಗೊಳಿಸಿದರು.

ಗಾಯತ್ರೀ ಪ್ರಕಾಶನದ 150ನೆಯ ಕೃತಿ ಗಾಯತ್ರಿ ಎಸ್‌. ಉಡುಪ ರಚಿಸಿದ ಕಥಾಸಂಕಲನ ಮಾವಿನ ಕೋಗಿಲೆ ಕೃತಿಯನ್ನು ಖ್ಯಾತ ಬರಹಗಾರ್ತಿ ಬಿ.ಎಂ. ರೋಹಿಣಿ ಬಿಡುಗಡೆಗೊಳಿಸಿದರು.

Advertisement

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಶುಭ ಕೋರಿದರು. ಸಾಹಿತಿ ಕೆ.ಎಲ್‌. ಕುಂಡಂತಾಯ ಅಭಿನಂದಿಸಿದರು. ಡಾ| ವಿಶ್ವನಾಥ ಕಾರ್ನಾಡ್‌, ಮೂಡುಬಿದಿರೆ ಎಂ.ಸಿ. ಎಸ್‌. ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಅನಂತಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಉಪಸ್ಥಿತರಿದ್ದರು. ಶಕುನ ಉಡುಪ ನಿರೂಪಿಸಿದರು.ಗಾಯತ್ರಿ ಉಡುಪ ವಂದಿಸಿದರು. ಸ್ವರಾಂಜಲಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿಭಾವಗಾನ, ಸರಪಾಡಿ ಅಶೋಕ ಶೆಟ್ಟಿ ತಂಡದವರಿಂದ ತುಳು ಯಕ್ಷಹಾಸ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next