Advertisement

ಸುಳ್ಳು ಕೇಸು ಹಾಕಿದ ಮಹಿಳೆಗೆ ಸುಪ್ರೀಂ ತರಾಟೆ

03:45 AM Apr 25, 2017 | Team Udayavani |

ನವದೆಹಲಿ: ಪದೇ ಪದೆ ಪತಿ ವಿರುದ್ಧ ಸುಳ್ಳು ಕೇಸು ಹಾಕಿದ್ದ ಪತ್ನಿಯ ಕ್ರಮವನ್ನು ಅತ್ಯಂತ ಕ್ರೂರ ಎಂದು ಬಣ್ಣಿಸಿರುವ ಸುಪ್ರೀಂಕೋರ್ಟ್‌, ಆಕೆಯ ಪತಿಯ ಮನವಿಯಂತೆ ಡೈವೋರ್ಸ್‌ ಮಂಜೂರು ಮಾಡಿದೆ. ಆದರೆ, ಆಕೆಯ ಜೀವನಕ್ಕಾಗಿ 50 ಲಕ್ಷ ರೂ. ಮತ್ತು 1 ಕೋಟಿ ರೂ. ಬೆಲೆಯ ಫ್ಲ್ಯಾಟ್‌ ನೀಡುವಂತೆ ಆದೇಶಿಸಿದೆ. 

Advertisement

ಪತ್ನಿಯ ಸುಳ್ಳು ಕೇಸುಗಳ ಬಗ್ಗೆ ಗಮನಿಸಿದ ಕೋರ್ಟ್‌, ಪತಿ, ಆತನ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳ ವಿರುದ್ಧ ಒಂದರ ಮೇಲೊಂದು ಕೇಸು ಹಾಕಿಕೊಂಡು ಬರಲಾಗಿದೆ. ಆಕೆಯ ಕ್ರಮ ಕ್ರೌರ್ಯಕ್ಕೆ ಸಮನಾಗಿದೆ. ಕ್ರೌರ್ಯವನ್ನು ಸ್ಪಷ್ಟ ವಾಗಿ ವ್ಯಾಖ್ಯಾನಿಸಲು ಆಗದು. ಆದರೆ, ಆಯಾ ಕೇಸಿನ ಸನ್ನಿವೇ ಶಕ್ಕೆ ಅನುಗುಣವಾಗಿ ಇಂಥದ್ದನ್ನು ಕ್ರೌರ್ಯ ಎನ್ನಬಹುದು. ಹೀಗಾಗಿ ಪತಿಯ ವಿಚ್ಛೇದನದ ಮನವಿ ಪುರಸ್ಕರಿಸಲಾಗಿದೆ. ಇಷ್ಟೆಲ್ಲಾ ಮಾಡಿದರೂ, ಆಕೆಯ ಜೀವನ ನಡೆಯಬೇಕು ಎಂಬ ಉದ್ದೇಶದಿಂದ ಇನ್ನು 3 ತಿಂಗಳಲ್ಲಿ 50 ಲಕ್ಷ ರೂ. ನೀಡಬೇಕು ಹಾಗೂ ತಾನು ವಾಸವಿರುವ ಪ್ರದೇಶದಲ್ಲೇ ಆಕೆಗೆ 1 ಕೋಟಿ ರೂ. ಬೆಲೆ ಬಾಳುವ ಫ್ಲ್ಯಾಟ್‌ ನೀಡಬೇಕು ಎಂದು ಸೂಚನೆ ನೀಡಿದೆ. 1989ರಲ್ಲಿ ವಿವಾಹವಾಗಿದ್ದ ಈ ದಂಪತಿ 1999ರ ವರೆಗೆ ಅನ್ಯೋನ್ಯವಾಗಿದ್ದರು. 2000ರಲ್ಲಿ ಪತಿ ಡೈವೋರ್ಸ್‌ಗೆ ಅರ್ಜಿ ಹಾಕಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next