Advertisement
1971ರ ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ನೀಡಲಾಗಿದ್ದ ಶೇ.30 ಮೀಸಲನ್ನು ಸುಪ್ರೀಂ ಕೋರ್ಟ್ ಶೇ.5ಕ್ಕೆ ಇಳಿಕೆ ಮಾಡಿದೆ. ಜತೆಗೆ ಜನಾಂಗೀಯ ಅಲ್ಪಸಂಖ್ಯಾಕರು, ಅಂಗವಿಕಲರು ಮತ್ತು ತೃತೀಯಲಿಂಗಿಗಳಿಗೆ ಶೇ.2ರಷ್ಟು ಮೀಸಲು ನಿಗದಿ ಪಡಿಸಿದೆ. ಉಳಿದಂತೆ ಶೆ.93 ಉದ್ಯೋಗವನ್ನು ಅರ್ಹತೆ(ಮೆರಿಟ್) ಆಧಾರದಲ್ಲಿ ನೀಡಬೇಕೆಂದು ತೀರ್ಪು ನೀಡಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರಕಾರವು ಜೂನ್‌ನಲ್ಲಿ ಸರಕಾರಿ ಉದ್ಯೋಗ ಗಳಿಗೆ ಸಂಬಂಧಿಸಿದ ನೂತನ ಮೀಸಲು ಕೋಟಾ ಜಾರಿಗೊಳಿಸಿತ್ತು. ಅದರಂತೆ ಸರಕಾರಿ ಉದ್ಯೋಗಗಳಲ್ಲಿ ಶೇ.30ರಷ್ಟನ್ನು 1971ರ ಹೋರಾಟಗಾರರ ಕುಟುಂಬಕ್ಕೆ, ಶೇ.10 ಮಹಿಳೆಯರಿಗೆ, ಶೇ.10 ಹಿಂದುಳಿದ ಜಿಲ್ಲೆಯ ವರಿಗೆ, ಶೇ.5 ಜನಾಂಗೀಯ ಅಲ್ಪಸಂಖ್ಯಾಕರಿಗೆ ಮತ್ತು ಶೇ.1 ಅಂಗವಿಕಲರಿಗೆ ನೀಡಬೇಕೆಂದು ನಿರ್ಧರಿಸಲಾ ಗಿತ್ತು. ಇದನ್ನು ವಿರೋಧಿಸಿ ಭಾರೀ ದಂಗೆ ಆರಂಭವಾಗಿತ್ತು. ಮೀಸಲು ರದ್ದು ಕೋರಿ ಅರ್ಜಿ ದಾಖಲಾಗಿದ್ದವು. ಮೃತರ ಸಂಖ್ಯೆ 151ಕ್ಕೆ ಏರಿಕೆ: ಬಾಂಗ್ಲಾದ ಹಲವೆಡೆ ರವಿವಾರವೂ ಪ್ರತಿಭಟನೆಗಳು ವರದಿಯಾಗಿವೆ. ಈವರೆಗೆ ಮೃತಪಟ್ಟವರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. Advertisement
Bangladesh ದಂಗೆಗೆ ಕಾರಣವಾದ ಮೀಸಲಿಗೆ ಸುಪ್ರೀಂ ಕೋರ್ಟ್ ಕತ್ತರಿ
12:51 AM Jul 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.