Advertisement

ವಿದ್ಯೆಗೆ ಏಕಾಗ್ರತೆ ಅಧ್ಯಯನ ಅವಶ್ಯ

03:28 PM Mar 20, 2018 | |

ವಿಜಯಪುರ: ಯಾವುದೇ ವಿದ್ಯೆಯನ್ನು ಏಕಾಗ್ರತೆಯಿಂದ ಮನಸ್ಸಿಟ್ಟು ಅಧ್ಯಯನ ಮಾಡಿದರೆ ಮಾತ್ರ ಆ ವಿದ್ಯೆ ಒಲಿಯುತ್ತದೆ ಎಂದು ಡಾ|ಬಿ.ಆರ್‌. ಬನಸೋಡೆ ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಯುಗಾದಿ ಸಂಭ್ರಮದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಭಾವಗೀತೆ, ಜಾನಪದ, ನಾಡು-ನುಡಿಯ ಹಿರಿಮೆ-ಗರಿಮೆಯ ಗೀತ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಗೀತವನ್ನು ಸಿದ್ಧಿಸಿಕೊಳ್ಳುವುದು ಸುಲಭವಲ್ಲ. ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುವುದೇನೋ ನಿಜ. ಆದರೆ ಆಯ್ಕೆ ಮಾಡಿಕೊಳ್ಳುವುದು ಕೆಲವರನ್ನು ಮಾತ್ರ. ಅಂತೆಯೇ ಶಾಸ್ತ್ರೀಯ ಗಾಯನ ಕಲೆ ಒಲಿಯುವುದು ಕೆಲವರಿಗೆ ಮಾತ್ರ. ಅದೊಂದು ಕಠಿಣ ತಪಸ್ಸು ಎಂದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪ್ರಾಧ್ಯಾಪಕಿ ಪ್ರೊ| ವಿದ್ಯಾಶ್ರೀ ಸಾಲಿಮಠ ಮಾತನಾಡಿ, ಸಿನೆಮಾ ಗೀತೆಗಳೆಲ್ಲವೂ ಶಾಸ್ತ್ರೀಯ ಗಾಯನವಲ್ಲ. ಶಾಸ್ತ್ರೀಯ ಕಲೆಗೆ ನಿರಂತರ ಅಭ್ಯಾಸ ಬೇಕು. ಇತ್ತೀಚಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಟ್ರ್ಯಾಕ್‌ ಸಂಗೀತವು ಯುವಜನತೆಯನ್ನು ಹೆಚ್ಚಾಗಿ ಸೆಳೆಯುತ್ತಿದೆ.

ಅದು ಬೇಗನೆ ಹಾಡಲು ಸುಲಭ ಸಾಧನವೂ ಹೌದು. ಆದರೆ ಪ್ರತಿಯೊಬ್ಬ ಸಂಗೀತಾಸಕ್ತರು ರಾಗ-ತಾಳ-ಲಯದ ಜೊತೆಗೆ ಸಕಲ ಸ್ವರಗಳ ಸಂಗೀತ ಜ್ಞಾನವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಶಾಸ್ತ್ರೀಯ ಅಭ್ಯಾಸ ಅತಿ ಅವಶ್ಯ. ಅಂದಾಗ ಮಾತ್ರ ನಾವು ಹಾಡಿದ ಹಾಡಿಗೆ ಒಂದು ವಿಶೇಷ ಅರ್ಥ ಹಾಗೂ ಮೆರುಗು ಬರುತ್ತದೆ ಎಂದು ನುಡಿದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿದರು. ಡಾ| ಸತ್ಯನಾರಾಯಣರಾವ್‌,  ಯಕರಾದ ವೀರೇಶ ವಾಲಿ, ಪ್ರಶಾಂತ ಚೌಧರಿ, ಕಸಾಪ ತಾಲೂಕಾಧ್ಯಕ್ಷ ಪ್ರೊ| ಯು.ಎನ್‌. ಕುಂಟೋಜಿ ಇದ್ದರು. ಕಲಾವಿದರಾದ ಮಂಜುನಾಥ ಜುನಗೊಂಡ, ಶಂಕರ ಕೆಂಧೂಳಿ, ವಿನೋದ ಕಟಗೇರಿ, ಮಂಜುಳಾ ಹಿಪ್ಪರಗಿ, ಸೃಷ್ಠಿ ಶಾಸ್ತ್ರೀ, ಪಾರ್ವತಿ ಜೋರಾಪುರಮಠ, ಶಕುಂತಲಾ ಹಿರೇಮಠ, ಸುಭಾಷ್‌ ಕನ್ನೂರ, ಸೋಮಶೇಖರ ಕುಲೇì ಮತ್ತಿತರರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಗಾಯಕ-ಗಾಯಕಿಯರು ಹಾಡುಗಳನ್ನು ಪ್ರಸ್ತುತ ಪಡಿಸಿದರು. ಪ್ರತಿಯೊಬ್ಬ ಕಲಾವಿದರಿಗೂ ಪ್ರಶಸ್ತಿ ಪತ್ರ ಹಾಗೂ ಕೃತಿ ಕಾಣಿಕೆ ನೀಡಲಾಯಿತು.

ಚಂದ್ರಕಾಂತ ಉಂಡೋಡಿ ಪ್ರಾರ್ಥಿಸಿದರು. ರಾಜೇಂದ್ರಕುಮಾರ ಬಿರಾದಾರ ನಿರೂಪಿಸಿದರು. ಕಬೂಲ್‌ ಕೊಕಟನೂರ ಸ್ವಾಗತಿಸಿದರು. ಬಸವರಾಜ ಕುಂಬಾರ ನಿರ್ವಹಿಸಿದರು. ಶರಣಗೌಡ ಪಾಟೀಲ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next