Advertisement

ಕತೆ ಹೇಳುತ್ತೆ ಸೀರೆ!

03:27 PM Jan 13, 2018 | Team Udayavani |

ಶಾಪಿಂಗ್‌ ಮಾಡುವುದು ಎಷ್ಟು ಸಂತಸ ಕೊಟ್ಟರೂ ಅದು ತ್ರಾಸದಾಯಕ ಪ್ರಕ್ರಿಯೆಯೂ ಹೌದು. ವಿಸ್ತಾರವಾಗಿ ಹರಡಿಕೊಂಡಿರುವ ಮಳಿಗೆಗೆ ಭೇಟಿ ನೀಡಿ, ಅಲ್ಲಿನ ದೊಡ್ಡ ಶ್ರೇಣಿಯ ದಿರಿಸುಗಳ ನಡುವೆ ನಮಗೆ ಬೇಕಾದುದನ್ನು ಆರಿಸುವ ಹೊತ್ತಿಗೆ ಸುಸ್ತಾಗಿ ಹೋಗಿರುತ್ತೆ. ಅದಕ್ಕೇ ಕೆಲವರು ಡಿಸೈನರ್‌ ದಿರಿಸುಗಳ ಮಳಿಗೆಗಳಿಗೆ ಮೊರೆ ಹೋಗುವುದು.

Advertisement

ಅಲ್ಲಿ ಅತ್ಯುತ್ತಮವಾದುದನ್ನೇ ಆರಿಸಿ ಕೊಡುವುದರಿಂದ ಅಲ್ಲಿರುವುದೆಲ್ಲವೂ ಚೆಂದವೇ ಇರುತ್ತೆ. ಅಂಥ ಸಾರಿ ಡಿಸೈನರ್‌ಗಳ ತಂಡ “ವೀವರ್‌ಸ್ಟೋರಿ’ ತಮ್ಮ ವಿಸ್ತೃತ ಸೀರೆಗಳ ಶ್ರೇಣಿಯನ್ನು ಮಿಥಿಲಾ ಬೋಟಿಕ್‌ನಲ್ಲಿ ಪ್ರದರ್ಶನಕ್ಕಿಡುತ್ತಿದೆ. ಮಿಥಿಲಾ ಬೋಟಿಕ್‌ ಮೊದಲ ವರ್ಷವನ್ನು ಆಚರಿಸಿಕೊಳ್ಳುತ್ತಿರುವ ಪ್ರಯುಕ್ತ ಈ ಸೀರೆ ಮೇಳವನ್ನು ಆಯೋಜಿಸಲಾಗಿದೆ. 

ಜಾಗತೀಕರಣದಿಂದಾಗಿ ಬಹುತೇಕ ಕ್ಷೇತ್ರಗಳಲ್ಲಿ ಯಂತ್ರಗಳು ಕಾಲಿಟ್ಟಿವೆ. ವಸ್ತ್ರೋದ್ಯಮದಲ್ಲೂ ಈ ಪರಿಸ್ಥಿತಿಯಿದೆ. ಇದರ ಪರಿಣಾಮ ನೇಯ್ಗೆಯ ಪುರಾತನ ಸಾಂಪ್ರದಾಯಿಕ ವಿಧಾನಗಳು, ತಂತ್ರಜ್ಞಾನಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ವೀವರ್‌ಸ್ಟೋರಿ ವಿನ್ಯಾಸಕಾರರ ತಂಡ ನಿರತವಾಗಿವೆ.

ಪುರಾತನ ಮಾರ್ಗಗಳನ್ನು ಅನುಸರಿಸಿ ಸೀರೆ, ದುಪಟ್ಟಾ, ಲೆಹೆಂಗಾ ವಸ್ತ್ರಗಳ ತಯಾರಿಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಇವುಗಳ ತಯಾರಿಯ ಹಿಂದೆ ಒಂದು ಇತಿಹಾಸವಿದೆ, ಒಂದು ಸಂಸ್ಕೃತಿ ಇದೆ, ಕತೆ ಇದೆ. ಈ ದಿರಿಸುಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಮತ್ತು ವಾರ್ಡ್‌ರೋಬ್‌ ತುಂಬಿಕೊಳ್ಳಲು ಇದೊಂದು ಸದಾವಕಾಶ.

ಎಲ್ಲಿ?: ಮಿಥಿಲಾ, ದೇವತಾ ಪ್ಲಾಝಾ, ರೆಸಿಡೆನ್ಸಿ  ರಸ್ತೆ
ಯಾವಾಗ?: ಜನವರಿ 19, 20, ಬೆಳಗ್ಗೆ 10.30- ಸಂಜೆ 7.30 
ಸಂಪರ್ಕ: 9686627256

Advertisement
Advertisement

Udayavani is now on Telegram. Click here to join our channel and stay updated with the latest news.

Next