Advertisement

ಪುಟ್ಟ ಹುಡುಗಿ ಕಾದಂಬರಿ ಬರೆದಳು…

09:18 PM Jul 10, 2019 | mahesh |

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ

Advertisement

ಹೆಚ್ಚಿನ ವೇಳೆ, ಬೆಸ್ಟ್‌ ಸೆಲ್ಲರ್‌ ಪುಸ್ತಕಗಳ ಬರಹಗಾರರು ವಯಸ್ಸಿನಲ್ಲಿ ಹಿರಿಯರಾಗಿರುತ್ತಾರೆ. ಅಥವಾ ಮಧ್ಯವಯಸ್ಕರಾದರೂ ಆಗಿರುತ್ತಾರೆ. ಆದರೆ, 1890ನೇ ಇಸವಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಬರೆದ ಕಾದಂಬರಿಯೊಂದು ಅತಿ ಹೆಚ್ಚು ಪ್ರತಿಗಳು ಮಾರಾಟಗೊಂಡ ಅಪರೂಪದ ನಿದರ್ಶನ ಇಲ್ಲಿದೆ.

ಈ ಖ್ಯಾತಿಗೆ ಪಾತ್ರವಾಗಿದ್ದು ಡೈಸಿ ಆ್ಯಶ್‌ಫೋರ್ಡ್‌ ಎಂಬ ಬಾಲಕಿ. ಆ ಪುಸ್ತಕ ಬರೆದಾಗ ಆಕೆಗೆ ಕೇವಲ 9 ವರ್ಷ ವಯಸ್ಸು. ಇಂಗ್ಲೆಂಡಿನ ಶ್ರೀಮಂತ ವರ್ಗದ ಆಚಾರ ವಿಚಾರ ಹಾಗೂ ಬದುಕಿನ ಕುರಿತು ಆಕೆ ಬರೆದಿದ್ದಳು. ತಾನು ಬರೆದಿದ್ದನ್ನು ಯಾರಿಗೂ ತೋರಿಸದೇ ಹಾಗೆಯೇ ಇಟ್ಟಿದ್ದಳು ಡೈಸಿ. ಆಮೇಲೆ ಆ ಪುಸ್ತಕದ ಬಗ್ಗೆ ಗಮನವನ್ನೇ
ಕೊಟ್ಟಿರಲಿಲ್ಲ. ನಂತರ, ಆಕೆ ಊರನ್ನೂ ಬಿಟ್ಟುಹೋದಳು. ಸುಮಾರು 28 ವರ್ಷಗಳ ನಂತರ ಆಕೆಯ ತಾಯಿ ತೀರಿಕೊಂಡಾಗಲೇ ಮತ್ತೆ ಬಾಲ್ಯದ ಮನೆಗೆ ಡೈಸಿ ಕಾಲಿಟ್ಟಿದ್ದಳು. ಆಗ ಅವಳಿಗೆ ತಾನು ಬರೆದ ಕಾದಂಬರಿ ಸಿಕ್ಕಿತ್ತು. ಅದನ್ನು ಆಕೆ ತನ್ನ ಸ್ನೇಹಿತೆಯೊಬ್ಬಳಿಗೆ ಒದಲು ನೀಡಿದಳು. ಆ ಸ್ನೇಹಿತೆ ಅದನ್ನು ಪುಸ್ತಕ ಪ್ರಕಾಶಕರಿಗೆ ತಲುಪಿಸಿದಳು. ಹೀಗೆ, ಬರೆದ 28 ವರ್ಷಗಳ ನಂತರ ಅದು “ದಿ ಯಂಗ್‌ ವಿಸಿಟರ್’ ಎಂಬ ಹೆಸರಿನಲ್ಲಿ ಪ್ರಕಟಗೊಂಡು ಖ್ಯಾತಿ ಪಡೆಯಿತು.

ಹವನ

Advertisement

Udayavani is now on Telegram. Click here to join our channel and stay updated with the latest news.

Next