Advertisement

“ಆ ಕರಾಳ ರಾತ್ರಿ’ಯ ಒಂದು ಮೆಸೇಜು

07:07 PM Apr 15, 2019 | mahesh |

ನನಗೆ ವಾಟ್ಸಾಪ್‌ ಮೇಲೆ ಅಷ್ಟೇನೂ ಮೋಹ ಇರಲಿಲ್ಲ. ಆದಷ್ಟು ಕಡಿಮೆಯೇ ಅದನ್ನು ಬಳಸುತ್ತಿದ್ದೆ. ರಂಗಭೂಮಿ ಕಲಾವಿದೆ ಆಗಿದ್ದರಿಂದ ಪ್ರತಿ ನಾಟಕ ಆರಂಭವಾಗುವಾಗಲೂ ಒಂದೊಂದು ಗ್ರೂಪ್‌ ರಚನೆಗೊಳ್ಳುತ್ತಿತ್ತು. ಅದರಲ್ಲಿ ನಾಟಕದ ತಾಲೀಮು, ನಾಟಕಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಗೊಳ್ಳುತ್ತಿದ್ದವು. ಆದರೆ, “ಆ ಕರಾಳ ರಾತ್ರಿ’ ಎನ್ನುವ ನಾಟಕಕ್ಕೆ ನಿರ್ದೇಶಕರು ನೀಡಿದ ಜವಾಬ್ದಾರಿ ಮೇರೆಗೆ ನಾನೇ ವಾಟ್ಸಾಪ್‌ ಗ್ರೂಪ್‌ ರಚಿಸಿ, ಎಲ್ಲರನ್ನೂ ಒಗ್ಗೂಡಿಸಿದೆ. ಅಲ್ಲಿ “ಶುಭೋದಯ’, “ಶುಭರಾತ್ರಿ’ ಸಂದೇಶಗಳಿಗೆ ಅವಕಾಶ ಇರಲಿಲ್ಲ. ಆದರೂ ನನ್ನ ತರಲೆ ಸ್ನೇಹಿತರು ನೀತಿ ಸಂಹಿತೆಯನ್ನು ಉಲ್ಲಂ ಸುತ್ತಿದ್ದರು.

Advertisement

ಈ ವಾಟ್ಸಾಪ್‌ ಗ್ರೂಪ್‌ ಆರಂಭ ಆಗೋದು “ಕ’ ಅಕ್ಷರದಿಂದ. ನನ್ನ ಗೆಳೆಯನ ಹೆಸರೂ “ಕ’ದಿಂದಲೇ ಶುರು. ಅವನಿಗೆ ‘ಐ ಲವ್‌ ಯು’ ಎಂದು ಕಳುಹಿಸಬೇಕಿದ್ದ ಸಂದೇಶವನ್ನು ನಾಟಕದ ಗ್ರೂಪ್‌ಗೆ ಪೋಸ್ಟ್‌ ಮಾಡಿಬಿಟ್ಟೆ. ಅದನ್ನು ನಾನು ಪರಿಶೀಲಿಸಲು ಹೋಗಿರಲಿಲ್ಲ. ಇದನ್ನು ನೋಡಿದ ಸ್ನೇಹಿತನೊಬ್ಬ ಫೋನ್‌ ಮಾಡಿ, ಆಗಿರುವ ಯಡವಟ್ಟಿನ ಬಗ್ಗೆ ಹೇಳಿದ ಮೇಲೆ ನಾನು ಆ ಸಂದೇಶವನ್ನು ಡಿಲೀಟ್‌ ಮಾಡಿದೆ. ಅಂದಿನಿಂದ ನಾಟಕದ ಮಿತ್ರರೆಲ್ಲ ನನಗೆ, “ಐ ಲವ್‌ ಯೂ’ ಅಂತಲೇ ಕಾಲೆಳೆಯುತ್ತಿದ್ದಾರೆ. ಈಗ ಯಾವುದೇ ಮೆಸೇಜನ್ನೂ ಅತ್ಯಂತ ಎಚ್ಚರದಿಂದ ಕಳುಹಿಸುತ್ತೇನೆ.

ಭಾಗ್ಯಶ್ರೀ ಎಸ್‌. ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next