Advertisement

35 ಅಡಿ ಎತ್ತರದ ಶಿವನ ಪ್ರತಿಮೆ ಲೋಕಾರ್ಪಣೆ

09:00 PM Jun 07, 2019 | Lakshmi GovindaRaj |

ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಆಮೆಕೆರೆ ರಸ್ತೆಯಲ್ಲಿ ಸಮೀಪದ ಶಿವಪಾರ್ವತಿ ದೇವಾಲಯ ಆವರಣದಲ್ಲಿ 35 ಅಡಿ ಎತ್ತರ ಶಿವನ ಹಾಗೂ ನಂದಿ ಪ್ರತಿಮೆ ಪ್ರತಿಷ್ಠಾಪನಾ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

Advertisement

ತಾಲೂಕಿನ ಆಲ್ಕೆರೆ ಅಗ್ರಹಾರ, ಮಲಾರಪಾಳ್ಯ ಎಲ್ಲೆ, ಮದ್ದೂರು ಗುಡ್ಡೆ, ಗೌಡಹಳ್ಳಿ ಗ್ರಾಮದ ಹತ್ತಿರದಲ್ಲಿ ಶಿವಪಾರ್ವತಿ ದೇವಸ್ಥಾನ ಗಣಪತಿ ಪೂಜೆ, ಅಗ್ರ ತೀರ್ಥಸಂಗ್ರಹ, ಯಾಗಶಾಲೆ ಪ್ರವೇಶ ಹೋಮ ಹಾಗೂ ಪೂರ್ಣಾಹುತಿ ಸರ್ವತ್ರನ್ಯಾಸ ಮಹಾಮಂಗಳಾರತಿ ಸೇರಿದಂತೆ ಕಳಸ ಪ್ರತಿಷ್ಠಾಪನೆ, ಅಭಿಷೇಕ, ಕುಂಬಾಭಿಷೇಕ, ಇತರೆ ಧಾರ್ಮಿಕ ವಿಧಿಗಳು ನೆರವೇರಿದವು.

35 ಅಡಿ ಎತ್ತರದ ಕಾಂಕ್ರೀಟ್‌ನಲ್ಲಿ ನಿರ್ಮಾಣಗೊಂಡಿರುವ ಪೂರ್ವಾಭಿಮುಖವಾಗಿ ತಪೋಭಂಗಿಯಲ್ಲಿ ಕುಳಿತಿರುವ ಶಿವನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಇದು ಜಿಲ್ಲೆಯ ಎತ್ತರದ ಶಿವನ ಪ್ರತಿಮೆಯಾಗಿದೆ. ಇದರೊಂದಿಗೆ ನಂದಿ ವಿಗ್ರಹವೂ ಪ್ರತಿಷ್ಠಾಪನೆಯಾಗಿತು.

ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸುಂದರ ಪರಿಸರದಲ್ಲಿ ನಿರ್ಮಾಣವಾಗಿರುವ ಶಿವನ ಮೂರ್ತಿಯು ಬಹಳ ವೈಶಿಷ್ಟ್ಯತೆಯಿಂದ ಕೂಡಿದೆ. ಧಾರ್ಮಿಕ ತಾಣಗಳು ಮಾನಸಿಕ ನೆಮ್ಮದಿಯನ್ನು ನೀಡುತ್ತವೆ. ಇದು ಶ್ರದ್ಧಾ ಕೇಂದ್ರಗಳಾಗಿದೆ. ಇಂತಹ ಕೇಂದ್ರದಲ್ಲಿ ನೆರವೇರುವ ಪ್ರತಿಯೊಂದು ಪೂಜೆಯಲ್ಲೂ ವಿಶಿಷ್ಟತೆಯನ್ನು ಕಾಣಬೇಕು ಎಂದು ಸಲಹೆ ನೀಡಿದರು.

ಸಕಲ ಜಯಿಸುವ ಶಕ್ತಿ ಲಭ್ಯ: ದೈವಾನುಸರಣೆಯಿಂದಲೇ ಸಕಲ ಜಗತ್ತು ರೂಪಿತವಾಗಿದೆ. ದೇವಸ್ಥಾನಗಳಲ್ಲಿ ಕುಳಿತರೆ ಧನ್ಯತೆ ಲಭಿಸುತ್ತದೆ. ದೈವಾನುಗ್ರಹ ಇದ್ದರೆ ಸಕಲವನ್ನು ಜಯಿಸುವ ಶಕ್ತಿ ಮನುಷ್ಯನಿಗೆ ಲಭಿಸುತ್ತದೆ ಎಂದು ವಿವರಿಸಿದರು. ಬೆಳಗ್ಗೆಯಿಂದಲೇ ನವೀನ್‌ ಶಾಸ್ತ್ರಿ ನೇತೃತ್ವದ ವಿದ್ವಾಂಸರ ತಂಡ ಪೂಜಾ ಕೈಂಕರ್ಯಗಳನ್ನು ನೆರವೇರಿಸಿತು.

Advertisement

ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಶ್ರೀ, ಗುರುಕಂಬಳೇಶ್ವರ ಮಠದ ಚೆನ್ನಬಸವಸ್ವಾಮಿ, ದೇವನೂರು ಮಠ ಮಾಹಾಂತಸ್ವಾಮಿ, ಕಾರಪುರ ಮಠದ ಬಸವರಾಜುಸ್ವಾಮಿ, ಮರಿಯಾಲ ಮುರುರಾಜೇಂದ್ರಸ್ವಾಮಿ, ಗೌಡಹಳ್ಳಿ ಮಠದ ಮರಿತೋಂಟದಾರ್ಯಸ್ವಾಮಿ, ದೇವಸ್ಥಾನದ ಸಂಸ್ಥಾಪಕ ಪಿ.ರಾಮಣ್ಣ ಸಮಿತಿಯ ಸದಸ್ಯರಾದ ನಾಗೇಂದ್ರಸ್ವಾಮಿ, ನಾಗರಾಜು, ಸೋಮಶೇಖರ್‌, ಸಿದ್ದಲಿಂಗಸ್ವಾಮಿ,

ಶಿವರುದ್ರಪ್ಪ, ಶ್ರೀಕಂಠಮೂರ್ತಿ, ಸೋಮಶೇಖರ್‌, ಮಹದೇವಪ್ಪ, ನಾಗರಾಜು, ನಾಗೇಂದ್ರಮೂರ್ತಿ, ಶುಂಭುಲಿಂಗಪ್ಪ, ಗೌಡಹಳ್ಳಿ ಗ್ರಾ.ಪಂ. ಸದಸ್ಯರಾದ ರವಿ, ಸೋಮಶೇಖರ್‌, ಜಿ.ವಿ.ಮಹದೇವಸ್ವಾಮಿ, ತಾಲೂಕಿನ ಗೌಡಹಳ್ಳಿ, ಬೂದಿತಿಟ್ಟು, ಆಲ್ಕೆರೆ ಅಗ್ರಹಾರ, ಮಲಾರಪಾಳ್ಯ, ಚಾಮಲಾಪುರ, ದೇವರಹಳ್ಳಿ ಸೇರಿ ಸುತ್ತಮುತ್ತಲ್ಲಿನ ಗ್ರಾಮದಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next