Advertisement

ರಾಜ್ಯದ ಪ್ರಥಮ ಉದ್ಯೋಗ ಖಾತರಿ ಸಾಲಮೇಳ

12:32 AM Jan 16, 2020 | Sriram |

ಕಾಸರಗೋಡು: ರಾಜ್ಯದ ಪ್ರಥಮ ಉದ್ಯೋಗ ಖಾತರಿ ಸಾಲ ಮೇಳ ಜಿಲ್ಲೆಯ ಪಿಲಿಕೋಡ್‌ ಗ್ರಾಮ ಪಂಚಾಯತ್‌ನಲ್ಲಿ ನಡೆಯಿತು. ನೀಲೇಶ್ವರ ಬ್ಲಾಕ್‌ ಪಂಚಾಯತ್‌ ಮತ್ತು ಪಿಲಿಕೋಡ್‌ ಗ್ರಾಮ ಪಂಚಾಯತ್‌ಗಳು ವ್ಯಕ್ತಿಗತ ಆಸ್ತಿ ನಿರ್ಮಾಣದ ಫಲಾನುಭವಿಗಳಿಗೆ ಸಾಲ ಮೇಳದ ಮೂಲಕ ರಾಜ್ಯಕ್ಕೆ ನೂತನ ಮಾದರಿಯಾಗಿದೆ.

Advertisement

5 ಜೆ.ಎಲ್‌.ಜಿ. (ಜಾಯಿಂಟ್‌ ಲಯಬಿಲಿಟಿ ಗ್ರೂಪ್‌) ಗಳ ಮೂಲಕ 31 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಸಾಲ ಮಂಜೂರು ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆ ಅಂಗವಾಗಿ ನಿರ್ಮಿಸಲಾಗುವ ಮೇಕೆಯ ಗೂಡು, ಕೋಳಿ ಗೂಡು, ಹಸುವಿನ ಹಟ್ಟಿ ಇತ್ಯಾದಿಗಳಿಗೆ ಸಾಮಗ್ರಿ ಖರೀದಿಸಲು ಮೊಬಲಗು ಸಾಲದ ಮೂಲಕ ಲಭಿಸುತ್ತಿದೆ. ಸಾಧಾರಣ ಗತಿಯಲ್ಲಿ ಈ ಮೊಬಲಗನ್ನು ಫಲಾನುಭವಿಯೇ ಹೂಡಬೇಕು. ಆದರೆ ಹಣಕಾಸಿನ ಮುಗ್ಗಟ್ಟಿನ ಪರಿಣಾಮ ನಿರ್ಮಾಣ ನಡೆಯದೇ ಇರುವ ಮಂದಿಗೆ ಕೈ ಸಹಾಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 2,95,900 ರೂ. ಫಲಾನುಭವಿಗೆ ಮೊದಲ ಸಾಲ ಮೇಳದಲ್ಲಿ ಲಭಿಸಲಿದೆ. ನೌಕರಿ ಖಾತರಿ ಯೋಜನೆ ಮೂಲಕ ಸಾಲ ಮೇಳ ಕೊಡಕ್ಕಾಡ್‌ ಸೇವಾ ಸಹಕಾರಿ ಬ್ಯಾಂಕ್‌ನೊಂದಿಗೆ ಸೇರಿ ನಡೆಸಲಾಗುತ್ತಿದೆ.

ಏನಿದು ಯೋಜನೆ ?
ಈ ಯೋಜನೆಯಲ್ಲಿ ಪ್ರಥಮ ಹಂತದಲ್ಲಿ ಕೃಷಿಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸ ಲಾಗುತ್ತಿದೆ. ಆದರೆ ವ್ಯಕ್ತಿಗತ ಯೋಜನೆಯೊಂದನ್ನು ನಡೆಸುವ ವೇಳೆ ಸಾಮಗ್ರಿಗಳ ಖರೀದಿಗೆ ಫಲನುಭವಿಯೇ ವೆಚ್ಚ ವಹಿಸಿಕೊಳ್ಳಬೇಕು. ಸರಕಾರ ನಂತರ ಅದನ್ನು ನೀಡುವುದಿದ್ದರೂ, ಕೆಲವೊಮ್ಮೆ ಈ ವೆಚ್ಚ ಭರಿಸುವುದು ಜನತೆಗೆ ಕಷ್ಟವಾಗುತ್ತದೆ. ಇದಕ್ಕೊಂದು ಪರಿಹಾರ ಎಂಬ ನಿಟ್ಟಿನಲ್ಲಿ ಸಾಲ ಮೇಳ ನಡೆಸಲಾಗುತ್ತಿದೆ. ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್‌ನಲ್ಲೂ ಸಾಲಮೇಳ ಶೀಘ್ರದಲ್ಲಿ ನಡೆಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದರು.

ಸಾಲಮೇಳ ಉದ್ಘಾಟನೆ
ಪಿಲಿಕೋಡ್‌ ಗ್ರಾಮ ಪಂಚಾಯತ್‌ನಲ್ಲಿ ನಡೆದ ಉದ್ಯೋಗ ಖಾತರಿ ಯೋಜನೆಯ ಸಾಲ ಮೇಳವನ್ನು ನೀಲೇಶ್ವರ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಪಿ.ಪಿ. ಜಾನಕಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಈ ಸಾಲ ಮೇಳ ಆಸ್ತಿ ಅಭಿವೃದ್ಧಿ ಯೋಜನೆಗೆ ಮೊದಲ ಹೆಜ್ಜೆಯಾಗಲಿದೆ. ಹಣಕಾಸಿನ ಮುಗಟ್ಟಿನ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಮಂದಿಗೆ ಬಡತನ ನೀಗಿಸಲು ಈ ಸಾಲ ಮೇಳ ಪೂರಕವಾಗಲಿದೆ ಎಂದು ಅವರು ಹೇಳಿದರು.

ಪಿಲಿಕೋಡ್‌ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಪಿ.ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಖಾತರಿ ಯೋಜನೆಯ ಜಿಲ್ಲಾ ಸಂಚಾಲಕ ಕೆ.ಪ್ರದೀಪನ್‌ ಸಾಲದ ಚೆಕ್‌ ವಿತರಿಸಿದರು.

Advertisement

ನೀಲೇಶ್ವರ ಬ್ಲಾಕ್‌ ಅಭಿವೃದ್ಧಿ ಅಧಿಕಾರಿ ಆರ್‌.ಸಜೀವನ್‌, ಕೊಡಕ್ಕಾಡ್‌ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸಿ.ವಿ.ನಾರಾಯಣನ್‌, ನೀಲೇಶ್ವರ ಬ್ಲಾಕ್‌ ವಿಸ್ತರಣಾಧಿ ಕಾರಿ ಕೆ.ಜಿ.ಬಿಜುಕುಮಾರ್‌, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕುಂಞಿರಾಮನ್‌, ಕೊಡಕ್ಕಾಡ್‌ ಸೇವಾ ಸಹಕಾರಿ ಬ್ಯಾಂಕ್‌ ಕಾರ್ಯದರ್ಶಿ ಕೆ.ಪ್ರಭಾಕರನ್‌ ಮೊದಲಾದವರು ಉಪಸ್ಥಿತರಿದ್ದರು.

ಪಿಲಿಕೋಡ್‌ ಗ್ರಾ. ಪಂಚಾಯತ್‌ ಕಾರ್ಯದರ್ಶ ಕೆ.ರಮೇಶ್‌ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಕೆ.ವಿನಯನ್‌ ವಂದಿಸಿದರು.

ಸಾಲ ವಿತರಣೆ ಹೇಗೆ?
ವ್ಯಕ್ತಿಗತ ಆಸ್ತಿ ನಿರ್ಮಾಣ ಫಲಾನುಭವಿಗಳ ಅರ್ಜಿಗಳನ್ನು ವಾರ್ಡ್‌ ಮಟ್ಟದಲ್ಲಿ ಸ್ವೀಕರಿಸ ಲಾಗುವುದು. ಈ ಸಂಬಂಧ ಸಭೆ ಗಳನ್ನೂ ನಡೆಸಲಾಗುವುದು. ಇವರ ನಿರ್ಮಾಣ ಚಟು ವಟಿಕೆಗಳಿಗೆ ಸಂಬಂ ಧಿಸಿದ ಎಸ್ಟಿಮೇಟ್‌ ಮೊಬಲಗು ಗಣನೆ ಮಾಡಿದ ನಂತರ ಸ್ವಂತ ವೆಚ್ಚ ಭರಿಸಬಲ್ಲ ಮತ್ತು ಭರಿಸಲಾರದೇ ಇರುವವರನ್ನು ವಿಂಗಡಿಸಲಾಗುವುದು. ನಂತರ ಸಹಕಾರಿ ಬ್ಯಾಂಕ್‌ಗಳ ಜೆ.ಎಲ್‌.ಜಿ. ಸಾಲ ಲಭಿಸುವ ನಿಟ್ಟಿನಲ್ಲಿ ಒಂದೇ ಪ್ರದೇಶದ/ವಾರ್ಡಿನ ಫಲಾನುಭವಿಗಳನ್ನು ಒಟ್ಟು ಸೇರಿಸಿ ಒಂದು ಜಿ.ಎಲ್‌.ಜಿ. ರಚಿಸಲಾಗುವುದು. ಈ ಜಿ.ಎಲ್‌.ಜಿ.ಗಳಿಗೆ ಒಂದು ಹೆಸರು, ಒಬ್ಬರು ಅಧ್ಯಕ್ಷ, ಕಾರ್ಯದರ್ಶಿ ಇರುವರು. ಅನಂತರ ನಿರ್ಮಾಣ ಚಟುವಟಿಕೆಗಳಿಗಿರುವ ಮೊಬಲಗು ಜೆ.ಎಲ್‌.ಜಿ. ಸಾಲ ರೂಪದಲ್ಲಿ ಲಭಿಸಲಿದೆ. ಸರಕಾರದಿಂದ ಈ ಮೊಬಲಗು ಮಂಜೂರಾದ ತತ್‌ಕ್ಷಣ ಸಾಲ ಮರುಪಾತಿಸಬೇಕು. ವರ್ಷಕ್ಕೆ ಶೇ.10ರ ಬಡ್ಡಿ ರೂಪದಲ್ಲಿ ಒಂದು ವರ್ಷದ ಅವ ಧಿಗೆ ಸಾಲ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next