Advertisement

ಬಹಿರಂಗ ಹೇಳಿಕೆ ಸರಿಯಲ್ಲ: ರಮೇಶ್‌ಬಾಬು

03:45 AM Jun 04, 2017 | Team Udayavani |

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಸ್ಥಾನದಲ್ಲಿರುವ ಡಿ.ಎಚ್‌.ಶಂಕರಮೂರ್ತಿ ಅವರು ತಮ್ಮ ವಿರುದ್ಧ ಕಾಂಗ್ರೆಸ್‌ ಸದಸ್ಯರು ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಕುರಿತು ಬಹಿರಂಗವಾಗಿ ಚರ್ಚೆ ಮಾಡುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ರಮೇಶ್‌ಬಾಬು ತಿಳಿಸಿದ್ದಾರೆ. 

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಈ ಹಿಂದೆ ಯಾವುದೋ ಕಾರಣಕ್ಕೆ ಜೆಡಿಎಸ್‌ ಸಭಾಪತಿ ಸ್ಥಾನಕ್ಕೆ
ಅವರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಆದರೆ, ಈಗಲೂ ಆ ವಿಚಾರದಲ್ಲಿ ನಮ್ಮ ಪಕ್ಷದ ಹೆಸರು ಪ್ರಸ್ತಾಪಿಸುವುದು ಬೇಡ. ಆಗಿನ ಸಂದರ್ಭವೇ ಬೇರೆ, ಈಗಿನ ಸಂದರ್ಭವೇ ಬೇರೆ. ಕಾಂಗ್ರೆಸ್‌ ಸದಸ್ಯರು ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಕುರಿತು ಶಂಕರಮೂರ್ತಿ ಅವರು ಬಹಿರಂಗ ಹೇಳಿಕೆ ಕೊಡುವುದು ಶೋಭೆಯಲ್ಲ. ಆ ಸ್ಥಾನದಲ್ಲಿರುವವರು ಗೌರವ ಕಾಪಾಡಬೇಕು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next