ಮೊತ್ತವನ್ನು ಅಪೆಕ್ಸ್ ಬ್ಯಾಂಕ್‌ಗೆ ಭರಿಸಲು ಹಣವಿಲ್ಲದೆ ಮೈಸೂರು ಮಿನರಲ್ಸ್‌ನ (ಎಂಎಂಎಲ್) 1,400 ಕೋಟಿ ರೂ. ಅಪೆಕ್ಸ್ ಬ್ಯಾಂಕ್‌ನಲ್ಲಿ ಠೇವಣಿ ಇಡಲು ಆದೇಶಿಸಿದೆ.
Advertisement
ನಿಯಮಾವಳಿಗಳಲ್ಲಿ ಅವಕಾಶವಿಲ್ಲದ ಕಾರಣ ಅದು ಸಾಧ್ಯವಿಲ್ಲ ಎಂದು ಎಂಎಂಎಲ್ ಹೇಳಿದ್ದರೂ ಒಪ್ಪದ ಸರ್ಕಾರ ಹಣ ಠೇವಣಿ ಇಡುವಂತೆ ಒತ್ತಡ ಹೇರುತ್ತಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
Related Articles
Advertisement
ಆದ್ದರಿಂದ ಈ ಆದೇಶವನ್ನು ಮರುಪರಿಶೀಲಿಸುವಂತೆ ಎಂಎಂಎಲ್ ಸರ್ಕಾರವನ್ನು ಕೋರಿತ್ತು. ಈ ಮಧ್ಯೆ ಷರತ್ತುಗಳನ್ನು ಸಡಿಲಗೊಳಿಸಿದ ಸರ್ಕಾರ, ಎಂಎಂಎಲ್ ಇತರೆ ಬ್ಯಾಂಕ್‌ಗಳಲ್ಲಿ ಹೂಡಿದ್ದ ಠೇವಣಿ ಹಿಂಪಡೆದಾಗ ಉಂಟಾದ ನಷ್ಟವನ್ನು ಸರ್ಕಾರ ಭರಿಸುತ್ತದೆ. ಅಲ್ಲದೆ, ಬಡ್ಡಿದರ ಕೊರತೆಯನ್ನೂ ಸರ್ಕಾರ ತುಂಬುತ್ತದೆ. ಆದ್ದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ 1,400 ಕೋಟಿ ರೂ. ಅಪೆಕ್ಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವಂತೆ ಮತ್ತೂಮ್ಮೆ (ಸೆ. 26) ಆದೇಶ ಹೊರಡಿಸಿದೆ. ಅದರಂತೆ ಈ ಮೊತ್ತವನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಬೇಕೆಂದು ನಿರ್ದೇಶಿಸಿ ಎಂಎಂಎಲ್‌ಗೆ ಆದೇಶಿಸಿದ್ದ (ಅ. 9) ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು, ಇದರ ಜತೆ ಮುಖ್ಯಮಂತ್ರಿಗಳ ಅನುಮೋದನೆಯ ಪತ್ರವನ್ನೂ ಲಗತ್ತಿಸಿದ್ದಾರೆ ಎಂದು ಯಡಿಯೂರಪ್ಪ ವಿವರಿಸಿದರು.
ಬಂದ ಹಣವೆಲ್ಲ ಲೂಟಿ ಮಾಡಿದರು: ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆ ಎಂದು ಆರೋಪಿಸಿದ ಯಡಿಯೂರಪ್ಪ, ಇದುವರೆಗೆ ಕೇಂದ್ರದಿಂದ ಬಂದ ಅನುದಾನ ಸೇರಿ ತೆರಿಗೆ ಹಣವೆಲ್ಲ ಎಲ್ಲಿ ಹೋಯಿತು ಎಂಬುದಕ್ಕೆ ಹಣಕಾಸು ಇಲಾಖೆ ಹೊಣೆಯನ್ನೂ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕೆಂದು ಆಗ್ರಹಿಸಿದರು.
14ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ ಕೇಂದ್ರದಿಂದ 2,19,506 ಕೋಟಿ ರೂ. ಮಂಜೂರಾಗಿದ್ದು, ಕಳೆದ ಮೂರು ವರ್ಷದಲ್ಲಿ 1,13,478 ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಪ್ರಸ್ತುತ 1,33,409 ಕೋಟಿ ರೂ. ಸಾಲ ಪಡೆದಿದೆ. ಜತೆಗೆ ಪ್ರತಿ ವರ್ಷ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತಿದ್ದು,
ವಿಧಾನಸೌಧವನ್ನೂ ಮಾರ್ತಾರೆ ಲಾಭದಲ್ಲಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನೂ (ಬಿಡಿಎ) ರಾಜ್ಯದ ಸರ್ಕಾರ ಸಾಲದ ಸುಳಿಗೆ ನೂಕಿದೆ. ಬಿಡಿಎ ತನ್ನ ಮೂಲ ನಿವೇಶನಗಳನ್ನು ಅಡವಿಟ್ಟು ಕೆನರಾ ಬ್ಯಾಂಕ್ ಮತ್ತು ಹುಡ್ಕೊà ಸಂಸ್ಥೆಯಿಂದ 573.23 ಕೋಟಿ ರೂ. ಸಾಲ ಪಡೆದಿದೆ. ವಿವಿಧ ಬಡಾವಣೆಯ ಜಮೀನುಗಳನ್ನು ಅಡವಿಟ್ಟು ಮತ್ತೆ 400 ಕೋಟಿ ರೂ. ಸೇರಿ ಇದುವರೆಗೆ ಒಟ್ಟು 973.23 ಕೋಟಿ ರೂ. ಸಾಲ ಪಡೆದಿದೆ. ಇಷ್ಟಾದರೂ ಬಾಕಿ ಬಿಲ್ ಪಾವತಿಸಲು ಸಾಧ್ಯವಾಗದೆ ಬಿಡಿಎ ಮತ್ತೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಇದರಿಂದ ಪಾರಾಗಲು 800 ಕೋಟಿ ರೂ. ಸಾಲ ಪಡೆಯುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ಸರ್ಕಾರ ಅಧಿಕಾರದಲ್ಲಿ ಮುಂದುವರಿದರೆ ಸಾಲ ತೀರಿಸಲು
ವಿಧಾನಸೌಧವನ್ನೂ ಮಾರಾಟ ಮಾಡಿಬಿಡುತ್ತಾರೆ.ಅದಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಯಡಿಯೂರಪ್ಪ ಕಿಡಿ ಕಾರಿದರು.