Advertisement
ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಕುಂಜತ್ತೂರಿನಲ್ಲಿ ನಡೆದ ಕೇಂದ್ರ ಸರಕಾರ ನೀಡಿದ ಅಕ್ಕಿ ಎಲ್ಲಿ ಸಿಎಂ? ಎಂಬ ಎಂಬ ಪ್ರಶ್ನೆಯೊಂದಿಗೆ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ ರಾಜ್ಯ ಸರಕಾರ ಜನಪರ ಆಡಳಿತೆಯನ್ನು ಮರೆತು ಹಿಂಸಾ ರಾಜಕೀಯದಲ್ಲಿ ನಿರತವಾಗಿರುವುದಾಗಿ ಆರೋಪಿಸಿದರು. ತಾರಾನಾಥ ಹೊಸಂಗಡಿ ಅಧ್ಯಕ್ಷತೆ ವಹಿಸಿದರು.ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿಎಂ ಕೇರಳದಲ್ಲಿ ಎಡರಂಗ ಮತ್ತು ಐಕ್ಯರಂಗಗಳು ಹೊಂದಾಣಿಕೆಯ ರಾಜಕೀಯದಲ್ಲಿ ನಿರತವಾಗಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ರಾಜ್ಯ ಸರಕಾರ ತಮ್ಮದೆಂದು ಬಿಂಬಿಸಿ ಜನರನ್ನು ವಂಚಿಸುವುದಾಗಿ ಆರೋಪಿಸಿದರು.ಪಕ್ಷದ ನಾಯಕರಾದ ಹರಿಶ್ಚಂದ್ರ ಮಂಜೇಶ್ವರ,ಪದ್ಮನಾಭ ಕಡಪ್ಪುರ,ಯಾದವ ಬಡಾಜೆ ಭಾಗವಹಿಸಿ ಮಾತನಾಡಿದರು.ಚಂದ್ರಹಾಸ ಸುವರ್ಣ ಸ್ವಾಗತಿಸಿದರು. ಬಾಬು ಮಾಸ್ಟರ್ ವಂದಿಸಿದರು. Advertisement
ರೇಶನ್ ಅಕ್ಕಿಯನ್ನು ರಾಜ್ಯ ಸರಕಾರ ಬಡವರಿಗೆ ನೀಡದೆ ವಂಚಿಸಿದೆ’
11:54 AM Feb 24, 2017 | |
Advertisement
Udayavani is now on Telegram. Click here to join our channel and stay updated with the latest news.