Advertisement

ಜಿಲ್ಲಾ ಮಟ್ಟದ ಸರಣಿ ಕಾರ್ಯಕ್ರಮಗಳಿಗೆ ಚಾಲನೆ: ವರ್ಣರಂಜಿತ ಮೆರವಣಿಗೆ

12:30 AM Feb 22, 2019 | Team Udayavani |

ಕಾಸರಗೋಡು: ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ವಿಚಾರವನ್ನು ಸರಣಿ ಕಾರ್ಯಕ್ರಮಗಳ ಮೂಲಕ ಆಚರಿಸುವ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

Advertisement

ಕಾಂಞಂಗಾಡ್‌ನ‌ಲ್ಲಿ ನಡೆದ ವರ್ಣ ರಂಜಿತ ಮೆರವಣಿಗೆ ಮೂಲಕ ಒಂದು ವಾರ ಕಾಲ ನಡೆಯುವ ಈ ಸರಣಿ ಕಾರ್ಯಕ್ರಮಗಳಿಗೆ ಶುಭಾರಂಭವಾಗಿದೆ. ಜಿಲ್ಲೆಯ ಅತ್ಯಧಿಕ ಜನಸಹಭಾಗಿತ್ವ ಇದ್ದ ಮೆರವಣಿಗೆ  ಪುದಿಯಕೋಟೆ ಮಾಂತೋಪ್‌ ಮೈದಾನದಲ್ಲಿ ಆರಂಭಗೊಂಡು ಕಾಂಞಂಗಾಡ್‌ ನಗರದಲ್ಲಿ ಪರ್ಯಟನೆ ನಡೆಸಿ ನಾರ್ತ್‌ ಕೋಟೆಚ್ಚೇರಿಯಲ್ಲಿ ಸಮಾಪ್ತಿಗೊಂಡಿತು.

ಕಾಂಞಂಗಾಡ್‌ ನಗರಸಭೆ ಅಧ್ಯಕ್ಷ ವಿ.ವಿ. ರಮೇಶನ್‌, ಉಪಜಿಲ್ಲಾಧಿಕಾರಿ ಅರುಣ್‌ ಕೆ.ವಿಜಯ್‌, ಕಾಂಞಂಗಾಡ್‌ ನಗರಸಭೆ ಉಪಾಧ್ಯಕ್ಷೆ ಎನ್‌ ಸುಲೈಖಾ, ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬಂದಿ, ಸಾರ್ವಜನಿಕರ ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು.

ಆರೋಗ್ಯ ಕಾರ್ಯಕರ್ತರು, ಎನ್‌ಸಿಸಿ,, ಎನ್‌.ಎಸ್‌.ಎಸ್‌. ಸ್ವಯಂ ಸೇವಕರು, ವಿದ್ಯಾರ್ಥಿ ಪೊಲೀಸರು, ಜೂನಿಯರ್‌ ರೆಡ್‌ ಕ್ರಾಸ್‌, ವ್ಯಾಪಾರಿಗಳು, ಲಯನ್ಸ್‌, ರೋಟರಿ ಕ್ಲಬ್‌ ಪ್ರತಿನಿಧಿಗಳು, ಹರಿತ ಕ್ರಿಯಾ ಸೇನೆ, ಮಹಿಳಾ ಒಕ್ಕೂಟಗಳ ಸದಸ್ಯೆಯರು, ಬಾಡಿಗೆ ವಾಹನ ಚಾಲಕರು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು. ನಾರ್ತ್‌ ಕೋಟೆಚ್ಚೇರಿಯಲ್ಲಿ   ನಡೆದ    ಸಾರ್ವ ಜನಿಕ ಸಭೆಯಲ್ಲಿ  ಕಾಂಞಂ ಗಾಡ್‌ ನಗರಸಭೆ ಅಧ್ಯಕ್ಷ ವಿ.ವಿ. ರಮೇಶನ್‌, ಉಪ ಜಿಲ್ಲಾಧಿಕಾರಿ ಅರುಣ್‌ ಕೆ.ವಿಜಯ್‌, ನಗರಸಭೆ ಉಪಾಧ್ಯಕ್ಷೆ ಎನ್‌. ಸುಲೈಖಾ, ಸ್ಥಾಯೀ ಸಮಿತಿ ಅಧ್ಯಕ್ಷ ಎನ್‌. ಉಣ್ಣಿ ಕೃಷ್ಣನ್‌, ಟಿ.ವಿ. ಭಾಗೀರಥಿ, ಗಂಗ ರಾಧಾಕೃಷ್ಣನ್‌ ಉಪಸ್ಥಿತರಿದ್ದರು.

ಮುತ್ತುಕೊಡೆ, ಶಿಂಗಾರಿ-ಬ್ಯಾಂಡ್‌ ಮೇಳ ಗಮನ ಸೆಳೆದುವು. ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ವೀರ ಮೃತ್ಯುವನ್ನಪ್ಪಿದ ಭಾರತೀಯ ಯೋಧರ ಕುರಿತು ಕಲಾವಿದ ಪಾರ್ಕೋ ಅತಿಯಾಂಬೂರ್‌ ಪ್ರಸ್ತುತ ಪಡಿಸಿದ ಪ್ಲೋಟ್‌ ಜನಾಕರ್ಷಣೆ ಪಡೆಯಿತು. ಕಾಂಞಂಗಾಡ್‌ ನಗರಸಭೆ, ಅಜಾನೂರು, ಪಳ್ಳಿಕ್ಕರೆ, ಪುಲ್ಲೂರು-ಪೆರಿಯ, ಮಡಿಕೈ ಗ್ರಾ. ಪಂ.ಗಳ ಕುಟುಂಬಶ್ರೀ ಸದಸ್ಯೆಯರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next