Advertisement
ಏನಿದು 5ಜಿ?5ಜಿ ಎಂದರೆ ಸದ್ಯ ಇರುವ ಲಾಂಗ್ ಟರ್ಮ್ ಎವೆಲ್ಯೂಶನ್(ಎಲ್‌ಟಿಇ)ಯ ಅಪ್‌ಗ್ರೇಡೆಡ್ ತಂತ್ರಜ್ಞಾನ. ಇದು ಮೂರು ಬ್ಯಾಂಡ್‌ಗಳಲ್ಲಿ ಕೆಲಸ ಮಾಡುತ್ತದೆ. ಅವುಗಳೆಂದರೆ- ಕಡಿಮೆ, ಮಧ್ಯಮ ಮತ್ತು ಗರಿಷ್ಠ ಪ್ರೀಕ್ವೆನ್ಸಿ. ಕಡಿಮೆ ಬ್ಯಾಂಡ್ ಫ್ರೀಕ್ವೆನ್ಸಿಯಲ್ಲಿ 100 ಎಂಬಿಪಿಎಸ್‌ವರೆಗೆ ಇಂಟರ್ನೆಟ್ ವೇಗ ಪಡೆಯಬಹುದು. ಇದನ್ನು ಸಾಮಾನ್ಯ ಗ್ರಾಹಕರು ಮಾತ್ರ ಬಳಕೆ ಮಾಡಬಹುದು. ಕೈಗಾರಿಕೆಗಳು, ಉದ್ಯಮಗಳಿಗೆ ಇದು ಸೂಕ್ತವಾದುದಲ್ಲ. ಮಧ್ಯಮ ಬ್ಯಾಂಡ್ ಫ್ರೀಕ್ವೆನ್ಸಿಯಲ್ಲಿ ಕಡಿಮೆ ಬ್ಯಾಂಡ್‌ನ ಫ್ರೀಕ್ವೆನ್ಸಿಗಿಂತ ಹೆಚ್ಚಿನ ವೇಗ ಸಿಗುತ್ತದೆ. ಆದರೆ ವ್ಯಾಪ್ತಿ ಲೆಕ್ಕಾಚಾರದಲ್ಲಿ ಇದರ ಸೀಮಿತತೆ ಕಡಿಮೆ ಇರುತ್ತದೆ. ಆದರೂ, ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಬಳಕೆ ಮಾಡುತ್ತಾರೆ. ಇನ್ನು ಗರಿಷ್ಠ ಫ್ರೀಕ್ವೆನ್ಸಿಯಲ್ಲಿ 20ಜಿಬಿಪಿಎಸ್‌ವರೆಗೆ ಸ್ಪೀಡ್ ಸಿಗುತ್ತದೆ. ಇಲ್ಲೂ ವ್ಯಾಪ್ತಿ ಲೆಕ್ಕಾಚಾರದಲ್ಲಿ ಸೀಮಿತತೆ ಇದೆ.
ಮೊದಲಿಗೆ ದೂರಸಂಪರ್ಕ ಸೇವಾದಾರರಾದ ಏರ್‌ಟೆಲ್, ಜಿಯೋ, ವೋಡಾಫೋನ್ ಐಡಿಯಾ ಕಂಪೆನಿಗಳು 5ಜಿ ತಂತ್ರಜ್ಞಾನಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಿ, ಮಹಾನಗರಗಳಲ್ಲಿ ಒಂದು ಸುತ್ತಿನ ಪ್ರಯೋಗವನ್ನೂ ಮುಗಿಸಿವೆ. ಇದನ್ನೂ ಓದಿ:ಲುಧಿಯಾನ ಕೋರ್ಟ್ ಸ್ಫೋಟ ಪ್ರಕರಣ : ಆರೋಪಿ ಜರ್ಮನಿಯಲ್ಲಿ ಅರೆಸ್ಟ್
Related Articles
2022ರ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿ 5ಜಿ ಸ್ಪೆಕ್ಟ್ರಂ ಹರಾಜು ಹಾಕಲಾಗುತ್ತದೆ. ಸೆಪ್ಟಂಬರ್ ವೇಳೆಗೆ ಮಹಾನಗರಗಳಲ್ಲಿ 5ಜಿ ಸೇವೆ ಕೊಡುವ ಯೋಜನೆಯನ್ನು ಕಂಪೆನಿಗಳು ಹಾಕಿಕೊಂಡಿವೆ.
Advertisement
ಗ್ರಾಹಕರಿಗೆ ಲಾಭವೇನು?ಮೊಬೈಲ್ ಬಳಕೆದಾರರಿಗೆ ಇದರಿಂದ ಗರಿಷ್ಠ ಲಾಭವಿದೆ. ಸದ್ಯ 4ಜಿ ಮತ್ತು ಇದರ ಅಪ್‌ಗ್ರೇಡ್ ವರ್ಷನ್ ಎಲ್‌ಟಿಇನಲ್ಲಿ ಗರಿಷ್ಠ 100 ಎಂಬಿಪಿಎಸ್‌ವರೆಗೆ ಸ್ಪೀಡ್ ಸಿಗುತ್ತಿದೆ. 5ಜಿ ಬಂದ ಮೇಲೆ ಇದಕ್ಕೂ ಹೆಚ್ಚು ವೇಗ ಸಿಗಬಹುದು. ಅಲ್ಲದೆ ಮೊಬೈಲ್‌ನಲ್ಲಿ ಸ್ಟ್ರೀಮ್ ಆ್ಯಪ್‌ಗಳ ಮೂಲಕ ಸಿನೆಮಾಗಳನ್ನು ಯಾವುದೇ ಅಡ್ಡಿ ಇಲ್ಲದೇ ವೀಕ್ಷಿಸಬಹುದು.