Advertisement

Kannada Cinema; ತುಂಬಾನೇ ಕೇಳಲಾರೆ…: ‘ಮಾಫಿಯಾ’ದಿಂದ ಹಾಡು ಬಂತು

02:31 PM Jan 05, 2024 | Team Udayavani |

ಪ್ರಜ್ವಲ್‌ ದೇವರಾಜ್‌ ನಟಿಸಿರುವ “ಮಾಫಿಯಾ’ ಚಿತ್ರ ರಿಲೀಸ್‌ ಹಂತಕ್ಕೆ ಬಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ಹಿಟ್‌ಲಿಸ್ಟ್‌ ಸೇರಿದೆ. ಈಗ ಚಿತ್ರದ ಮೆಲೋಡಿ ಹಾಡೊಂದು ಬಿಡುಗಡೆಯಾಗಿದೆ. “ತುಂಬಾನೇ ಕೇಳಲಾರೆ..’ ಎಂಬ ರೊಮ್ಯಾಂಟಿಕ್‌ ಸಾಂಗ್‌ ರಿಲೀಸ್‌ ಆಗಿದ್ದು, ಪ್ರಮೋದ್‌ ಮರವಂತೆ ಅವರ ಸಾಹಿತ್ಯವಿದೆ. ಹರಿ ಚರಣ್‌ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು, ಅನೂಪ್‌ ಸೀಳೀನ್‌ ಸಂಗೀತ ನಿರ್ದೇಶಕರು.

Advertisement

ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಮಾಫಿಯಾ’ ಸಿನಿಮಾದಲ್ಲಿ ಪ್ರಜ್ವಲ್‌ ದೇವರಾಜ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ಜೋಡಿಯಾಗಿದ್ದಾರೆ. ಉಳಿದಂತೆ ದೇವರಾಜ್‌, ಸಾಧು ಕೋಕಿಲ, ಶೈನ್‌ ಶೆಟ್ಟಿ, ವಿಜಯ್‌ ಚೆಂಡೂರ್‌, ವಾಸುಕಿ ವೈಭವ್‌ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಮಾಫಿಯಾ’ ಪ್ರಜ್ವಲ್‌ ದೇವರಾಜ್‌ ಅಭಿನಯದ 35ನೇ ಸಿನಿಮಾವಾಗಿದ್ದು, ತಮ್ಮ ಪಾತ್ರಕ್ಕಾಗಿ ಪ್ರಜ್ವಲ್‌ ಸಾಕಷ್ಟು ಶ್ರಮವಹಿಸಿ, ಹಲವು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಮಾಫಿಯಾ’ದಲ್ಲಿ ಐದು ಭರ್ಜರಿ ಸಾಹಸ ಸನ್ನಿವೇಶಗಳಿದ್ದು, ವಿನೋದ್‌, ರಿಯಲ್‌ ಸತೀಶ್‌, ಡಿಫ‌ರೆಂಟ್‌ ಡ್ಯಾನಿ ಹಾಗೂ ಜಾಲಿ ಬಾಸ್ಟಿನ್‌ ಸಿನಿಮಾದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಕುಮಾರ್‌ ಬಿ.ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಮಾಫಿಯಾ’ ಸಿನಿಮಾಕ್ಕೆ ಲೋಹಿತ್‌ ಹೆಚ್‌. ನಿರ್ದೇಶನದಲ್ಲಿ ಮೂಡಿಬರುತ್ತಿದೆ.

ಸಿನಿಮಾದ ಮೂರು ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಎಸ್‌. ಪಾಂಡಿಕುಮಾರ್‌ ಛಾಯಾಗ್ರಹಣವಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಫೆಬ್ರವರಿಯಲ್ಲಿ “ಮಾಫಿಯಾ’ ಸಿನಿಮಾವನ್ನು ಥಿಯೇಟರ್‌ಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next