Advertisement

ಮದ್ಯದ ಅಮಲಿನಲ್ಲಿ ತಾಯಿಯನ್ನೆ ಕೊಲೆಗೈದ ಮಗ

11:50 AM Jul 04, 2017 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಮಗನೊಬ್ಬ ತನ್ನ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೈಯಪ್ಪನಹಳ್ಳಿಯ ಬಂಡೆನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಸರಸ್ವತಿ(45) ಕೊಲೆಯಾದವರು.  ಆರೋಪಿ ಪ್ರಭಾಕರ್‌(25)ನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

 ಆಟೋ ಚಾಲಕನಾಗಿರುವ ಪ್ರಭಾಕರ್‌ ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ನಂತರ ತಾಯಿ ಸರಸ್ವತಿ ಜತೆ ಜಗಳ ತೆಗೆದು ಅಲ್ಲೇ ಇದ್ದ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. 

ಬಂಡೆನಗರದ ಮನೆಯಲ್ಲಿ ತಂದೆ-ತಾಯಿಯೊಂದಿಗೆ ವಾಸವಿದ್ದ ಪ್ರಭಾಕರ್‌ ಆಟೋ ಓಡಿಸುತ್ತಿದ.ª ನಿತ್ಯ ಕುಡಿದು ಬರುತ್ತಿದ್ದ ಆತ ತಾಯಿಯೊಂದಿಗೆ ಜಗಳ ತೆಗೆಯುತ್ತಿದ್ದ. ಅದೇ ರೀತಿ ಭಾನುವಾರವೂ ಜಗಳ ತೆಗೆದಿದ್ದ. ವಿಕೋಪಕ್ಕೆ ಹೋದ ಜಗಳ ಕೊನೆಗೆ ಸರಸ್ವತಿ ಅವರ ಕೊಲೆಯಲ್ಲಿ ಅಂತ್ಯಗೊಂಡಿದೆ.

ಶವದ ಜತೆ ಇದ್ದ ಆರೋಪಿ: ಮದ್ಯದ ಅಮಲಿನಲ್ಲಿ ತಾಯಿಯನ್ನೆ ಕೊಲೈಗೈದ ಆರೋಪಿ ಪ್ರಭಾಕರ್‌ ಬೆಳಗ್ಗೆ 8 ಗಂಟೆವರೆಗೆ ತಾಯಿ ಶವದ ಪಕ್ಕದಲ್ಲಿಯೇ ನಿದ್ರಿಸಿದ್ದ. ಬೆಳಗ್ಗೆ ಮನೆಗೆ ಬಂದ ಸರಸ್ವತಿ ಅವರ ಪತಿ ನಟರಾಜ್‌ ಬಹಳಷ್ಟು ಬಾರಿ ಬಾಗಿಲು ಬಡಿದ್ದಾರೆ. ಆದರೆ, ಒಳಗಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನಗೊಂಡ ನಟರಾಜ್‌ ಅಕ್ಕ-ಪಕ್ಕದವರನ್ನು ವಿಚಾರಿಸಿದಾಗ ರಾತ್ರಿ ಮನೆಯಲ್ಲಿ ಗಲಾಟೆ ನಡೆದಿದ್ದನ್ನು ವಿವರಿಸಿದ್ದಾರೆ.

ನಂತರ ಬಾಗಿಲು ಒಡೆದು ನೋಡಿದಾಗ ತಾಯಿ ಶವದ ಸಮೀಪದಲ್ಲಿಯೇ ಪ್ರಭಾಕರ್‌ ಮಲಗಿದ್ದ. ಬಳಿಕ ಆತನನ್ನು ಎಚ್ಚರಗೊಳಿಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಆರೋಪಿ ಪ್ರಭಾಕರನನ್ನು ಬಂಧಿಸಿದ್ದಾರೆ. ಪ್ರಕರಣ ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next