Advertisement
ಕೋವಿಡ್ -19 ಮಹಾಮಾರಿಯನ್ನು ಸಂಪೂರ್ಣ ವಾಗಿ ನಿಯಂತ್ರಿಸಬೇಕಾದರೂ ಜನರ ಪಾತ್ರ ಬಹು ಮುಖ್ಯ ವಾದುದು. ಲಸಿಕೆ ಪಡೆಯುವುದು ಮತ್ತು ಇನ್ನೊಬ್ಬರು ಪಡೆದುಕೊಳ್ಳುವಂತೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಹೇಗೋ ಹಾಗೆಯೇ ಕರ್ತವ್ಯ ಕೂಡ. ಜನರು ಭಾಗಿಯಾಗುವ ಈ ಪ್ರಕ್ರಿಯೆಗೆ ಸೋಶಿಯಲ್ ವ್ಯಾಕ್ಸಿನೇಶನ್ ಎಂದು ಹೇಳಬಹುದಾಗಿದೆ. ಈ ಬಗ್ಗೆ ವೈಜ್ಞಾನಿಕವಾದ ಮತ್ತು ವೈದ್ಯಕೀಯವಾಗಿ ಅಂಗೀಕೃತ ಮಾಹಿತಿಯನ್ನು ಮಾತ್ರ ಜನರು ನಂಬಬೇಕು. ವೈಜ್ಞಾನಿಕ ಮಾಹಿತಿಯು ಸಂಶೋಧನಾ ಧಾರಿತ ಮಾಹಿತಿಯಾಗಿದ್ದು, ಸತ್ಯದ ಮೇಲೆ ನಿಂತಿರುತ್ತದೆ. ಸತ್ಯ ಸಮಸ್ಯೆಯ ಮೂಲವನ್ನು ಕಂಡುಹಿಡಿದು ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಲು ಸಹಕಾರಿಯಾಗಿದೆ.
Related Articles
Advertisement
ಕೊರೊನಾ ಸಾಂಕ್ರಾಮಿಕ ರೋಗ ದೇಶಕ್ಕೆ ಕಾಲಿಟ್ಟ ದಿನದಿಂದ ಬದಲಾದ ಬದುಕಿನ ಕಲಿಕೆಯೆಂದರೆ 20 ಸೆಕೆಂ ಡ್‌ಗಳ ಕಾಲ ಸೋಪ್‌ನಿಂದ ಚೆನ್ನಾಗಿ ನೀರಿನಲ್ಲಿ ಕೈತೊ ಳೆದು ಕೈಯನ್ನು ಸ್ವತ್ಛಗೊಳಿಸುವುದು. ತಿಂಡಿ ಅಥವಾ ಊಟಕ್ಕಿಂತ ಮುಂಚೆ, ಹೊರಗಡೆಯಿಂದ ಮನೆ ಒಳಗಡೆ ಬಂದಾಗ ನೀರಿನಲ್ಲಿ ಕೈತೊಳೆದು ಸ್ವತ್ಛವಾಗಿರುವಂತದ್ದು ಮೂಲಭೂತ ಆರೋಗ್ಯ ಶಿಕ್ಷಣವಾಗಿರುತ್ತದೆ. ಕೊರೊನಾ ಕಲಿಸಿದ ಇನ್ನೊಂದು ಬದುಕಿನ ಪಾಠ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿ ವೈಯಕ್ತಿಕ ಸ್ವತ್ಛತೆಯ ಜತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾತ್ರ ಪ್ರಮುಖವಾಗಿದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿರುತ್ತದೆ. ಮಾಸ್ಕ್ ಧರಿಸುವುದರ ಮೂಲಕ ಹೇಗೆ ವೈಯಕ್ತಿಕ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡಬಹುದು ಎನ್ನುವ ಆರೋಗ್ಯ ಶಿಕ್ಷಣವನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ತಿಳಿದುಕೊಂಡಿರುತ್ತೇವೆ.ಪ್ರತಿಯೊಬ್ಬ ಪ್ರಜೆಯು ವೈಯಕ್ತಿಕ ಜವಾಬ್ದಾರಿಯ ಜತೆಗೆ ಸಾಮಾಜಿಕ ಜವಾಬ್ದಾರಿ ಯನ್ನು ಮೈಗೂಡಿ ಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. – ಡಾ| ಬಿ. ವಸಂತ ಶೆಟ್ಟಿ, ಉಪ ಕುಲಸಚಿವರು, ರಾಜೀವ್ ಗಾಂಧಿ ಆರೋಗ್ಯ ವಿವಿ