Advertisement

ಎಚ್ಡಿಕೆ ಹೇಳಿಕೆ ಹಿಂದೆ ಒಳ ಒಪ್ಪಂದದ ವಾಸನೆ

10:40 PM Oct 29, 2019 | Team Udayavani |

ಬೆಳಗಾವಿ: ಸಿಎಂ ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಪತನಗೊಳಿಸಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಯ ಹಿಂದೆ ಬಿಜೆಪಿ ಹಾಗೂ ಜೆಡಿಎಸ್‌ ಮಧ್ಯೆ ಮತ್ತೆ ಒಳಒಪ್ಪಂದ ಆಗಿರಬಹುದು ಎನ್ನುವ ಸೂಚನೆ ಕಂಡು ಬರುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಜೆಡಿಎಸ್‌ನಿಂದ ಕೆಲ ಶಾಸಕರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಅದನ್ನು ತಪ್ಪಿಸಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಹುಶಃ ಕುಮಾರಸ್ವಾಮಿ ಈ ರೀತಿ ಒಪ್ಪಂದ ಮಾಡಿಕೊಂಡಿರಬಹುದು. ಅಂತಹ ವಾಸನೆ ಈಗ ಬರುತ್ತಿದೆ ಎಂದು ರಾಜ್ಯದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗೆ ಹೊಸ ವ್ಯಾಖ್ಯಾನ ನೀಡಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುತೇಕ ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಆಗ ಸಹಜವಾಗಿಯೇ ಬಿಜೆಪಿ ಸರಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ ಚುನಾವಣೆ ಬರಲಿದೆ ಎಂದು ಹೇಳಿದ್ದೆ. ಆದರೆ, ಕುಮಾರಸ್ವಾಮಿ ಅವರು ಇದನ್ನು ಬೇರೆ ರೀತಿ ಯಲ್ಲೇ ಅರ್ಥೈಸಿಕೊಂಡಿದ್ದಾರೆ. ಅವರ ಮಾತಿನ ಧಾಟಿ ನೋಡಿದರೆ ಬಹುಶಃ ಬಿಜೆಪಿ ಜತೆ ಒಳಒಪ್ಪಂದ ನಡೆದಿರಬ ಹುದು ಎಂಬ ಅನುಮಾನ ಬರುತ್ತದೆ ಎಂದು ಹೇಳಿದರು.

“ಸರ್ಕಾರ ಬೀಳಿಸುವುದು ಅಥವಾ ಉಳಿಸುವುದು ನನಗೆ ಗೊತ್ತಿಲ್ಲ, ಅದೇನಿದ್ದರೂ ದೇವೇಗೌಡರ ಕುಟುಂಬಕ್ಕೆ ಗೊತ್ತಿದೆ’ ಎಂದು ತಿರುಗೇಟು ನೀಡಿದ ಸಿದ್ದರಾಮಯ್ಯ, “ಕುಮಾರಸ್ವಾಮಿ ಹೇಳಿದಂತೆ ನಾನು ಯಾವತ್ತೂ ಹಗಲು ಕನಸು ಕಾಣುವವನಲ್ಲ. ಕನಸು ಕಾಣುವುದೇ ಇದ್ದರೆ ಅದು ರಾತ್ರಿ ಹೊತ್ತು ಮಾತ್ರ’ ಎಂದರು.

12 ಅಭ್ಯರ್ಥಿಗಳ ಹೆಸರು ಅಂತಿಮ: ಸಿದ್ದು
ಬೆಳಗಾವಿ: 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವ ಣೆಗೆ ಕಾಂಗ್ರೆಸ್‌ ಸಂಪೂರ್ಣ ಸಜ್ಜಾಗಿದೆ. ಈಗಾಗಲೇ 10 ರಿಂದ 12 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಸಹ ಅಂತಿ ಮಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಕೆಲವು ಸ್ನೇಹಿತರ ಜೊತೆ ಕುಳಿತು ಅನೌಪಚಾರಿಕ ವಾಗಿ ಮಾತನಾಡಿದ್ದು, ಸಾಮಾ ಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ ಹರಟೆ ಹೊಡೆಯುತ್ತ ಕುಳಿತಿ ರುವಾಗ ಅದನ್ನು ರೆಕಾರ್ಡ್‌ ಮಾಡುವುದು ಮೊದಲ ತಪ್ಪು. ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಎರಡನೇ ತಪ್ಪು. ನಾನು ಯಾವುದೇ ಜಾತಿ ಅಥವಾ ವ್ಯಕ್ತಿಯ ಪರ ಅಥವಾ ವಿರುದ್ಧವಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next