Advertisement
ಅಡುಗೆ ಬಳಕೆಯಾಗುವಂತಹ ಸಲಕರಣೆಗಳು ಆ್ಯಪ್‌ಗೆ ಜೋಡಣೆಯಾದರೆ ಕೆಲಸ ಸಲೀಸಾಗುತ್ತದೆ. ಈ ನಿಟ್ಟಿನಲ್ಲಿ ಇನ್‌ಸ್ಟಂಟ್ ಪಾಟ್ ನ್ನು ಪರಿಚಯಿಸಲಾಗಿದೆ. ಈ ಪಾಟ್ ಪ್ರೆಶರ್ ಕುಕರ್, ರೈಸ್ ಕುಕರ್, ಸ್ಟೀಮರ್, ಯೋಗ್ಹರ್ಟ್ ಮೇಕರ್, ಕೇಕ್ ಮೇಕರ್ ಹಾಗೂ ವಾರ್ಮರ್ ಆಗಿ ಬಳಸಬಹುದು. ಇದರ ಜತೆಗೆ ಮಸಾಲೆಗಳನ್ನು ಕೂಡ ಹುರಿಯಬಹುದು. ಇನ್ ಸ್ಟಂಟ್ ಪಾಟ್ ವಿಶೇಷವೆಂದರೆ ಇದು ವೈಫೈ ಆಧಾರಿತವಾಗಿ ಚಾಲ್ತಿಯಲ್ಲಿರುತ್ತದೆ ಅಲ್ಲದೇ ಮೊಬೈಲ್ ಆ್ಯಪ್ ಗೆ ಜೋಡಣೆಯಾಗಿರುತ್ತದೆ.
Related Articles
Advertisement
ಆನ್ಲೈನ್ ನಲ್ಲಿ ಖರೀದಿಸಬಹುದಾದ ಪಾಟ್ ಜೊತೆಗೆ ಸ್ಟೇನ್ ಲೆಸ್ ಸ್ಟೀಲ್ ಸ್ಟೀಮ್ ರ‍್ಯಾಕ್, ಸೂಪ್ ಸ್ಪೂನ್, ಅಳತೆ ಕಪ್ ಗಳನ್ನು ನೀಡಲಾಗುತ್ತದೆ. ಇದರ ಕಾರ್ಯನಿರ್ವಹಣೆಗೆ 120ವ್ಯಾಟ್– 60ಎಚ್ ಝೆಡ್ ವಿದ್ಯುತ್ ಅಗತ್ಯವಿದೆ. ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಪಾಟ್ ನಲ್ಲಿ ಸೇಫ್ಟಿ ಲಾಕ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.
ಐಒಎಸ್ ಮತ್ತು ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಉಚಿತ ಪಾಟ್ ಆ್ಯಪ್ ಇದ್ದು ನೂರಾರು ತಿನಿಸುಗಳ ತಯಾರಿಯನ್ನು ಅಳವಡಿಸಲಾಗಿದೆ. ಈ ಪಾಟ್ ನಲ್ಲಿ ಒಮ್ಮೆಗೆ ಆರು ಜನರಿಗೆ ಸಾಕಾಗುವಷ್ಟು ಅಡುಗೆ ಮಾಡಬಹುದು. ಪಾಟ್‌ನ ಒಳಗಿರುವ ಸ್ಟೇನ್‌ಲೆಸ್ ಸ್ಟೀಲ್‌ನ ಭಾಗ ಹಲವು ವರ್ಷಗಳ ಕಾಲ ಬಾಳಿಕೆ ಬರುವುದಲ್ಲದೇ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಕೂಡ. ಬ್ಯಾಚುಲರ್ಸ್ ಹಾಗೂ ಕೆಲಸಕ್ಕೆ ಹೋಗುವವರಿಗೆ ತರಾತುರಿಯಲ್ಲಿ ಅಡಿಗೆ ಮಾಡಲು ಇದೊಂದು ಉಪಯುಕ್ತ ಸಾಧನ.