Advertisement
ಅಸಂಖ್ಯಾತ ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಆದರೆ ಅವರಿಗೆ ಕನ್ನಡಚಿತ್ರರಂಗದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿತಂದುಕೊಟ್ಟ ಸಿನಿಮಾ ಸಂಗೀತ ಸಾಗರ “ಗಾನಯೋಗಿ ಪಂಚಾಕ್ಷರ ಗವಾಯಿ’. ಗದುಗಿನ ವೀರೇಶ್ವರಪುಣ್ಯಾಶ್ರಮದ ಗಾನಯೋಗಿ ಪಂಚಾಕ್ಷರ ಗವಾಯಿಗಳ ಜೀವನಚರಿತ್ರೆ ಆಧಾರಿತ ಚಲನಚಿತ್ರ ಇದು.
Related Articles
Advertisement
1995ರಲ್ಲಿತೆರೆಕಂಡ “ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮ ಹಾಗೂ ಪೂಜ್ಯರ ಸಂಗೀತ ಮತ್ತು ಸಾಮಾಜಿಕ ಸೇವೆ ಹೆಚ್ಚು ಪ್ರಚಾರಪಡಿಸಿತ್ತು. ಹೀಗಾಗಿ ಎಸ್ಪಿಬಿ ಅವರ ಅಗಲಿಕೆಯಿಂದ ಪುಣ್ಯಾಶ್ರಮದ ಭಕ್ತರು ಹಾಗೂ ಸಂಗೀತ ಪ್ರಿಯರನ್ನು ಶೋಕದಲ್ಲಿ ಮುಳುಗಿಸಿದೆ.
ವೀರೇಂದ್ರ ನಾಗಲದಿನ್ನಿ
ನಿಮ್ಮ ನಾವು ಮರೆತರೇನು ಸುಖವಿದೆ…
ನಾನು ನಿಜಕ್ಕೂ ಪುಣ್ಯವಂತ. ಎಸ್‌ಪಿಬಿಯಂಥ ದಿಗ್ಗಜ ಗಾಯಕ ನನ್ನ ಚಿತ್ರಗಳಿಗೆ ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕಲಾತ್ಮಕ ಚಿತ್ರದಿಂದ ಆರಂಭವಾದ ನನ್ನ ಹಾಗೂ ಎಸ್ಪಿಬಿಯವರ ಪಯಣ ನಿರಂತರವಾಗಿ ಮುಂದುವರಿಯುತ್ತಲೇ ಬಂತು. ನನ್ನ “ಹಂಸಗೀತೆ’ ಸಿನಿಮಾಕ್ಕೆ ಎಸ್ಪಿಬಿ ಹಾಡಿದ್ದರು. “ದೇವರಕಣ್ಣು’ ಚಿತ್ರದಲ್ಲಿ ಅವರು “ನಿನ್ನ ನೀನು ಮರೆತರೇನು ಸುಖವಿದೆ…’ ಹಾಡನ್ನು ಹಾಡಿದರು. ಅದು ಯಾವ ಮಟ್ಟಿಗೆ ಜನಪ್ರಿಯವಾಯಿತೆಂದರೆ ಬಹುಶಃ ಆ ಹಾಡನ್ನು ಕೇಳದವರೇ ಇಲ್ಲ. ಆ ಚಿತ್ರವೂ ದೊಡ್ಡ ಹಿಟ್ ಆಯಿತು. ನನ್ನ ನಂಬಿಕೆ ಏನೆಂದರೆ ಆ ಚಿತ್ರದ ಹಾಡನ್ನು ಎಷ್ಟು ಜನ ನೋಡಿದ್ರೋ ಅಷ್ಟು ಜನ ಆ ಸಿನಿಮಾವನ್ನು ನೋಡಿಲ್ಲ. ಅಷ್ಟೊಂದು ಜನಪ್ರಿಯವಾಯಿತು.
ಆ ನಂತರ ಅವರು ನನ್ನ “ಬಯಲುದಾರಿ’, “ನಾ ನಿನ್ನ ಬಿಡಲಾರೆ’ ಚಿತ್ರಕ್ಕೂ ಹಾಡಿದರು. ಆ ಚಿತ್ರಗಳ ಹಾಡುಗಳುಕೂಡಾ ಸೂಪರ್ ಡೂಪರ್ ಹಿಟ್ ಆಯಿತು.ಅಲ್ಲಿವರೆಗೂ ನಾನು ಹಾಗೂ ಎಸ್ಪಿಬಿಯವರು ಭೇಟಿಯಾಗಿರಲಿಲ್ಲ. ನನ್ನ ಹಾಗೂ ಎಸ್ಪಿಬಿಯವರ ಭೇಟಿಯಾಗಿದ್ದು ಹೈದರಾಬಾದ್‌ನಲ್ಲಿ. ಅದೊಂದು ದಿನ ನಾನು ಹೈದರಾಬಾದ್‌ಗೆ ಹೋಗಿದ್ದಾಗ ಅದೇ ಹೋಟೆಲ್‌ನಲ್ಲಿ ಎಸ್ಪಿಬಿಯವರು ಇದ್ದರು. ಆಗ ನಮ್ಮಿಬ್ಬರ ಮುಖತಃ ಭೇಟಿಯಾಯಿತು. ಮರು ದಿನ ನನಗೆ ಶೂಟಿಂಗ್ ಇರಲಿಲ್ಲ. ಆಗ ನಾನು ಎಸ್ಪಿಬಿಯವರಲ್ಲಿ, “ಇವತ್ತು ನಾನು ನಿಮ್ಮ ಜೊತೆಬರಬಹುದೇ’ ಎಂದು ಕೇಳಿದೆ. ಎಸ್ಪಿಬಿಯವರು, “ಬನ್ನಿ, ಆದರೆ ನನಗೆ ರೆಕಾರ್ಡಿಂಗ್ ಇದೆ’ ಎಂದರು. ಪರ್ವಾಗಿಲ್ಲ ಎಂದುಕೊಂಡು ಹೋದೆ. ಅವರು ಎಷ್ಟು ಬಿಝಿಯಾಗಿದ್ದರೆಂದರೆ ಒಂದರ ಹಿಂದೊಂದರಂತೆ ಹಾಡುಗಳನ್ನು ರೆಕಾರ್ಡಿಂಗ್ ಮಾಡುತ್ತಿದ್ದರು.ಊಟ
ಕೂಡಾ ಮಾಡುವಷ್ಟು ಸಮಯ ಅವರಿಗಿರಲಿಲ್ಲ. ಆದರೆ, ಅವರ ಜೊತೆ ಹೋಗಿದ್ದ ನನ್ನ ಊಟದ ಕುರಿತಾಗಿ ವಿಚಾರಿಸುತ್ತಲೇ ಇದ್ದರು. ಆದರೆ, ಅವರು ಸಂಜೆವರೆಗೂ ಊಟ ಮಾಡಲೇ ಇಲ್ಲ. ಅವರೊಬ್ಬ ದೈತ್ಯ ಪ್ರತಿಭೆ. ಅದಕ್ಕಿಂತ ಹೆಚ್ಚಾಗಿ ಅವರಲ್ಲಿನ ವಿನಮ್ರತೆ ಎಂಥವರನ್ನು ತಲೆದೂಗುವಂತೆ ಮಾಡುತ್ತದೆ. ಒಂದು ಹಾಡನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡಬಹುದೋ ಅಷ್ಟು ಚೆನ್ನಾಗಿ ಕಟ್ಟಿಕೊಡುತ್ತಾರೆ. ತಾನು ಯಾವ ಹೀರೋಗೆ ಹಾಡುತ್ತೇನೋ, ಆ ಹೀರೋನಾ ಮ್ಯಾನರಿಸಂ ಅನ್ನು ಅರ್ಥಮಾಡಿಕೊಂಡು ಹಾಡುವ ನಿಜವಾದ ಗಾಯಕ. ತಾನು ಯಾವ ಭಾಷೆಗೆ ಹಾಡುತ್ತೇನೋ, ಆ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದ ಅದ್ಭುತ ವ್ಯಕ್ತಿ. ನನ್ನ ಪ್ರಕಾರ ನಿಜವಾದ ಅಜಾತ ಶತ್ರುವೆಂದರೆ ಅದು ಎಸ್ಪಿಬಿ. ಅವರನ್ನು ಪ್ರೀತಿಸದ, ಗೌರವಿಸದ ವ್ಯಕ್ತಿಗಳಿಲ್ಲ. ಇಂತಹ ಅದ್ಭುತ ಗಾಯಕ ನನ್ನ ಹಲವು ಸಿನಿಮಾಗಳಿಗೆ ಹಾಡಿದ್ದಾರೆ ಹಾಗೂ ಅವರೊಂದಿಗೆ ಒಳ್ಳೆಯ ಒಡನಾಟವಿಟ್ಟುಕೊಂಡಿದ್ದೆ ಎಂಬುದೇ ನನಗೆ ಪುಳಕ. ಅನಂತ್‌ನಾಗ್, ಹಿರಿಯ ನಟ