Advertisement

ಪುತ್ರ ಅಬ್ರಾಮ್‌ ಜತೆ ಶಾರೂಖ್‌ ರೇಸ್‌

01:38 PM May 15, 2017 | Team Udayavani |

ಕೋಲ್ಕತಾ: ಶನಿವಾರ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಕೋಲ್ಕತಾ ಮತ್ತು ಮುಂಬೈ ನಡುವಿನ ಪಂದ್ಯದ ವೀಕ್ಷಕರಿಗೆ ಡಬಲ್‌ ಮನೋರಂಜನೆ ಸಿಕ್ಕಿದೆ. ಒಂದು ಆಟಗಾರರ ಪ್ರದರ್ಶನವಾಗಿದ್ದರೆ ಮತ್ತೂಂದು ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರೂಖ್‌ ಖಾನ್‌ ತನ್ನ 3 ವರ್ಷದ ಮಗ ಅಬ್ರಾಮ್‌ ಜತೆ ಮೈದಾನದಲ್ಲಿಯೇ ಓಡಿರುವುದು. ಪಂದ್ಯದ ಅನಂತರ ಮೈದಾನದಲ್ಲಿ ಶಾರುಖ್‌ ತನ್ನ ಮಗನ ಜತೆ ಅಭಿಮಾನಿಗಳ ಕಡೆ ಕೈ ಬಿಸುತ್ತಾ ನಡೆದುಕೊಂಡು ಹೋಗುತ್ತಿದ್ದರು. ಒಮ್ಮೆಗೆ ನಿಂತು ಮಗನ ಜತೆ ತುಸು ಮಾತನಾಡಿದ ಶಾರೂಖ್‌ ಮಗನ ಜತೆ ಸೇರಿ ಓಡಲು ಆರಂಭಿಸಿದ್ದಾರೆ. ಶಾರೂಖ್‌ಗಿಂತ ಅಬ್ರಾಮ್‌ ವೇಗವಾಗಿ ಓಡಿದ್ದಾರೆ. ಇದು ಮೈದಾನದಲ್ಲಿದ್ದ ಕ್ರೀಡಾಭಿಮಾನಿಗಳಿಗೆ ಖುಷಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next