Advertisement

ಫ್ಯಾಷನ್‌ ನಡಿಗೆ ಮತದಾನದ ಕಡೆಗೆ ಕಾರ್ಯಕ್ರಮ

11:26 AM Apr 13, 2019 | pallavi |
ಧಾರವಾಡ: ಜಿಲ್ಲಾ ಸ್ವೀಪ್‌ ಸಮಿತಿ, ಜಿಲ್ಲಾಡಳಿತ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಆಲೂರು
ವೆಂಕಟರಾವ್‌ ಭವನದಲ್ಲಿ ಫ್ಯಾಷನ್‌ ನಡಿಗೆ ಮತದಾನದೆಡೆಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಫ್ಯಾಷನ್‌ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳು, ವಿಭಿನ್ನವಾಗಿ ವಿನ್ಯಾಸಗೊಳಿಸಿದ ಉಡುಪುಗಳೊಂದಿಗೆ ರ್‍ಯಾಂಪ್‌ ಮೇಲೆ ಮಾರ್ಜಾಲ ನಡಿಗೆ ನಡೆಸಿ ಮತದಾನದ ಸಂದೇಶ ಸಾರಿದರು. ಗ್ರಾಮೀಣ ಭಾಗದ ಶಾಲಾ ಶಿಕ್ಷಕಿಯರು ಚುನಾವಣಾ ಜಾಗೃತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಶಿಕ್ಷಕ ಕಲಾವಿದ ಮಹಾದೇವ ಸತ್ತಿಗೇರಿ ನಗೆ ಹನಿಗಳ ಮೂಲಕ ಮತದಾರರ ಜಾಗೃತಿಗಾಗಿ ಸಂದೇಶ ಬಿತ್ತರಿಸಿದರು. ಡಿಸಿ ದೀಪಾ ಚೋಳನ್‌ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸಿಇಒ ಡಾ| ಬಿ.ಸಿ. ಸತೀಶ್‌, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಾ| ನೀಲಾಬಿಂಕಾ ಪಟ್ಟಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ, ಮಂಜುನಾಥ ಡೊಳ್ಳಿನ ಸೇರಿದಂತೆ ಹಲವರು ಇದ್ದರು.
ದೂರು ಸ್ವೀಕಾರ ಕೇಂದ್ರಕ್ಕೆ ಭಾನುಪ್ರಕಾಶ ಭೇಟಿ
ಧಾರವಾಡ: ಕೇಂದ್ರ ಚುನಾವಣಾ ಆಯೋಗದಿಂದ ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡಿರುವ ಭಾನುಪ್ರಕಾಶ ಯೇಟೂರು ಅವರು ನಗರದ ಡಿಸಿ ಕಚೇರಿಯ ಚುನಾವಣಾ ವಿಭಾಗ ದೂರು ಸ್ವೀಕಾರ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದರು. ಈ ವೇಳೆ ಮತದಾರ ಸಹಾಯವಾಣಿ ಕೇಂದ್ರ, ಸಿ-ವಿಜಲ್‌ ನಿರ್ವಹಣಾ ಕೇಂದ್ರಗಳ ಕಾರ್ಯ ಪರಿಶೀಲಿಸಿದರು.
ಮಾಧ್ಯಮ ವೀಕ್ಷಣಾ ಕೇಂದ್ರಕ್ಕೆ ತೆರಳಿ ಜಿಲ್ಲೆಯ ವಿದ್ಯುನ್ಮಾನ ಮಾಧ್ಯಮಗಳ ಬಗೆಗೆ ಮಾಹಿತಿ ಪಡೆದರು. ಡಿಸಿ ದೀಪಾ ಚೋಳನ್‌, ಅಪರ ಜಿಲ್ಲಾಧಿಕಾರಿ ಡಾ| ಸುರೇಶ ಇಟ್ನಾಳ, ಚುನಾವಣಾ ವಿಭಾಗ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next