Advertisement

ಅಧಿವೇಶನಕ್ಕೆ ಕಡಿಮೆ ಅವಧಿ ನೀಡಿದ್ದು ಅನ್ಯಾಯ: ಈಶ್ವರಪ್ಪ

06:25 AM Dec 10, 2018 | Team Udayavani |

ಶಿವಮೊಗ್ಗ: ವಿಧಾನ ಮಂಡಲ ಅಧಿವೇಶನಕ್ಕೆ ಕಡಿಮೆ ಅವಧಿ ಕೊಟ್ಟಿರುವುದು ಬಹಳ ಅನ್ಯಾಯ. 11 ದಿನದಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡೋಕೆ ಆಗೋಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಜ್ವಲಂತ ಸಮಸ್ಯೆಗಳು ಇದ್ದು ಮಂತ್ರಿಗಳು ಯಾವುದೇ ಹಳ್ಳಿಗೆ ಹೋಗಿಲ್ಲ. ಯಾವ ಸಮಸ್ಯೆಗಳನ್ನು ಸರ್ಕಾರ ಗಮನಿಸುತ್ತಿಲ್ಲ. ಒಂದು ರೀತಿಯಲ್ಲಿ ಲೂಟಿ ಹೊಡೆಯಲು ತೀರ್ಮಾನ ಮಾಡಿದ್ದಾರೆ ಎಂದರು.

ಅಧಿವೇಶನ ನಡೆಯುತ್ತಿರುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದು, ಅಧಿವೇಶನಕ್ಕೆ ಗೈರು ಹಾಜರಾಗುತ್ತಾರೆಂದರೆ ಅದರ ಗಂಭೀರತೆ ಅವರಿಗಿಲ್ಲ. ವಿದೇಶಿ ಪ್ರವಾಸದ ಬಗ್ಗೆ ಕೇಳಿದರೆ ನನ್ನ ಸ್ವಂತಕ್ಕೆ ಹೋಗುತ್ತೇನೆ. ಯಾವನಿಗೆ ಕೇಳಬೇಕು ಎಂದು ಭಂಡತನದ ಉತ್ತರ ಕೊಡುತ್ತಾರೆ. ಸರ್ಕಾರದ ನೇತೃತ್ವ ವಹಿಸಿದ ವ್ಯಕ್ತಿಗಳ ಬಾಯಲ್ಲಿ ಇಂತಹ ಉತ್ತರ ಬರುತ್ತಿರುವುದು ನಮ್ಮ ದುರಾದೃಷ್ಟ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next