Advertisement

ಬಡವರ ಸೇವೆಯೇ ಭಗವಂತನ ಸೇವೆ; ಡಾ|ಬಸವಾನಂದ ಮಹಾಸ್ವಾಮೀಜಿ

05:38 PM Jan 23, 2023 | Team Udayavani |

ಮಹಾಲಿಂಗಪುರ: ಉಳ್ಳವರು ಸಮಾಜದಲ್ಲಿನ ನಿಗರ್ತಿಕರು, ಬಡವರು, ಅಂಗವಿಕಲರು, ರೋಗಿಗಳು ಸೇರಿದಂತೆ ಅವಶ್ಯಕತೆ ಇರುವವರಿಗೆ ಮಾಡುವ ಆಹಾರ, ಬಟ್ಟೆ, ಆರೋಗ್ಯ ಸೇರಿದಂತೆ ತ್ರಿವಿಧ ಸೇವೆಯೇ ಭಗವಂತನಿಗೆ ಸಲ್ಲಿಸುವ ನಿಜವಾದ ಸೇವೆಯಾಗಿದೆ ಎಂದು ಧಾರವಾಡ ಮನಗುಂಡಿಯ ಗುರುಬಸವ ಮಹಾಮನೆಯ ಡಾ| ಬಸವಾನಂದ ಮಹಾಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ, ಸದಸ್ಯೆ ಸವಿತಾ ಹುರಕಡ್ಲಿ ಅವರು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 15 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ, ಸಾಮೂಹಿಕ ವಿವಾಹ, ಸಾಮಾಜಿಕ ಹೋರಾಟಗಳ ಮೂಲಕ ನಿರಂತರ ಜನಸೇವೆ ಸಲ್ಲಿಸುತ್ತಿರುವ ಚನಬಸು ಹುರಕಡ್ಲಿಯವರ ಸಾಮಾಜಿಕ ಸೇವಾಕಾರ್ಯ ಮಾದರಿ ಮತ್ತು ಶ್ಲಾಘನೀಯ.

ಪಂಚತತ್ವಗಳು ಮತ್ತು ಆತ್ಮ ಈ ಆರು ತತ್ವಗಳು ಮತ್ತು ಅವುಗಳ ಸ್ವರೂಪ-ಕಾರ್ಯಗಳನ್ನು ಅರಿತುಕೊಂಡು, ನಿರಂತರ ಯೋಗ, ಭಕ್ತಿ, ಉಪವಾಸ, ಆತ್ಮವಿಶ್ವಾಸಗಳ ಮೂಲಕ ನಿಸರ್ಗ ಚಿಕಿತ್ಸೆಯಿಂದಲೇ ಮನುಷ್ಯನು ರೋಗಮುಕ್ತ ಜೀವನ ನಡೆಸಲು ಸಾಧ್ಯವಿದೆ ಎಂದರು.

ಆಯುರ್ವೇದ ತಜ್ಞ ಡಾ|ಹಣಮಂತ ಮಳಲಿ ಮಾತನಾಡಿ ಭಾರತ ದೇಶದಲ್ಲಿ 21 ಲಕ್ಷ ವನಸ್ಪತಿಗಳು ಲಭ್ಯವಿವೆ. ಪ್ರತಿ ಬುಧವಾರ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಔಷಧ ವಿತರಿಸುತ್ತೇವೆ. ಪ್ರತಿ ತಿಂಗಳು 5 ಸಾವಿರದಂತೆ ಇಲ್ಲಿವರೆಗೆ ಒಟ್ಟು 4 ಲಕ್ಷ 30 ಸಾವಿರ ಜನರು ನಮ್ಮ ಔಷ ಧಿಗಳನ್ನು ಪಡೆದುಕೊಂಡು ಗುಣಮುಖರಾಗಿದ್ದಾರೆ. ಕ್ಯಾನ್ಸರ್‌ ಮತ್ತು ಎಚ್‌ ಆಯ್‌ವಿ ರೋಗಿಗಳು ಗುಣಮುಖರಾಗಿದ್ದಾರೆ.

ಮಹಾಲಿಂಗಪುರದ ಚನಬಸು ಹುರಕಡ್ಲಿ ಅವರು ಕಳೆದ 15 ವರ್ಷಗಳಿಂದ ನಿರಂತರ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಂಗವಿಕಲರಿಗೆ ಕೃತಕ ಕೈಕಾಲು ಜೋಡಣೆ, ರಕ್ತದಾನ, ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಬೀದರ ಶಿವಕುಮಾರ ಮಹಾಸ್ವಾಮೀಜಿ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿದರು.

Advertisement

ಮೂಡಲಗಿ ಸಾಹಿತಿ ಬಾಲಶೇಖರ ಬಂದಿ, ಸಾನಿಧ್ಯ ವಹಿಸಿದ್ದ ಸಹಜಾನಂದ ಸ್ವಾಮೀಜಿ, ಶಿವಶಂಕರ ಸ್ವಾಮಿಜಿ, ಕಂಕನವಾಡಿ ಮಾರುತಿ ಶರಣರು, ಪತ್ರಕರ್ತ ಚಂದ್ರಶೇಖರ ಮೋರೆ, ಅದ್ವೀತಾ ಬಡಿಗೇರ ಮಾತನಾಡಿದರು. ನೇತ್ರಾಧಿಕಾರಿ ಡಾ| ವಿಜಯ ಡೋಮನಾಳ, ಡಾ|ಅಜೀತ ಕನಕರಡ್ಡಿ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಭಾಗವಹಿಸಿದ್ದರು.

ಉಚಿತ ಆರೋಗ್ಯ ಶಿಬಿರ: ಸಿ.ಎಂ.ಹುರಕಡ್ಲಿ ಫೌಂಡೇಶನ್‌ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ರಬಕವಿ-ಬನಹಟ್ಟಿ, ಮುಧೋಳ, ಜಮಖಂಡಿ, ಗೋಕಾಕ, ರಾಯಭಾಗ, ಮೂಡಲಗಿ ಸೇರಿದಂತೆ ಆರು ತಾಲೂಕಿನಿಂದ ಆಗಮಿಸಿದ್ದ 500ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆಗೆ ಮಾಡಲಾಯಿತು.

ಇದರಲ್ಲಿ 56 ಅಂಗವಿಕಲರಿಗೆ ಕೃತಕ ಕೈಕಾಲು ಜೋಡಣೆ, 55 ಜನರಿಂದ ರಕ್ತದಾನ, 75 ಜನರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ, 10 ಜನರಿಗೆ ಉಚಿತ ಕ್ಯಾನ್ಸರ್‌ ಔಷಧ ವಿತರಿಸಲಾಯಿತು. ಧಾರವಾಡದ ಬಸವಾನಂದ ಸ್ವಾಮಿಜಿ 93ನೇ, ದಾವಣಗೆರೆಯ ಶಿವಕುಮಾರ ಸ್ವಾಮೀಜಿ 92ನೇ ಬಾರಿಗೆ ರಕ್ತದಾನ ಮಾಡಿ ಗಮನ ಸೆಳೆದರು.ಚನ್ನಬಸು ಹುರಕಡ್ಲಿ, ಸವಿತಾ ಹುರಕಡ್ಲಿ, ಸೌಮ್ಯ ಹುರಕಡ್ಲಿ, ಬಸವರಾಜ ಹುರಕಡ್ಲಿ, ರವಿ ಜವಳಗಿ, ಸಿದ್ದು ಧಡೂತಿ, ಬಸವರಾಜ ಗಿರಿಸಾಗರ,
ಮಹಾಂತೇಶ ಪಾತ್ರೋಟ, ಅನಂತ ಮನವಾಡೆ, ಸಂಜು ಬಾರಕೋಲ, ಶಿವಾನಂದ ಬಿದರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next