Advertisement

ಗಂಗಾವತಿ: ಸರ್ವರ್ ತೊಂದರೆ ಪಡಿತರ ಅಕ್ಕಿ ಪಡೆಯಲು ಪರದಾಟ

02:29 PM Sep 26, 2022 | Team Udayavani |

ಗಂಗಾವತಿ: ಸಾರ್ವಜನಿಕ ಪಡಿತರ ದವಸ ಧಾನ್ಯ ವಿತರಿಸುವ ಆಹಾರ ಇಲಾಖೆಯ ಸರ್ವರ್ ತಾಂತ್ರಿಕ ತೊಂದರೆಯ ಕಾರಣ ಪಡಿತರ ವಿತರಣೆ ವಿಳಂಬವಾಗುತ್ತಿದೆ .ಎರಡರಿಂದ 3ತಾಸು ಸರ್ವರ್ ಬಾರದೇ ಇರುವುದರಿಂದ ಪಡಿತರ ಗ್ರಾಹಕರಿಗೆ ಕೂಪನ್ ನೀಡಲು ನ್ಯಾಯಬೆಲೆ ಅವರು ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಕಳೆದ 2 ತಿಂಗಳಿಂದ ಈ ತೊಂದರೆಯಾಗಿದ್ದು ಆಹಾರ ಪಡಿತರ ವಿತರಣೆ ವಿಳಂಬವಾಗುತ್ತಿದೆ .ಪ್ರತಿ ನ್ಯಾಯಬೆಲೆ ಅಂಗಡಿ ಮುಂದೆ ತಾಸುಗಟ್ಟಲೆ ಕಾಯುವ ಸ್ಥಿತಿ ಪಡಿತರ ಕಾರ್ಡುದಾರರಿಗೆ ಉಂಟಾಗಿದೆ. ಪಡಿತರ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಡಿತರಗಳನ್ನು ಹೊಂದಾಣಿಕೆ ಮಾಡಿ ಪಡಿತರ ಕಾರ್ಡುದಾರರಿಗೆ ವಿತರಣೆ ಮಾಡಬೇಕಾಗಿದೆ.ಇದರಿಂದ ಸರ್ವರ್ ಮತ್ತು ಓಟಿಪಿ ತೊಂದರೆ ಉಂಟಾಗಿದ್ದು ಇದನ್ನು ಸರಿಪಡಿಸಬೇಕಾದ ಎನ್ ಐಸಿ  ನಿರ್ಲಕ್ಷ್ಯ ವಹಿಸಿದೆ.

ಪಡಿತರ ವಿತರಣೆ ಕುರಿತು ಈಗಾಗಲೇ ಇತ್ತೀಚೆಗೆ ಮುಕ್ತಾಯವಾದ ವಿಧಾನಮಂಡಲದ ಅಧಿವೇಶನದಲ್ಲೂ ಚರ್ಚೆಯಾಗಿದ್ದು ಆಹಾರ ಇಲಾಖೆಯ ಸರ್ವರ್ ತೊಂದರೆ ನೀಗಿಸುವ ಕುರಿತು ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂದುಆಡಳಿತ ಮತ್ತು ವಿಪಕ್ಷಗಳ ಶಾಸಕರು ಸರ್ಕಾರದ ಗಮನ ಸೆಳೆದಿದ್ದರು.

ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕೂಲಿ ಕೆಲಸಕ್ಕೆ ತೆರಳದೆ ಪಡಿತರ ಪಡೆಯಲು ದಿನಗಟ್ಟಲೆ ಕಾಯುವ ಸ್ಥಿತಿ ಸಾರ್ವಜನಿಕರಿಗೆ ಉಂಟಾಗಿದೆ ಸರಕಾರ ಕೂಡಲೇ ಕ್ರಮ ಕೆಗೊಂಡು ಪಡಿತರ ವಿತರಣೆಯ ಸರ್ವರ್ ದುರಸ್ತಿ ಕಾರ್ಯ ಮಾಡಬೇಕಿದ್ದು ಪಡಿತರವನ್ನು ಪಡೆಯುವ ವ್ಯವಸ್ಥೆಯನ್ನು ಸರಳಗೊಳಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ .

ತೊಂದರೆ ಕುರಿತು ಸರ್ಕಾರಕ್ಕೆ ಪತ್ರ: ಸರ್ವರ್ ತೊಂದರೆ ಪರಿಣಾಮ ಸಾರ್ವಜನಿಕರಿಗೆ ಪಡಿತರ ವಿತರಣೆಯ ತೊಂದರೆ ಕುರಿತು ಈಗಾಗಲೇ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ ಶೀಘ್ರವೇ ತಾಂತ್ರಿಕ ಸರಿಪಡಿಸಿ ಸರ್ವರ್ ಸರಳವಾಗಿ ಸುಲಭವಾಗಿ ಪಡಿತರದಾರರಿಗೆ ಆಹಾರ ಪಡಿತರಗಳು ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಇಲಾಖೆಯ ಕೊಪ್ಪಳ ಜಿಲ್ಲಾ ಉಪನಿರ್ದೇಶಕ ಮಲ್ಲಿಕಾರ್ಜುನ್ ಉದಯವಾಣಿಗೆ ತಿಳಿಸಿದ್ದಾರೆ .

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next