Advertisement

ಹಿರಿಯ ನಾಗರಿಕರ ಚಿಕಿತ್ಸಾಲಯ, ಭ್ರೂಣ ಶಿಶು ಔಷಧ ವಿಭಾಗ ಉದ್ಘಾಟನೆ

01:32 AM Apr 24, 2019 | sudhir |

ಉಡುಪಿ: ಮಣಿಪಾಲ ಆಸ್ಪತ್ರೆಯ ಪ್ರಚಾರ ರಾಯಭಾರಿ, ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ಚಿಕಿತ್ಸಾಲಯ ವಿಭಾಗ ಮತ್ತು ಭ್ರೂಣ ಶಿಶು ಔಷಧ ವಿಭಾಗವನ್ನು ಮಂಗಳವಾರ ಉದ್ಘಾಟಿಸಿದರು.

Advertisement

ಮಣಿಪಾಲ ಆಸ್ಪತ್ರೆ ಸಮೂಹ, ಬೆಂಗಳೂರಿನ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಲಿ. ಅಧ್ಯಕ್ಷ ಡಾ| ಸುದರ್ಶನ್‌ ಬÇÉಾಳ್‌ ಅವರು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭ್ರೂಣ ಮಟ್ಟದಿಂದ ಹಿರಿಯರ ವರೆಗೂ ಮಣಿಪಾಲದಲ್ಲಿ ಎಲ್ಲ ರೀತಿಯ ಸೌಕರ್ಯಗಳು ಲಭ್ಯವಿವೆ. ಇದು ತಜ್ಞರ ಪರಿಣತಿಯೊಂದಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಹುಲ್‌ ದ್ರಾವಿಡ್‌ ಮಾತನಾಡಿ, ಭ್ರೂಣ ಶಿಶು ಔಷಧ ಮತ್ತು ಹಿರಿಯ ನಾಗರಿಕರ ಚಿಕಿತ್ಸಾಲಯವು ವೈದ್ಯ ವಿಜ್ಞಾನದಲ್ಲಿ ಒಂದು ಪ್ರಗತಿಯಾಗಿದ್ದು, ಸಾರ್ವಜನಿಕರಿಗೆ ಸಹಾಯವಾಗಲಿದೆ. ಮಣಿಪಾಲ ಸಮೂಹವು ತನ್ನ ಸಂಶೋ
ಧನ ಚಟುವಟಿಕೆಗಳಿಗೆ ಮತ್ತು ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿಗೆ ಹೆಸರು
ವಾಸಿಯಾಗಿದೆ ಎಂದು ಶ್ಲಾ ಸಿದರು.

ಆಸ್ಪತ್ರೆ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ ಸ್ವಾಗತಿಸಿ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ವಂದಿಸಿದರು. ಸುಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

“ಫಿಸಿಯೋಥೆರಪಿಗೆ ಉನ್ನತ ಅವಕಾಶ’
ಉಡುಪಿ: ಫಿಸಿಯೋಥೆರಪಿ ಮತ್ತು ಕ್ರೀಡೆ ಪರಸ್ಪರ ಪೂರಕ. ಈಗ ಬ್ಯಾಡ್ಮಿಂಟನ್‌, ಕಬಡ್ಡಿ ಮೊದಲಾದ ಆಟ ಗಳೂ ಮುಖ್ಯ ವಾಹಿನಿಯಲ್ಲಿವೆ. ಫಿಸಿಯೋಥೆರಪಿಸ್ಟ್‌ ಗಳು ಗಾಯಾಳು ಆಟಗಾರರಿಗೆ ಅಗತ್ಯ. ಫಿಸಿಯೋಗಳಿಂದ ಆಟಗಾರರ ದೈಹಿಕ ಕ್ಷಮತೆ ಹೆಚ್ಚುತ್ತದೆ. ಜಾಗತಿಕ ತಂತ್ರಜ್ಞಾನದೊಂದಿಗೆ ಫಿಸಿಯೋಥೆರಪಿ ಜನಪ್ರಿಯಗೊಳ್ಳು ತ್ತಿದೆ ಎಂದು ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಹೇಳಿದರು.

Advertisement

ಅವರು ಮಂಗಳವಾರ ಮಣಿಪಾಲ ಮೆರಿನಾ ಕ್ರೀಡಾ ಸಂಕೀರ್ಣದಲ್ಲಿ ಸಂವಾದ ನಡೆಸಿ ಮಾತನಾಡಿದರು. ವ್ಯಕ್ತಿ ಪ್ರತಿಭಾವಂತನಾಗಿದ್ದರೆ ಸಾಲದು, ಅದನ್ನು ಸಾಣೆಗೊಡ್ಡುತ್ತ ಮುಂದೆ ಸಾಗಿದರೆ ಮಾತ್ರ ಗುರಿ ತಲುಪುವುದು ಸಾಧ್ಯ ಎಂದು ದ್ರಾವಿಡ್‌ ಅಭಿಪ್ರಾಯಪಟ್ಟರು.

ಮಣಿಪಾಲ್‌ ಮ್ಯಾರಥಾನ್‌ ಥೀಂ ಅನಾವರಣ
2020ರಲ್ಲಿ ನಡೆಯುವ ಮಣಿಪಾಲ್‌ ಮ್ಯಾರಥಾನ್‌ನ ಥೀಮ್‌ “ರನ್‌ ಫಾರ್‌ ಆರ್ಗನ್‌ ಡೊನೇಶನ್‌’ ಅನಾವರಣಗೊಳಿಸಿದರು. ರಾಬಿನ್‌ ಸಿಂಗ್‌ ನ್ಪೋರ್ಟ್ಸ್ ಅಕಾಡೆಮಿಯು ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಮತ್ತು ಮಾಹೆಯ ಸಹಕಾರದೊಂದಿಗೆ ಎಂಡ್‌ ಪಾಯಿಂಟ್‌ ಮೈದಾನದಲ್ಲಿ ನಡೆಸುತ್ತಿರುವ ಕ್ರಿಕೆಟ್‌ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

“ಗೋಡೆ’ಗೆ ದ್ರಾವಿಡ್‌ ವ್ಯಾಖ್ಯಾನ
“ಭಾರತೀಯ ಕ್ರಿಕೆಟ್‌ನ ಗೋಡೆ’ ಎಂಬ ತನ್ನ ಬಗೆಗಿನ ಬಣ್ಣನೆಯ ವಿಶ್ಲೇಷಣೆ ನಡೆಸಿ, ಇದನ್ನು ಬಳಸಿದ್ದು ಪತ್ರಕರ್ತರು. ಅವರು, ನಾನು ಯಶಸ್ವಿಯಾದರೆ ಗೋಡೆಯಂತೆ ನಿಂತಿದ್ದೇನೆ ಎಂದೂ ವಿಫ‌ಲನಾದರೆ ಗೋಡೆ ಕುಸಿಯಿತು ಎಂದೂ ಅರ್ಥೈಸಿದರು.

ಆದರೆ ನಾನು ರಾಹುಲ್‌ ದ್ರಾವಿಡ್‌ ಮಾತ್ರ ಆಗಿದ್ದೇನೆ ಎಂದರು. ಇದೇವೇಳೆ ಮುಂದಿನ ವಿಶ್ವಕಪ್‌ ಕೂಟದಲ್ಲಿ ಭಾರತ ಸಹಿತ ಮೂರ್ನಾಲ್ಕು ತಂಡಗಳಿಗೆ ಕಪ್‌ ಗೆಲ್ಲುವ ಅವಕಾಶ ಇದೆ ಎಂದು ದ್ರಾವಿಡ್‌ ಅಭಿಪ್ರಾಯಪಟ್ಟರು.

ಸಮಗ್ರ ಹಿರಿಯ ನಾಗರಿಕರ ಚಿಕಿತ್ಸಾಲಯದಲ್ಲಿ 60 ವರ್ಷ ಮೀರಿದ ಹಿರಿಯ ನಾಗರಿಕರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು. ಪ್ರತಿ ಶನಿವಾರ ಇಲ್ಲಿ ತಪಾಸಣೆ ನಡೆಯಲಿದ್ದು, ಅಗತ್ಯವಿದ್ದರೆ ಇತರ ದಿನಗಳಿಗೂ ವಿಸ್ತರಿಸಲಾಗುವುದು.
 - ಡಾ| ಮಂಜುನಾಥ ಹಂದೆ, ವೈದ್ಯಕೀಯ ವಿಭಾಗ ಮುಖ್ಯಸ್ಥ

ಭ್ರೂಣ ಔಷಧ ವಿಭಾಗದಲ್ಲಿ ಗರ್ಭಸ್ಥ ಶಿಶುವಿನ ಆರೋಗ್ಯ ಸಮಸ್ಯೆಗಳನ್ನು ಪತ್ತೆಮಾಡಿ ಸರಿಪಡಿಸಲಾಗುವುದು. ಇಲ್ಲಿ ವಿವಿಧ ವಿಭಾಗಗಳ ತಜ್ಞರ ಸಂಯೋಜನೆಯೊಂದಿಗೆ ಭ್ರೂಣದ ತಪಾಸಣೆ, ಚಿಕಿತ್ಸೆ ನಡೆಸಲಾಗುವುದು.
– ಡಾ| ಅಖೀಲಾ ವಾಸುದೇವ ಸ್ತ್ರೀರೋಗ ವಿಭಾಗದ ಘಟಕ ಮುಖ್ಯಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next