Advertisement

ಮಾನವ ಓದುವ ರಹಸ್ಯ ಬಯಲು

03:50 AM Mar 14, 2017 | Team Udayavani |

ಹೊಸದಿಲ್ಲಿ: ಓದುವ ಕಲೆ ಮನುಷ್ಯನಿಗೆ ಮಾತ್ರ ಏಕೆ ಸಿದ್ಧಿಸಿದೆ? ಕಂಪ್ಯೂಟರ್‌, ಟಿವಿಯ ದೃಶ್ಯಗಳನ್ನು ನೋಡಿ ಹೇಗೆ ಅದರ ಅರ್ಥ­ಹೀರಿಕೊಳ್ಳುತ್ತಾನೆ? ಬಣ್ಣಗಳ­ನ್ನೇಕೆ ಗುರುತಿಸುಧಿತ್ತಾನೆ? ಈ ಪ್ರಶ್ನೆಗಳಿಗೀಗ ಕೋಲ್ಕತ್ತಾ ಮೂಲದ ಇಬ್ಬರು ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಇದಕ್ಕೆಲ್ಲ ನೆರವಾ­ಗು ವುದು ಕಣ್ಣೊಳಗಿನ “ಫೋವಿಯಾ’ ಭಾಗ!

Advertisement

ನರವಿಜ್ಞಾನ ತಜ್ಞರಾದ ರೇಣುಕಾ ಸಿನ್ಹಾ ಮತ್ತು ಮೃಣಾಲಿನಿ ಹೂನ್‌ ಈ ಕುರಿತು ಸಂಶೋಧನೆ ನಡೆಸಿದ್ದು, ಮುಖವನ್ನು ಗುರುತಿಸುವ, ಅಕ್ಷರಗಳನ್ನು ಓದುವ ಕಲೆ ಹೋಮೋ ಸೇಪಿಯನ್ಸ್‌ಗೆ ಬಂದಿದೆ ಎಂದಾ­ದರೆ ಇದಕ್ಕೆ ಕಾರಣ ಮೆದುಳಿನ ಯಾವುದೋ ಕೋಶವಲ್ಲ. ಕಣ್ಣಿನ ರೆಟಿನಾ ಭಾಗದಲ್ಲಿರುವ ಫೋವಿಯಾ ಎಂಬ ತಗ್ಗು ಪ್ರದೇಶ! 

ಓದುವಾಗ, ಬಣ್ಣ ಗುರುತಿಸುವಾಗ, ಕಂಪ್ಯೂಟರ್‌ ನೋಡುವಾಗ ಫೋವಿಯಾ­ದಲ್ಲಿನ ಸೆಲ್ಯುಲರ್‌ ಕೋಶದಲ್ಲೂ ಏರಿಳಿತ­ಆಗುತ್ತಿರುತ್ತವೆ. ಸಾಮಾನ್ಯವಾಗಿ ವಯಸ್ಸಾಧಿಗುತ್ತಾ ಹೋದಂತೆ ಕಣ್ಣಿನ ಅಕ್ಷಿಪಟಲದ ಅವನತಿ ಆಗುತ್ತದೆ. ಆಗ ಫೋವಿಯಾ ಕೂಡ ಕೆಲಸ ಮಾಡುವುದು ಕಡಿಮೆ. ಈ ಕಾರಣ ದಿಂದ ವಯಸ್ಸಾದವರು ಆಪ್ತರ ಮುಖ ಗುರುತಿಸುವುದಿಲ್ಲ ಎನ್ನುತ್ತಾರೆ ತಜ್ಞರು.

ದೊಡ್ಡದಾದ ಸಂಗತಿಯನ್ನು, ಕಿರಿದಾಗಿ ಗ್ರಹಿಸುವಲ್ಲಿ ಇದರ ಪಾತ್ರ ಬಹಳ ಹಿರಿದು. ಜ್ಞಾನಗ್ರಹಿಕೆ ಅಂಗ ಕೇವಲ ಮೆದುಳಷ್ಟೇ ಅಲ್ಲ ಎಂಬುದು ಈ ಮೂಲಕ ಜಾಹೀರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next