ಮಣಿಪಾಲ: ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ಸ್‌ನಿಂದ ಖರೀದಿಸಿರುವ 36 ಯುದ್ಧ ವಿಮಾನಗಳ ಪೈಕಿ ಎರಡನೇ ಬ್ಯಾಚ್ ರಫೇಲ್ ಫೈಟರ್ ಜೆಟ್‌ಗಳು ಅಕ್ಟೋಬರ್‌ನಲ್ಲಿ ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ.
ಮೊದಲ ಬ್ಯಾಚ್‌ನಲ್ಲಿ 5 ವಿಮಾನಗಳು ಜುಲೈ 29ರಂದು ಹರಿಯಾಣದ ಅಂಬಾಲ ವಾಯುನೆಲೆಗೆ ಆಗಮಿಸಿದ್ದರೆ, ಎರಡನೇ ಬ್ಯಾಚ್‌ನಲ್ಲಿ 4 ವಿಮಾನಗಳು ಆಗಮಿಸಲಿವೆ.
ಮೊದಲ ಬ್ಯಾಚ್‌ನ ರಫೇಲ್ ಅನ್ನು ಸೇನೆಗೆ ಅಧಿಕೃತವಾಗಿ ನಿಯೋಜಿಸಿದ ಬಳಿಕ ಇವುಗಳು ಭಾರತಕ್ಕೆ ಆಗಮಿಸಲಿವೆ.
ಮೊದಲ ಹಂತದಲ್ಲಿ ಆಗಮಿಸಿದ 5 ವಿಮಾನಗಳನ್ನು ಸೆಪ್ಟೆಂಬರ್ 10ರಂದು ಸೇನೆಗೆ ಅಧಿಕೃತವಾಗಿ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ. ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯ ಅತಿಥಿಯಾಗಿ ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲೆ ಅವರನ್ನು ಆಹ್ವಾನಿಸಲಾಗಿದೆ.
ಭಾರತದ ಆಹ್ವಾನಕ್ಕೆ ಫ್ರಾನ್ಸ್ ರಕ್ಷಣಾ ಸಚಿವರು ಒಪ್ಪಿರುವುದಾಗಿ ಮೂಲಗಳನ್ನು ಉದ್ದೇಶಿಸಿ ʼದಿ ಪ್ರಿಂಟ್’ ವರದಿ ಮಾಡಿದೆ.
ಮೂಲಗಳ ಪ್ರಕಾರ ರಾಜನಾಥ್ ಸಿಂಗ್ ರಷ್ಯಾ ಪ್ರವಾಸದಿಂದ ಹಿಂದಿರುಗಿದ ಅನಂತರ ರಫೇಲ್ ಅನ್ನು ಸೇನೆಗೆ ಸೇರಿಸುವ ಯೋಜನೆ ಇದೆ. ಸೆಪ್ಟೆಂಬರ್ 4ರಿಂದ ಸೆಪ್ಟೆಂಬರ್ 6ರ ವರೆಗೆ ರಾಜನಾಥ್ ರಷ್ಯಾದಲ್ಲಿ ಇರಲಿದ್ದಾರೆ. ಅಲ್ಲಿ ಶಾಂಘೈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಫ್ರಾನ್ಸ್‌ನಿಂದ ರಫೆಲ್ ವಿಮಾನ ಜುಲೈ 29ರಂದು ಭಾರತವನ್ನು ತಲುಪಿತ್ತು.
ಭಾರತವು 2016ರಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಫ್ರೆಂಚ್ ಸರಕಾರದೊಂದಿಗೆ ನಡೆದ 59,000 ಕೋಟಿ ರೂ.ಗಳ ಒಪ್ಪಂದ ಇದಾಗಿದೆ.
ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಷನ್ ತಯಾರಿಕೆಯ ವಿಮಾನ. ಫ್ರಾನ್ಸ್ ಇದನ್ನು ಪ್ರಮುಖವಾಗಿ ಬಳಕೆ ಮಾಡುತ್ತದೆ. ವಾಯು, ನೆಲ, ಜಲದ ಮೇಲಿನ ದಾಳಿಗೆ ಬಳಕೆ ಹೀಗೆ ಬಹೋಪಯೋಗಿಯಾದ ಯುದ್ಧವಿಮಾನ. ಒಟ್ಟು 12 ಮಾದರಿಗಳನ್ನು ಇದು ಹೊಂದಿದ್ದು, ಅತಿ ಸುಧಾರಿತ ವಿನ್ಯಾಸದ್ದಾಗಿದೆ. ಓರ್ವ ಪೈಲಟ್ ಮತ್ತು ಇಬ್ಬರು ಪೈಲಟ್ ಚಾಲನೆ ಮಾಡಬಹುದಾದ ಮಾದರಿಗಳನ್ನು ಹೊಂದಿದೆ. ಸ್ಟೀಲ್ತ್ (ರಾಡಾರ್‌ಗಳ ಕಣ್ಣಿಗೆ) ಸಿಗದ ರೀತಿಯ ತಂತ್ರಜ್ಞಾನ ಇದರಲ್ಲಿದ್ದು, ಆರ್‌ಬಿಇ2 ಸುಧಾರಿತ ರಾಡಾರ್ ವ್ಯವಸ್ಥೆ ಇದೆ. ಸಂಪೂರ್ಣ ಗ್ಲಾಸ್ ಕಾಕ್‌ಪಿಟ್ ಹೊಂದಿದ್ದು, ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಮಾಹಿತಿಯನ್ನು ಕೊಡುತ್ತದೆ. ವಿಶ್ವದಲ್ಲೇ ಅತಿ ಸುಧಾರಿತ ಏವಿಯಾನಿಕ್ಸ್‌ಗಳನ್ನು ಹೊಂದಿದೆ. ಎರಡು ಸ್ನೆಕ್ಮಾ ಎಂ88-2 ಟರ್ಬೋಫ್ಯಾನ್ ಎಂಜಿನ್ ಹೊಂದಿದೆ.
ಅತ್ಯಾಧುನಿಕ
ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್ ವಿಮಾನವನ್ನು ನಿರ್ಮಿಸಿದೆ. ಇದು ಎರಡು ಎಂಜಿನ್‌ಗಳನ್ನು ಹೊಂದಿದೆ. 2 ಎಕ್ಸ್ ಎಸ್‌ಎನ್‌ಇಸಿಎಂಎ ಎಂ88 2 ಟರ್ಬೋಫ್ಯಾನ್ಸ್ ಹೊಂದಿದ್ದು, ಯುದ್ಧ ಸಾಮರ್ಥ್ಯ, 24500 ಕೆ.ಜಿ. ಭಾರ ಹೊರುವ ಸಾಮರ್ಥ್ಯ 1850 ಕಿ.ಮೀ. ಹೊಂದಿದೆ. ಗಂಟೆಗೆ 2,222.6 ವೇಗದೊಂದಿಗೆ ಹಾರಾಟ ನಡೆಸಲಿದೆ. 3704 ಕಿ.ಲೋ. ಮೀಟರ್ ಹಾರಾಟ ನಡೆಸುವ ಸಾಮರ್ಥ್ಯ ಇದಕ್ಕಿದೆ. 15.27 ಮೀಟರ್ ಉದ್ದ ಇದ್ದು, ವಿಂಗ್ ಲೆಂಥ್ 10.58 ಮೀಟರ್, ಎತ್ತರ 5.34 ಮೀ. ಇದೆ. ನಿಮಿಷಕ್ಕೆ 12 ಫೀಟ್ ಎತ್ತರಕ್ಕೆ ರಾಕೆಟ್ ಮಾದರಿಯಲ್ಲಿ ಚಿಮ್ಮುವ ಸಾಮರ್ಥ್ಯವನ್ನು ಹೊಂದಿದೆ. ಲ್ಯಾಂಡ್ ಆಗಲು ವಿಸ್ತಾರವಾದ ರನ್‌ವೇ ಬೇಕಾಗಿಲ್ಲ.
30 ಎಂ.ಎಂ. ಕೆನಾನ್ ಗನ್, 6 ವಾಯು ದಾಳಿ ನಡೆಸುವ ಕ್ಷಿಪಣಿಗಳು, ನೆಲದಾಳಿಗೆ 3 ಲೇಸರ್ ಗೈಡೆಡ್ ಬಾಂಬ್‌ಗಳು, 6 ಮೈಕ ಕ್ಷಿಪಣಿಗಳು, ನ್ಯೂಕ್ಲಿಯರ್ ದಾಳಿಗೆ 6 ಮೈಕ ಕ್ಷಿಪಣಿಗಳನ್ನು ಹೊಂದಿದೆ. ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್‌ಗಳನ್ನು ಸ್ಪೆಕ್ಟ್ರಾ ಸಿಸ್ಟಂನಲ್ಲಿರುವ ಸೆನ್ಸರ್‌ಗಳು ಗ್ರಹಿಸುತ್ತವೆ. 1,800 ಕಿ.ಮಿ. ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನ.