Advertisement

ಸವಾಲುಗಳ ನಡುವೆ ಅಸ್ಥಿತ್ವದ ಹುಡುಕಾಟ

10:46 PM Jul 02, 2019 | mahesh |

ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ತಮ್ಮ ಅಭಿಪ್ರಾಯವನ್ನು ಪ್ರಕಟಿಸಲು ಆಗದ ಒಂದು ಕಾಲಘಟ್ಟವಿತ್ತು. ಅಲ್ಲಿ ಸ್ತ್ರೀಯರ ಮಾತು, ಬರವಣಿಗೆಗಳಿಗೆ ಯಾವುದೇ ಬೆಲೆಯಿರುತ್ತಿರಲಿಲ್ಲ. ಮುಂದೆ ಸಮಾಜ ಬೆಳೆಯುತ್ತ ಹೋಯಿತು. ಅದರಂತೆ ಚಿಂತನೆಗಳೂ ಬದಲಾಗುತ್ತಾ ಹೋದವು. ಪಾಶ್ಚಾತ್ಯರಲ್ಲಿ ಹುಟ್ಟಿಕೊಂಡ ಸ್ತ್ರೀವಾದಿ ಎಂಬ ಸಾಹಿತ್ಯ ಪರಿಕಲ್ಪನೆ ಭಾರತದಲ್ಲೂ ಕಾಣಿಸಿಕೊಂಡಿತು. ಅದರ ಸವಾಲುಗಳು ಹಾಗೂ ವಿಮರ್ಶೆಯನ್ನು ಒಂದೇ ಪುಸ್ತಕದಲ್ಲಿ ಸಂಪಾದಿಸಿ ಕೊಟ್ಟ ಕೀರ್ತಿ ತೇಜಸ್ವಿನಿ ನಿರಂಜನ ಹಾಗೂ ಸೀಮಂತಿನಿ ನಿರಂಜನರಿಗೆ ಸಲ್ಲುತ್ತದೆ. ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಎಂಬ ಪುಸ್ತಕದಲ್ಲಿ ಇದರ ಪರಿಕಲ್ಪನೆಯನ್ನು ವಿವರಿಸಿದ್ದಾರೆ.

Advertisement

••ಘಟನೆ: 1
ಸ್ತ್ರೀವಾದ ಎಂಬ ಪರಿಕಲ್ಪನೆಯನ್ನು ವಿವರಿಸುತ್ತಾ ಆ ಪದದಲ್ಲಿರುವ ಗೊಂದಲಗಳಿಗೆ ಉತ್ತರವನ್ನು ಹೀಗೆ ಹೇಳುತ್ತಾರೆ. ಸ್ತ್ರೀವಾದವೆಂದರೆ ಏನು ಎನ್ನುವುದನ್ನು ಸ್ಥೂಲವಾಗಿ ವಿವರಿಸುವುದು ಸೂಕ್ತ. ಸ್ತ್ರೀವಾದವು ಪುರುಷಪ್ರಧಾನ ಮತ ಮತ್ತು ಸಂರಚನೆಗಳನ್ನು ವಿಮರ್ಶಿಸುತ್ತದೆ. ಪ್ರಚಲಿತ ಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಅದು ಈ ಬಗೆಯ ವಿಮರ್ಶೆಯನ್ನು ಮುಂದಿಡುತ್ತದೆ. ಇಲ್ಲಿನ ಗ್ರಹಿತವೆಂದರೆ ಪುರುಷ ಪ್ರಧಾನತೆಯ ನಿರ್ದಿಷ್ಟ ಚಾರಿತ್ರಿಕ ಸನ್ನಿವೇಶ‌ಗಳ ಫ‌ಲವೇ ಹೊರತು ಸಹಜವಾದುದೇನೂ ಅಲ್ಲ.

••ಘಟನೆ: 2
ಮಹಿಳೆಯರಿಂದ ರಚಿತವಾಗಿದ್ದ ಕೃತಿಗಳೂ ಜನಮನ್ನಣೆ ಗಳಿಸಿರುವುದನ್ನು ಹೀಗೆ ವಿವರಿಸುತ್ತಾರೆ. ಮುದ್ದುಪಳನಿಯ ಕಾಲದಲ್ಲಿ ಅವಳ ಕೃತಿಯನ್ನು ತಿರಸ್ಕರಿಸಲಾಗಿತ್ತು ಎನ್ನುವುದಕ್ಕೆ ಯಾವ ಪುರಾವೆಗಳಿಲ್ಲ. ರಾಜಸ್ಥಾನದಲ್ಲಿ ಅವಳ ಕೃತಿಗಳು ಮನ್ನಣೆ, ಮೆಚ್ಚುಗೆಗಳಿಗೆ ಪಾತ್ರವಾಗಿದ್ದವು ತಿಳಿದು ಬರುತ್ತದೆ.

••ಘಟನೆ: 3
ಕನ್ನಡ ಸಾಹಿತ್ಯದಲ್ಲಿ ಸ್ತ್ರೀಪರ ದೃಷ್ಟಿಯನ್ನು ವಿವರಿಸುತ್ತಾ ಕನ್ನಡ ಸಾಹಿತ್ಯದಲ್ಲಿ ಪರಂಪರಾಗತವಾಗಿ ಬಂದ ಸಾಂಪ್ರದಾಯಿಕ ಸ್ತ್ರೀ ಮಾಲ್ಯಗಳು ಅನೇಕ ಶತಮಾನಗಳವರೆಗೆ ಸ್ಥಾಯಿಯಾಗಿಯೇ ಉಳಿದಿದ್ದವು. ನವೋದಯ ಕಾಲದಲ್ಲಿ ಸ್ತ್ರೀ ಸುಧಾರಣಾ ಚಳುವಳಿಯು ತಲೆಯೆತ್ತಿತು.•

••ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement
Advertisement

Udayavani is now on Telegram. Click here to join our channel and stay updated with the latest news.

Next