Advertisement

ಜಗತ್ತನ್ನೇ ಬೆರಗುಗೊಳಿಸಿದ ಶಿಲ್ಪಿ ಜಕಣಾಚಾರಿ

11:35 AM Jan 29, 2019 | |

ಯಾದಗಿರಿ: ತನ್ನದೇ ಆದ ಕಲಾಶೈಲಿಯಿಂದ ಇಡಿ ಜಗತ್ತೇ ಬೆರಗುಗೊಳಿಸುವಂತಹ ಶಿಲ್ಪಗಳ ಕೆತ್ತನೆಯಿಂದ ಭಾರತದ ಕೀರ್ತಿ ಹೆಚ್ಚಿಸಿದ ಮಹಾನ್‌ ಶಿಲ್ಪಿ ಜಕಣಾಚಾರಿ ಎಂದು ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ ಹೇಳಿದರು.

Advertisement

ನಗರದ ಬಡಿಗೇರ ಓಣಿಯ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಕರ್ನಾಟಕ ಶಿಲ್ಪಕಲೆಗಳ ತವರು ಎಂದು ಹೆಸರು ಬರಲು ಅಮರಶಿಲ್ಪಿ ಜಕಣಾಚಾರಿಯವರ ಪ್ರತಿಭೆಯ ಕೂಡ ಮೊದಲಾಗಿದೆ. ಶಿಲ್ಪಿಗಳು ತಮ್ಮ ಚಾಕಚಕ್ಯತೆಯಿಂದ ಕೆತ್ತನೆ ಶೈಲಿಯಿಂದ ನಿರ್ಮಿಸಿದ ಶಿಲೆಗಳು ಜನರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಕಲ್ಲಿನಲ್ಲಿ ಕೆತ್ತಿದ ಸಹಸ್ರಾರು ವರ್ಷಗಳ ಮೂರ್ತಿಗಳು ಇನ್ನೂ ತಮ್ಮ ಕಳೆ ಕಳೆದುಕೊಳ್ಳದೇ ಇರುವುದು ಕಲಾವಿದನ ನೈಪುಣ್ಯತೆ ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಜಗದ್ಗುರು ಮೌನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ ಮಾತನಾಡಿ, ವಿಶ್ವಕರ್ಮ ಸಮಾಜದವರು ದೇಶದ ಕಲೆಗೆ ಅತ್ಯಂತ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ರಾಜು ಪತ್ತಾರ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಆಚರಣೆ ನಮಗೆ ಹೆಮ್ಮೆ. ಇದು ಕೇವಲ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಅಲ್ಲ; ಬದಲಾಗಿ ನಮ್ಮ ಸಮಾಜದ ಶಿಲ್ಪಿಗಳಿಗೆ ನೀಡುವ ಅತ್ಯುನ್ನತ ಗೌರವವಾಗಿದೆ ಎಂದು ಹೇಳಿದರು. ನಗರಸಭೆ ಸದಸ್ಯ ಅಂಬಯ್ಯ ಶಾಬಾದಿ, ನಿವೃತ್ತ ತಹಶೀಲ್ದಾರ್‌ ಸಿದ್ಲಿಂಗಪ್ಪ ನಾಯಕ, ಸುಭಾಷ ಹೆಡಗಿಮದ್ರಾ ಮಾತನಾಡಿದರು.

Advertisement

ತಾಲೂಕು ಅಧ್ಯಕ್ಷ ಶಿವಣ್ಣ ಹೂನೂರು ಅಧ್ಯಕ್ಷತೆವಹಿಸಿದ್ದರು. ಇದೇ ವೇಳೆ ತಿಂಥಣಿ ಮೌನೇಶ್ವರ ಜಾತ್ರೆಯ ಭಿತ್ತಪತ್ರ ಬಿಡುಗಡೆಗೊಳಿಸಲಾಯಿತು.

ಇದಕ್ಕೂ ಮುನ್ನ ಬಡಿಗೇರ ಓಣಿಯಿಂದ ಗಾಂಧಿ ವೃತ್ತ, ಚಕ್ರಕಟ್ಟಾ ಮಾರ್ಗವಾಗಿ ಮೈಲಾಪುರ ಬೇಸ್‌ನ ಕಾಳಿಕಾದೇವಿ ಮಂದಿರದವರೆಗೆ ಭಾಜಾ ಭಜಂತ್ರಿ, ಮಾತೆಯರಿಂದ ಕಳಸ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳೊಂದಿಗೆ ನಡೆದ ಅದ್ಧೂರಿ ಮೆರವಣಿಗೆ ಪುನಃ ಕಾಳಿಕಾದೇವಿ ದೇವಸ್ಥಾನ ತಲುಪಿತು.

ಮೌನೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜಶೇಖರ ವಿಶ್ವಕರ್ಮ, ಉಪಾಧ್ಯಕ್ಷ ಮನೋಹರ ವಿಶ್ವಕರ್ಮ, ಸೂಗಪ್ಪ ವಿಶ್ವಕರ್ಮ, ಸಂಗಮೇಶ್ವರ ಯರಗೋಳ, ಅಶೋಕ ಸುತಾರ, ಭಾಗಪ್ಪ ದೇವದುರ್ಗ, ಮೌನೇಶ ಹಲಕಟ್ಟಿ, ಶಿವಾನಂದ ವಿಶ್ವಕರ್ಮ, ಮಲ್ಲಿಕಾರ್ಜುನ ಕಂಬಾರ, ಶರಣು ಹಂಗರಗಿ, ಬಸವರಾಜ ಹಾರರಗೇರಿ, ಹಣಮಂತ್ರಾಯ ಉಳ್ಳೆಸೂಗೂರು, ಸಂಗಮೇಶ ಕಂಬಾರ, ಕ್ಯಾದಿಗೆಪ್ಪ ವಿಶ್ವಕರ್ಮ, ಲಕ್ಷ್ಮೀಕಾಂತ ಮಾಮನಿ, ವಿಶ್ವನಾಥ ಶಾಬಾದಿ, ಚಂದ್ರಶೇಖರ ವಿಶ್ವಕರ್ಮ, ಕಾಂತಪ್ಪ ಹೆಡಗಿಮದ್ರಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next