Advertisement

ಬಸ್‌ ಓಡಿಸುತ್ತಲೇ ಮೂರ್ಛೆ ಹೋದ ಶಾಲಾ ಬಸ್‌ ಚಾಲಕ… 66 ಮಕ್ಕಳ ಜೀವ ಉಳಿಸಿದ 7 ನೇ ತರಗತಿ ಬಾಲಕ

05:17 PM Apr 28, 2023 | Team Udayavani |

ಮಿಷಿಗನ್‌: ಶಾಲಾ ಮಕ್ಕಳನ್ನು ತುಂಬಿದ್ದ ಬಸ್‌ನ ಚಾಲಕನೊಬ್ಬ ಬಸ್‌ ಚಲಿಸುತ್ತಿರುವಾಗಲೇ ಮೂರ್ಛೆ ಹೋಗಿದ್ದು ಇದನ್ನು ಕಂಡ 7 ನೇ ತರಗತಿ ಬಾಲಕನೊಬ್ಬ ತಕ್ಷಣವೇ ಜಾಗೃತನಾಗಿ ಬಸ್‌ ನಿಲ್ಲಿಸಿದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದೆ. ಇದೀಗ ಬಸ್‌ ಚಾಲಕ ಮೂರ್ಛೆ ಹೋದಾಗ ಬಾಲಕ ತೋರಿದ ಸಮಯಪ್ರಜ್ಙೆಯ ವೀಡಿಯೋ ಬಸ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಬಾಲಕನ ಶೌರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಇದನ್ನೂ ಓದಿ: Jiah Khan case: ನಟ ಸೂರಜ್ ಪಾಂಚೋಲಿ ಖುಲಾಸೆ: ಮುಂಬೈ ಸಿಬಿಐ ಕೋರ್ಟ್​ ಆದೇಶ 

ಸುಮಾರು 66 ಮಕ್ಕಳನ್ನು ತುಂಬಿದ್ದ ಶಾಲಾ ಬಸ್ಸೊಂದನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ದಿಢೀರ್‌ ಅಸ್ವಸ್ಥಗೊಂಡು ಪ್ರಜ್ಙೆ ತಪ್ಪಿದ್ದನ್ನು ಕಂಡ ಬಾಲಕ ತಕ್ಷಣ ಆತನ ಬಳಿ ಬಂದು ಬಸ್ಸಿನ ಸ್ಟೀರಿಂಗ್‌ನ್ನು ಹಿಡಿದು ಬಸ್ಸನ್ನು ನಿಲ್ಲಿಸುತ್ತಾನೆ. ಬುಧವಾರ ಅಮೇರಿಕದ ಮಿಷಿಗನ್‌ ನಗರದಲ್ಲಿ ನಡೆದ ಈ ಘಟನೆಯ ವೀಡಿಯೊವನ್ನು ಶಾಲಾ ಆಡಳಿತ ಮಂಡಳಿ ಶುಕ್ರವಾರ ಬಿಡುಗಡೆ ಮಾಡಿದ್ದು, ಬಾಲಕನ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next