Advertisement

23ರಿಂದ ಸಹ್ಯಾದ್ರಿ ಉತ್ಸವ ಆರಂಭ

10:52 AM Jan 15, 2019 | |

ಶಿವಮೊಗ್ಗ: ಜ. 23ರಿಂದ 27ರವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದ ಅಂಗವಾಗಿ ಹಲವು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಹೆಲಿಕಾಪ್ಟರ್‌ ಮೂಲಕ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಸರು ಗದ್ದೆ ಓಟ, ಸೈಕಲ್‌ ಸ್ಪರ್ಧೆ, ಎತ್ತಿನಗಾಡಿ ಓಟ, ದೇಹದಾಡ್ಯರ್ ಸ್ಪರ್ಧೆ, ಲಾನ್‌ ಟೆನ್ನಿಸ್‌, ಈಜು, ಸ್ಕೇಟಿಂಗ್‌ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಬಸ್‌ ಟೂರ್‌ ಪ್ಯಾಕೇಜ್‌: ಉತ್ಸವದ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಬ್ಸಿಡಿ ದರದಲ್ಲಿ ಬಸ್‌ ಮೂಲಕ ಟೂರ್‌ ಪ್ಯಾಕೇಜ್‌ ಮಾಡಲಾಗಿದೆ. ಒಟ್ಟು 7 ಮಾರ್ಗಗಳನ್ನು ಮಾಡಲಾಗಿದ್ದು, ಕೇವಲ 100ರೂ. ದರ ನಿಗದಿಪಡಿಸಲಾಗಿದೆ. ಸೈನ್ಸ್‌ ಮೈದಾನದಿಂದ ಪ್ರತಿದಿನ ಮುಂಜಾನೆ 7.30ಕ್ಕೆ ಬಸ್‌ ಹೊರಟು ಸಂಜೆ 5.30ಕ್ಕೆ ವಾಪಸಾಗಲಿದೆ ಎಂದು ತಿಳಿಸಿದರು.

ಬಸ್‌ ಟೂರ್‌ ಮಾರ್ಗಗಳು: 1. ಶಿವಮೊಗ್ಗ, ಹರಕೆರೆ, ಗಾಜನೂರು, ಸಕ್ರೆಬೆ„ಲು, ಮಂಡಗದ್ದೆ, ಚಿಬ್ಬಲಗುಡ್ಡ, ಮೃಗವಧೆ, ಕುಪ್ಪಳ್ಳಿ, ಶಿವಮೊಗ್ಗ.

2. ಶಿವಮೊಗ್ಗ, ಸೂರಗೊಂಡನಕೊಪ್ಪ, ಅಂಜನಾಪುರ ಡ್ಯಾಂ, ಹುಚ್ಚರಾಯಸ್ವಾಮಿ ದೇವಸ್ಥಾನ, ಉಡತಡಿ, ಬಳ್ಳಿಗಾವೆ, ತೊಗರ್ಸಿ, ಶಿವಮೊಗ್ಗ.

Advertisement

3. ತ್ಯಾವರೆಕೊಪ್ಪ, ಮುದ್ದಿನಕೊಪ್ಪ, ಸಾಗರ ಮಾರಿಕಾಂಬ ದೇವಸ್ಥಾನ, ಇಕ್ಕೇರಿ, ಕೆಳದಿ, ಶ್ರೀಧರ ಆಶ್ರಮ, ವರದಹಳ್ಳಿ, ಜೋಗ, ಶಿವಮೊಗ್ಗ.

4. ಶಿವಮೊಗ್ಗ, ಕೋಡೂರು, ಕಾರಣಗಿರಿ, ನಗರಕೋಟೆ, ನಿಟ್ಟೂರು, ಸಿಗಂದೂರು, ಶಿವಮೊಗ್ಗ.

5. ಶಿವಮೊಗ್ಗ, ಹರಕೆರೆ, ಗಾಜನೂರು, ಸಕ್ರೆಬೈಲು, ಮಂಡಗದ್ದೆ, ತೀರ್ಥಹಳ್ಳಿ ರಾಮೇಶ್ವರ, ಕುಂದಾದ್ರಿ, ಆಗುಂಬೆ, ಶಿವಮೊಗ್ಗ.

6. ಶಿವಪ್ಪ ನಾಯಕ ಅರಮನೆ, ಕೋಟೆ ಆಂಜನೇಯ ದೇವಸ್ಥಾನ, ಗಾಜನೂರು ಜಲಾಶಯ, ಸಕ್ರೆಬೈಲು, ಕೂಡ್ಲಿ, ಸೇಕ್ರೆಡ್‌ ಹಾರ್ಟ್‌ ಚರ್ಚ್‌, ತ್ಯಾವರೆಕೊಪ್ಪ, ಮುದ್ದಿನಕೊಪ್ಪ ಟ್ರೀ ಪಾರ್ಕ್‌, ಶಿವಮೊಗ್ಗ.

ಹೆಲಿಟೂರಿಸಂ: ಶಿವಮೊಗ್ಗ ನಗರದ ವೈಮಾನಿಕ ಪ್ರವಾಸಕ್ಕಾಗಿ ಉತ್ಸವದ ದಿನಗಳಲ್ಲಿ ಇದೇ ಮೊದಲ ಬಾರಿಗೆ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ ಎಂದರು.

ನೋಂದಣಿಗೆ ಮನವಿ: ಕ್ರೀಡೆಗಳ ಕುರಿತಾದ ಮಾಹಿತಿ ಹಾಗೂ ನೋಂದಣಿಗಾಗಿ ಲೋಕೇಶ್‌ 9483778002, ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಶಿವಲಿಂಗು 8762778402, 08182-255293, ಹೆಲಿಟೂರ್‌ ಬುಕ್ಕಿಂಗ್‌ಗಾಗಿ ಚಂದನ್‌ 9742038039, ಬಸ್‌ಟೂರ್‌ಗಾಗಿ ದರ್ಶನ್‌ 9591522903 ಸಂಪರ್ಕಿಸಿ ಬುಕ್ಕಿಂಗ್‌ ಮಾಡುವಂತೆ ಅವರು ಕೋರಿದರು.

ಅಪರ ಜಿಲ್ಲಾಧಿಕಾರಿ ಅನುರಾಧಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹನುಮನಾಯ್ಕ, ಯುವಜನಸೇವಾ ಮತ್ತು ಕ್ರೀಡಾಧಿಕಾರಿ ರಮೇಶ್‌, ಜಿಲ್ಲಾ ಉದ್ಯೋಗಾಧಿಕಾರಿ ಕಲಂದರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next