Advertisement
ಹತ್ತೂಂಬತ್ತನೇ ಶತಮಾನದಲ್ಲಿ ಪೆರ್ಮನ್ನೂರು-ತೊಕ್ಕೊಟ್ಟು-ಉಳ್ಳಾಲ ಪರಿಸರದ ಜನರು, ದೇರಳಕಟ್ಟೆ ಸಮೀಪದ ಪಾನೀರ್ ಇಗರ್ಜಿಯಲ್ಲಿ ದೇವರನ್ನು ಆರಾಧಿಸುತ್ತಿದ್ದರು. ಸುಮಾರು 300ಕ್ಕೂ ಅಧಿಕ ಕುಟುಂಬಗಳು ಈ ಪ್ರದೇಶದಿಂದ ಆರಾಧನೆಗೆ ತೆರಳುತ್ತಿದ್ದರು. 20ನೇ ಶತಮಾನದ ಆರಂಭದಲ್ಲಿ ಜನರ ಅನುಕೂಲಕ್ಕೋಸ್ಕರ ಬಬ್ಬುಕಟ್ಟೆಯಲ್ಲಿ ಒಂದು ಚಿಕ್ಕ ಪ್ರಾರ್ಥನ ಮಂದಿರ ಕಟ್ಟಲಾಯಿತು. ಹಲವು ವರ್ಷಗಳು ಬಬ್ಬುಕಟ್ಟೆಯ ಪ್ರಾರ್ಥನ ಮಂದಿರದಲ್ಲಿ ಆರಾಧನಾ ಕಾರ್ಯ ನಡೆಯುತ್ತಿದ್ದು, ಸುಸಜ್ಜಿತ ಪ್ರಾರ್ಥನ ಮಂದಿರ ಸ್ಥಾಪನೆಯ ಉದ್ದೇಶದಿಂದ ಈಗಿರುವ ಪೆರ್ಮನ್ನೂರು ಪ್ರದೇಶದಲ್ಲಿ ಚರ್ಚ್ ಸ್ಥಾಪಿಸುವ ಮಹತ್ಕಾರ್ಯಕ್ಕೆ ಸ್ಥಳೀಯ ಭಕ್ತರು ಆಸಕ್ತಿ ತೋರಿಸಿದರು.
ಪೆರ್ಮನ್ನೂರಿನಲ್ಲಿ 1913ರಲ್ಲಿ ಚರ್ಚ್ ಕಟ್ಟುವ ಈ ಕೆಲಸ ಆರಂಭವಾಯಿತು. ನಿರ್ಮಾಣ ಕಾರ್ಯ ಮುಗಿದು 1918
ಫೆ. 1ರಂದು ಮಂಗಳೂರು ಧರ್ಮ ಕ್ಷೇತ್ರದ ಬಿಷಪರಿಂದ್ ಈ ಚರ್ಚ್‌ಗೆ ಅಧಿಕೃತ ಮನ್ನಣೆ ನೀಡಿ ವಂ| ಫಾ| ಎಸ್. ವಿ. ರೆಬೆಲ್ಲೊ ಅವರನ್ನು ಚಾಪ್ಲೈನ್ ರಾಗಿ ನೇಮಿಸಲಾಯಿತು. ಶಿಕ್ಷಣಕ್ಕೂ ಕೊಡುಗೆ
ಈ ಪರಿಸರದಲ್ಲಿ ಶಿಕ್ಷಣ ಸಂಸ್ಥೆಗಳು ಇಲ್ಲದೇ ಇದ್ದ ಸಂದರ್ಭದಲ್ಲಿ 1928ರಲ್ಲಿ ಹೋಲಿ ಏಂಜಲ್ಸ್ ಪ್ರಾಥಮಿಕ ಶಾಲೆ
ಪ್ರಾರಂಭಿಸಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿದೆ. ಇಲ್ಲಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಇಂದಿಗೂ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
Related Articles
Advertisement
ವಸತಿ, ವೈದ್ಯಕೀಯ ನೆರವುಚರ್ಚ್ ಶತಮಾನೋತ್ಸವ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಸಮಾಜದಲ್ಲಿ ನೊಂದವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ಬಡವರಿಗೋಸ್ಕರ 12 ಮನೆಗಳ ನಿರ್ಮಾಣ, ಸಮುದಾಯದ ಮನೆ ಮಠಗಳ ಜೀರ್ಣೋದ್ಧಾರ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಮೆಡಿಕಲ್ ಫಂಡ್ ಹಾಗೂ ಶಿಕ್ಷಣ ನಿಧಿಯನ್ನು ವೃದ್ಧಿಸಿ ಇನ್ನೂ ಹೆಚ್ಚು ಜನರಿಗೆ ಸಹಾಯ, ವೃದ್ದ ಜೀವಗಳಿಗೆ ಮತ್ತು ರೋಗಿಗಳಿಗೆ ಅವರ ಮನೆಗೆ ತೆರಳಿ ವೈದ್ಯಕೀಯ ಸೇವೆ, ಈಗಿರುವ 13 ಸ್ವಸಹಾಯ ಸಂಘಟನೆಗಳನ್ನು 30ಕ್ಕೆ ಹೆಚ್ಚಿಸುವ ಯೋಚನೆ, ಶಿಕ್ಷಣ ಕ್ಷೇತ್ರದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆಯೊದಿಗೆ ಸ್ನಾತಕೋತ್ತರ ಪದವಿ ಪ್ರಾರಂಭ ಸೇರಿದಂತೆ ಅನೇಕ ಯೋಜನೆಯನ್ನು ಹಾಕಿಕೊಂಡಿದೆ. ಸರ್ವಧರ್ಮ ಸಮ್ಮೇಳನದೊಂದಿಗೆ ಶತಮಾನೋತ್ಸವ
ಜನವರಿ ತಿಂಗಳ 19ರಿಂದ 21ರ ವರೆಗೆ ಪೆರ್ಮನ್ನೂರು ಚರ್ಚ್‌ನ ಶತಮಾನೋತ್ಸವ ನಡೆಯಲಿದ್ದು, ಜ.19ರಂದು ಚರ್ಚ್ ಅಧೀನದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಗುರುವಂದನೆ, ಜ.20ರಂದು ಸರ್ವ ಧರ್ಮ ಸಮ್ಮೇಳನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸೇರಂಪೊರ್ ಯುನಿವರ್ಸಿಟಿಯ ಉಪಕುಲಪತಿ ಅತೀ ವಂದನೀಯ ಜಾನ್ ಎಸ್. ಸದಾನಂದ, ಬಶೀರ್ ಮದನಿ ಕೂಳೂರು ಸೌಹಾರ್ದ ಸಂದೇಶ ನೀಡಲಿದ್ದಾರೆ. ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜ. 21ರಂದು ಶತಮಾನೋತ್ಸವ ಸಮಾರೋಪದಲ್ಲಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಪ್ರಮುಖರಿಗೆ ಆಹ್ವಾನ
ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳೊಂದಿಗೆ ಸರ್ವಧರ್ಮದವರೊಂದಿಗೆ ತೊಡಗಿಸಿಕೊಂಡಿರುವ ಈ ಪುಣ್ಯ ಕ್ಷೇತ್ರದ ಶತಮಾನೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದೊಂದಿಗೆ ಎಲ್ಲ ಧರ್ಮದ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಸರ್ವಧರ್ಮದ ಭಕ್ತರು ಭಾಗವಹಿಸಲಿದ್ದು, ಶತಮಾನೋತ್ಸವದ ಸಿದ್ಧತೆ ಸಮರೋಪಾದಿಯಾಗಿ ನಡೆಯುತ್ತಿದೆ.
– ವಂ| ಡಾ| ಜೆ.ಬಿ.ಸಲ್ದಾನ
ಧರ್ಮಗುರುಗಳು ಸಂತ
ಸೆಬಾಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರು