Advertisement

ಶ್ರೀ ಸಾಯಿಬಾಬಾರ ಪವಿತ್ರ ಪಾದುಕಾ ಮೆರವಣಿಗೆ

10:31 AM May 23, 2018 | Team Udayavani |

ಮಹಾನಗರ: ಶಿರ್ಡಿಯಿಂದ ಆಗಮಿಸಿದ ಶ್ರೀ ಸಾಯಿಬಾಬಾರ ಪವಿತ್ರ ಪಾದುಕೆಯನ್ನು ಮಂಗಳವಾರ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬಾ ಮಂದಿರಕ್ಕೆ ತರಲಾಯಿತು. ಶಿರ್ಡಿಯ ಶ್ರೀ ಸಾಯಿಬಾಬಾ ಸಂಸ್ಥಾನದ ಟ್ರಸ್ಟ್‌ ವತಿಯಿಂದ ಬಾಬಾ ಅವರು ಧರಿಸುತ್ತಿದ್ದ ಶ್ರೀ ಪಾದುಕೆಯನ್ನು ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಬಳಿಕ ಶರವು ದೇವಸ್ಥಾನಕ್ಕೆ ತಂದು ಅಲಂಕೃತ ರಥದಲ್ಲಿರಿಸಿ ಕೆ.ಎಸ್‌. ರಾವ್‌ ರಸ್ತೆ, ಎಂ.ಜಿ. ರಸ್ತೆ ಮೂಲಕ ಚಿಲಿಂಬಿಯ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದವರಗೆ ಮಂಗಳ ವಾದ್ಯ, ಕೊಂಬು, ಕಹಳೆ, ಭಜನ ತಂಡಗಳ ಮೆರವಣಿಗೆ ನಡೆಯಿತು.

Advertisement

ಶಿರ್ಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್‌ ಕುಮಾರ್‌ ದಾಸ್‌, ಕಾರ್ಪೊರೇಟರ್‌ಗಳಾದ ಕೇಶವ ಮರೋಳಿ, ಪುರುಷೋತ್ತಮ ಚಿತ್ರಾಪುರ, ಪ್ರಕಾಶ್‌ ಸಾಲ್ಯಾನ್‌, ಶಿರ್ಡಿಯ ಶ್ರೀ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಬಿಪಿನ್‌ ದಾದ ಪಾಟೀಲ್‌, ಎಂ.ಎಲ್‌. ಗಂಗಾವನೆ, ಬಿ.ಆರ್‌. ಜೋಷಿ, ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಲೀಲಾಕ್ಷ ಕರ್ಕೇರ, ರಣದೀಪ್‌ ಕಾಂಚನ್‌, ಜಗದೀಶ್‌ ಶೆಟ್ಟಿ ಬಿಜೈ, ಪ್ರತಾಪಚಂದ್ರ ಶೆಟ್ಟಿ, ಲಾವಣ್ಯ ವಿಶ್ವಾಸ್‌ ಕುಮಾರ್‌, ರಂಜನ್‌ ಶೆಟ್ಟಿ, ದಿನೇಶ್‌ ಶೆಟ್ಟಿ, ವಚನ್‌ ಮಣಾಯಿ, ರಂಜನ್‌ ದಿವ್ಯಜ್ಯೋತಿ ಉಪಸ್ಥಿತರಿದ್ದರು.

ಇಂದು ಪಾದುಕಾ ದರ್ಶನ
ಮೇ 23ರಂದು ಬೆಳಗ್ಗೆ 8ರಿಂದ ಉರ್ವ ಚಿಲಿಂಬಿಯ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸಾಯಿ ಪಾದುಕಾ ಪೂಜೆ ಬಳಿಕ ಪಾದುಕಾ ದರ್ಶನ ಆರಂಭವಾಗಲಿದೆ. ಬೆಳಗ್ಗೆ 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಕದ್ರಿ ಯೋಗಿಮಠದ ಶ್ರೀ ನಿರ್ಮಲ್‌ನಾಥ್‌ ಜೀ ಆಶೀರ್ವಚನ ನೀಡಲಿದ್ದಾರೆ. ಮಧ್ಯಾಹ್ನ 12.30ರಿಂದ ಶ್ರೀ ಸಾಯಿ ಪಾದುಕಾ ದರ್ಶನ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4ರಿಂದ ಪಟ್ಲ ಸತೀಶ್‌ ಶೆಟ್ಟಿ ಮತ್ತು ಬಳಗದವರಿಂದ ಶ್ರೀ ಸಾಯಿ ಯಕ್ಷಾರಾಧನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next