Advertisement
ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್ ಅವರು “ಚಿತ್ರಕಲೆಯಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಕೈಬೆರಳುಗಳಿಗೆ ವ್ಯಾಯಾಮ ಸಿಗುವ ಜತೆಗೆ ಮಾನಸಿಕ ಸದೃಢತೆಯೂ ಉಂಟಾಗುತ್ತದೆ. ಇಂತಹ ಚಟುವಟಿಕೆಗಳಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲೂ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
Related Articles
Advertisement
ಕಲೆ ಪ್ರವಾಸೋದ್ಯಮದ ಭಾಗಉಡುಪಿ ಉತ್ತಮ ಪ್ರವಾಸಿ ತಾಣ. ಚಿತ್ರಕಲೆ ಸೇರಿದಂತೆ ವಿವಿಧ ರೀತಿಯ ಕಲೆ ಕೂಡ ಪ್ರವಾಸೋದ್ಯಮದ ಭಾಗವಾಗಿದೆ. ಇಲ್ಲಿನ ವೈಶಿಷ್ಟéಗಳನ್ನು ಚಿತ್ರಗಳ ಮೂಲಕ ಪ್ರವಾಸಿಗರಿಗೆ ತೋರಿಸಿಕೊಡುವ ಪ್ರಯತ್ನಗಳು
ನಡೆಯಬೇಕಿದೆ. ಇಂತಹ ಕಲೆಗಳ ಪ್ರದರ್ಶನಕ್ಕೆ ಸುವ್ಯವಸ್ಥಿತ ಕೇಂದ್ರವೂ ನಿರ್ಮಾಣವಾಗಬೇಕು.
– ಮನೋಹರ್ ಶೆಟ್ಟಿ , ಅಧ್ಯಕ್ಷರು ಆ್ಯಕ್ಟ್ 24 ಕಲಾವಿದರು ಭಾಗಿ
ಅಕ್ರಾಲಿಕ್ ಕ್ಯಾನ್ವಾಸ್‌ನ 18 ಹಾಗೂ ಚಾರ್ಕೋಲ್ ಪೇಪರ್ ಮಾಧ್ಯಮದ 6 ಕಲಾಕೃತಿಗಳು ಹಳ್ಳಿಸೊಗಡನ್ನು ಕಟ್ಟಿಕೊಡುತ್ತವೆ. ಕಲಾಕೃತಿಗಳನ್ನು ಬೈಹುಲ್ಲಿನ ಚಪ್ಪರ, ಮಾವಿನ ಎಲೆಯ ತೋರಣದ ನಡುವೆ ಪ್ರದರ್ಶಿಸಲಾಗಿದೆ. ಅಕ್ಕಿಮುಡಿ ಕಟ್ಟುವುದು, ದನ-ಕರುಗಳೊಂದಿಗೆ ಸಾಗುವ ಮಹಿಳೆ, ಬೆಂಕಿ ಮಾಡುತ್ತಿರುವ ತಾಯಿ, ಲಗೋರಿ ಆಡುತ್ತಿರುವ ಹುಡುಗ, ಐಸ್‌ಕ್ಯಾಂಡಿ ಮಾರಾಟ, ಮಗುವಿಗೆ ಎಣ್ಣೆ ಸ್ನಾನ, ಬುಗುರಿ ತಿರುಗಿಸುತ್ತಿರುವ ಬಾಲಕ, ತೋರಣ ಕಟ್ಟುವುದು, ಓದುವ ಬಾಲಕಿ, ಮಡಲು ನೇಯುತ್ತಿರುವ ಚಿತ್ರಣಗಳಿವೆ. 19ರಿಂದ 75 ವರ್ಷ ವಯಸ್ಸಿನ 24 ಮಂದಿ ಕಲಾವಿದರ ಕೃತಿಗಳು ಈ ಪ್ರದರ್ಶನದಲ್ಲಿವೆ.