Advertisement

ಆರೆಸ್ಸೆಸ್‌ ಯಾವತ್ತೂ ಮೀಸಲು ಪರ: ಹೊಸಬಾಳೆ

09:10 AM Jan 22, 2017 | Team Udayavani |

ಜೈಪುರ: ಜೈಪುರ ಸಾಹಿತ್ಯ ಸಮ್ಮೇ ಳನದಲ್ಲಿ ಮೀಸಲಾತಿ ಮುಕ್ತ ಭಾರತಕ್ಕಾಗಿ ಕರೆಕೊಟ್ಟು ವಿವಾದ ಸೃಷ್ಟಿಸಿದ್ದ ಆರೆಸ್ಸೆಸ್‌ ಚಿಂತಕ ಮನಮೋಹನ್‌ ವೈದ್ಯ ಹೇಳಿಕೆಗೆ ತೇಪೆ ಹಚ್ಚುವ ಕೆಲಸವನ್ನು ಆರೆಸ್ಸೆಸ್‌ ಮಾಡಿದೆ.  ಸಂವಿಧಾನ ರೂಪಿಸಿರುವ ಮೀಸಲಾತಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಯಾವುದೇ ತಕ ರಾರಿಲ್ಲ. ಮೀಸಲಾತಿ ಎಂದಿನಂತೆ ಮುಂದುವರಿಯುವ ನಿಲುವು ಆರೆಸ್ಸೆಸ್‌ನದಾಗಿದ್ದು, ವೈದ್ಯ ಅವರ ಹೇಳಿಕೆ ವೈಯಕ್ತಿಕ. ಇದಕ್ಕೆ ಸಂಘದ ಸಹಮತವಿಲ್ಲ ಎಂದು ಆರೆಸ್ಸೆಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

Advertisement

ಮೀಸಲಾತಿ ಕುರಿತು ಆರೆಸ್ಸೆಸ್‌ನ ನಿಲುವು ಸ್ಪಷ್ಟ. ಹುಟ್ಟು, ಲಿಂಗ ಅಥವಾ ಸಾಮಾ ಜಿಕ ಅಂಶವನ್ನು ಆಧರಿಸಿಯೇ ಸಂವಿಧಾನ
ಮೀಸಲಾತಿ ನೀಡಿದೆ. ವೈದ್ಯ ಅವರ ಹೇಳಿಕೆ ಯನ್ನು ವಿವಾದದಿಂದ ನೋಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮೀಸಲಾತಿಗೆ ಆರೆಸ್ಸೆಸ್‌ ಸದಾ ಬೆಂಬಲ ಸೂಚಿಸುತ್ತದೆ ಎಂದು ಶನಿವಾರ ಸಂಜೆ ವೀಡಿಯೋ ಸ್ಪಷ್ಟೀಕರಣ ನೀಡಿದ್ದಾರೆ.

ಈ ನಡುವೆ, ಮನಮೋಹನ ವೈದ್ಯ ಕೂಡ ಪತ್ರಿಕಾ ಹೇಳಿಕೆ ನೀಡಿ,  ಎಸ್‌ಸಿ-ಎಸ್‌ಟಿ, ಹಿಂದು ಳಿದ ವರ್ಗಗಳಿಗೆ ನೀಡಲಾದ 
ಮೀಸಲು ಮುಂದುವರಿಯ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯ ಅವರ ಹೇಳಿಕೆಯಿಂದ ಮುಂಬ ರುವ ಪಂಚರಾಜ್ಯಗಳ ವಿಧಾನಸಭಾ ಚುನಾ ವಣೆಯಲ್ಲಿ ಬಿಜೆಪಿಗೆ ದಲಿತ ವಿರೋಧಿ ಪಟ್ಟ ಸಿಗಲಿದೆ ಎಂದೇ ವಿಶ್ಲೇಷಿಸಲಾಗಿತ್ತು. ಬಿಜೆಪಿ ನಾಯಕರು ಕೂಡ ತೆರೆಮರೆಯಲ್ಲಿ ವೈದ್ಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದು,  ಚುನಾವಣೆ ವೇಳೆ ಈ ರೀತಿಯ ಹೇಳಿಕೆ ಬೇಕಿತ್ತೇ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next