Advertisement

Reels: ಪೊಲೀಸರ ಮುಂದೆ ಸಿಗರೇಟ್‌ ಸೇದಿ ರೀಲ್ಸ್‌ ಮಾಡಿದ ರೌಡಿ

01:19 PM Oct 21, 2023 | Team Udayavani |

ಬೆಂಗಳೂರು: ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದ ವೇಳೆ ಪೊಲೀಸರ ಮುಂದೆಯೇ ಸಿಗರೇಟ್‌ ಸೇದಿ ಅದನ್ನು ರೀಲ್ಸ್ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ ರೌಡಿಶೀಟರ್‌ನನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

Advertisement

ಕುಖ್ಯಾತ ರೌಡಿಶೀಟರ್‌ ರಾಹುಲ್‌ ಅಲಿಯಾಸ್‌ ಸ್ಟಾರ್‌ ರಾಹುಲ್‌ ಬಂಧಿತ.

ಆರೋಪಿಯು ಹಿಂದೊಮ್ಮೆ “ತಾಕತ್‌ ಇದ್ದರೆ ನನ್ನನ್ನು ಹಿಡಿಯಿರಿ’ ಎಂದು ಪೊಲೀಸರಿಗೆ ಅವಾಜ್‌ ವಾಕಿ ವಿಡಿಯೋಮಾಡಿದ್ದ. ಈ ವೇಳೆ ಆಗೀನ ಡಿಸಿಪಿ ಹರೀಶ್‌ ಪಾಂಡೆ ನೇತೃತ್ವದ ತಂಡವು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಇದಾದ ಬಳಿಕ ಪ್ರಕರಣವೊಂದಲ್ಲಿ ಬಂಧನಕ್ಕೊಳಗಾಗಿದ್ದ ಆತನನ್ನು ಇತ್ತೀಚೆಗೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೊರ ಕರೆತರುವಾಗ ಸಿಗರೇಟ್‌ ಸೇದಿ ಅದನ್ನು ಮೊಬೈಲ್‌ನಲ್ಲಿ ರೀಲ್ಸ್‌ ಮಾಡಿದ್ದ. ಇಷ್ಟಕ್ಕೆ ಸುಮ್ಮನಾಗದ ಆತ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದ. ಆರೋಪಿಯು ರೌಡಿ ಕುಳ್ಳು ರಿಝ್ವಾನ್ ಸಹಚರನಾಗಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆ ಯತ್ನ, ಸುಲಿಗೆ, ಡ್ರಗ್ಸ್‌ ಪ್ರಕರಣದಲ್ಲಿ ರಾಹುಲ್‌ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಕುಖ್ಯಾತ ರೌಡಿಶೀಟರ್‌ ರಾಹುಲ್‌ ಅಲಿಯಾಸ್‌ ಸ್ಟಾರ್‌ ರಾಹುಲ್‌ ಪೊಲೀಸ್‌ ಸಿಬ್ಬಂದಿ ಎದುರಿಗೆ ರಾಜಾರೋಷವಾಗಿ ಸಿಗರೇಟ್‌ ಸೇದಿ ರೀಲ್ಸ್‌ ಮಾಡುತ್ತಿದ್ದ. ಆದರೆ, ಸಿಬ್ಬಂದಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ನಿಂತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next