Advertisement

ಮಿಷನ್‌ 150 ತಲುಪಲು ಯುವಕರ ಪಾತ್ರ ಬಹುಮುಖ್ಯ

12:05 PM Mar 02, 2018 | Team Udayavani |

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 150+ ಗುರಿ ತಲುಪಬೇಕಾದರೆ ಯುವ ಮೋರ್ಚಾ ಕಾರ್ಯಕರ್ತರ ಪಾತ್ರ ಬಹು ಪ್ರಮುಖವಾಗಿದೆ ಎಂದು ಪಕ್ಷದ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

Advertisement

ನಗರದ ಪಕ್ಷದ ಕಚೇರಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಲಬುರಗಿ ವಿಭಾಗಮಟ್ಟದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 2018ರ ಈ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ 100ಕ್ಕೂ ಮೇಲ್ಪಟ್ಟು ಗ್ರುಪ್‌ ರಚಿಸಿ ಪ್ರತಿದಿನ ರಾಜ್ಯ ಕಾಂಗ್ರೆಸ್‌ ಸರಕಾರದ ವೈಫಲ್ಯಗಳನ್ನು, ಜನವಿರೋಧಿ ನೀತಿಗಳನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಜನಪರ ಯೋಜನೆಗಳ ಬಗ್ಗೆ ವ್ಯಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವೀಟರ್‌ಗಳ ಮುಖಾಂತರ ಅಭಿಯಾನ ನಡೆಸಬೇಕು ಹಾಗೂ ಕಾಂಗ್ರೆಸ್‌ ಶಾಸಕರಿರುವ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಎಸಗಿರುವ ಭ್ರಷ್ಟಾಚಾರ ಹಾಗೂ ವೋಟ್‌ಬ್ಯಾಂಕ್‌ ರಾಜಕಾರಣ ತಿಳಿ ಹೇಳಬೇಕು ಎಂದು ಕರೆ ನೀಡಿದರು.

ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ, ಮಹಿಪಾಲ ರೆಡ್ಡಿ ಮಾತನಾಡಿ, ರಾಜ್ಯ ಯುವಮೋರ್ಚಾ ಉಪಧ್ಯಕ್ಷ ಪರಶುರಾಮ ನಸಲವಾಯಿ, ಕಲಬುರಗಿ ಜಿಲ್ಲೆಯ ಮಿಶನ್‌-9, ಬೀದರ ಜಿಲ್ಲೆಯ ಮಿಶನ್‌ -6, ಯಾದಗಿರಿ ಜಿಲ್ಲೆಯ ಮಿಶನ್‌-4, ಗುರಿ ತಲುಪಬೇಕಾದರೆ, ಯುವ ಮೋರ್ಚಾ ಕಾರ್ಯಕರ್ತರು ಬರೀ ವಿಸಿಟಿಂಗ್‌ ಕಾರ್ಡ್‌ ನಾಯಕರಾಗದೆ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳನ್ನು ತಿಳಿಸುವ ನಿಷ್ಠಾವಂತ ಕಾರ್ಯಕರ್ತರಾಗಬೇಕೆಂದರು.

ಕಾರ್ಯಕಾರಣಿ ಸದಸ್ಯರಾದ ಸುಧೀರ ಬಳ್ಳಾರಿ, ಮಹಾನಗರ ಜಿಲ್ಲಾಧ್ಯಕ್ಷರಾದ ಮಲ್ಲು ಉದನೂರ, ಶ್ರೀನಿವಾಸ ದೇಸಾಯಿ, ಸುನೀಲ ಸಕಪಾಲ, ಪಂಚಯ್ಯ ಹಿರೇಮಠ, ಬೀದರ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಕಿರಣ ಪಾಟೀಲ್‌ ಯಾದಗಿರ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಕಾಂತ ಸುಬೇದಾರ, ಮನಮತ ಕಾರವಾಡ, ಕೈಲಾಸ ಪಾಟೀಲ್‌, ಸಚಿನ ನಿಗೂಡಗಿ, ನಾಗರಾಜ ಉಪಾಸೆ, ಶ್ರೀಧರ ಚೌವ್ಹಾಣ, ವೆಂಕಟೇಶ ಭಜಂತ್ರಿ, ಸಂತೋಷ ಹಾದಿಮನಿ, ಅಮಿತ ಚಿಡಗುಂಪಿ, ಮುರಗೇಂದ್ರ ರೆಡ್ಡಿ, ಅಂಬರೇಶ ಬುರ್ಲಿ, ಶಿವರಾಜ ಪಾಟೀಲ್‌ ಸೂಲಹಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next