Advertisement
ನಗರದ ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್‌ಸಿಸಿ ಡೇ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನಾಂಗವು ದೇಶವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ತರಬೇತಿಯ ಅವಶ್ಯಕತೆ ಇದೆ. ದೇಶಾಭಿಮಾನ ಬಹುಮುಖ್ಯ. ಯೌವನಾವಸ್ಥೆಯಲ್ಲಿ ನಾವು ಉತ್ತಮವಾದ ಆರೋಗ್ಯ ಹಾಗೂ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬೇಕು ಎಂದರು.
Related Articles
Advertisement
ಎನ್‌ಸಿಸಿ ಘಟಕ ವಿದ್ಯಾರ್ಥಿ ದೆಸೆಯಲ್ಲಿಯೇ ದೇಶಾಭಿಮಾನದ ಬೀಜವನ್ನು ಬಿತ್ತುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಸಿಸಿ ಅಧಿಕಾರಿ ಕ್ಯಾ|ಡಾ| ಮಹೇಶ ಗುರನಗೌಡರ, ಎನ್‌ಸಿಸಿ ಘಟಕವು ಹಲವಾರು ನೆಲೆಗಳಲ್ಲಿ ಕೆಡೆಟ್‌ಗಳಿಗೆ ತರಬೇತಿ ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದೆ. ಸಾಧನೆಗೆ ಸಾವಿರ ಮೆಟ್ಟಿಲುಗಳು ಉಂಟು. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ನಮಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ರಾಷ್ಟ್ರಮಟ್ಟದಲ್ಲಿ ಡಿಜಿ ಎನ್‌ಸಿಸಿ ಆಯೋಜಿಸಿದ್ದ ಇಂಟರ್ ಡೈರೆಕ್ಟರೇಟ್ ಶೂಟಿಂಗ್ ಚಾಂಪಿಯನ್‌ಶಿಪ್‌ದಲ್ಲಿ ಪಾಲ್ಗೊಂಡು ಅದ್ವಿತೀಯ ಸಾಧನೆಗೈದ ಸಿನಿಯರ್ ಕೆಡೆಟ್ ರೋಷನಿ ಮುಲಿಕ್ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಡಾ.ಎಂ.ಆರ್.ಬನಹಟ್ಟಿ, ಪ್ರಣವ್ ಕರಜಗಿ, ಅರುಣ ಜ್ಯೋತಿ, ಸತೀಶ, ಮೋಹನ್, ವಿನೋದ, ಪ್ರೇಮಾ, ಮಣಿಕಂಠ ಉಪಸ್ಥಿತರಿದ್ದರು. ಅದಿತಿ ಜಾಧವ ನಿರೂಪಿಸಿದರು. ರಾಘವೇಂದ್ರ ವಂದಿಸಿದರು.