ಕಾರ್ಕಳ: ದೇಶದ ಏಕತೆ, ಸಮಗ್ರತೆ ಚಿಂತನೆಯೊಂದಿಗೆ ಭಾರತೀಯ ಸೇವಾ ದಳ ಸಾಮಾಜಿಕ ಚಟುವಟಿಕೆಗಳಲ್ಲಿ ಹಿರಿದಾದ ಪಾತ್ರ ನಿರ್ವಹಿಸಿದೆ. ಇಲ್ಲಿನ ಶಿಸ್ತು ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿ ಎಂದು ವಿಧಾನಸಭಾ ವಿಪಕ್ಷ ಮುಖ್ಯ ಸಚೇತಕ ಸುನೀಲ್ ಕುಮಾರ್ ಹೇಳಿದರು.
ಜ. 4ರಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಭಾರತೀಯ ಸೇವಾ ದಳದ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳದ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು.
ತಾ.ಪಂ. ಅಧ್ಯಕ್ಷತೆ ಮಾಲಿನಿ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ವಿವೇಚನ ನಿಧಿಯಿಂದ
5 ಸಾವಿರ ರೂ.
ಭಾರತೀಯ ಸೇವಾದಳ ಕಾರ್ಯ ಚಟುವಟಿಕೆಗಳಿಗಾಗಿ ಅಧ್ಯಕ್ಷೆ ನೆಲೆಯಲ್ಲಿ ತಾ.ಪಂ. ಅಧ್ಯಕ್ಷರ ವಿವೇಚನ ನಿಧಿಯಿಂದ 5 ಸಾವಿರ ರೂ. ಬಿಡುಗಡೆ ಮಾಡುತ್ತೇನೆ ಎಂದು ಮಾಲಿನಿ ಜೆ. ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಪ್ರಭು, ಭಾರತೀಯ ಸೇವಾ ದಳದ ಉಡುಪಿ ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಹೆಗ್ಡೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿದ್ಧಪ್ಪ, ಭಾರತ ಸೇವಾ ದಳದ ತಾಲೂಕು ಕಾರ್ಯದರ್ಶಿ ಉಮೇಶ್, ರಮಾನಂದ ಶೆಟ್ಟಿ, ಸಂಜೀವ ದೇವಾಡಿಗ, ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.,
ಕೃಷ್ಣಪ್ಪ ಮೊಲಿ ಸ್ವಾಗತಿಸಿ, ಜಿಲ್ಲಾ ಸಂಘಟಕ ಪಕ್ಕೀರಗೌಡ ನಾ. ಹಳೆಮನಿ ನಿರೂಪಿಸಿದರು. ಎಂ.ಸಿ. ಶ್ರೀಧರ್ ಆಚಾರ್ ವಂದಿಸಿದರು.